ಬಜೆಟ್ ನಲ್ಲಿ ಈ ರೈತರಿಗೆ 8 ಸಾವಿರ ರೂಪಾಯಿ ಘೋಷಣೆ?

Written by Ramlinganna

Updated on:

Good news for Pmkisan Beneficiary ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಫೆಬ್ರವರಿ 1 ಕ್ಕೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ. ಏಕೆಂದರೆ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಪ್ರತಿ ವರ್ಷ ನೀಡಲಾಗುವ 6 ಸಾವಿರ ರೂಪಾಯಿಯನ್ನು 8 ಸಾವಿರಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹೌದು, ಪಿಎಂ ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಸಿಕೊಂಡ ರೈತರಿಗೆ ಇದೇ ತಿಂಗಳು 13ನೇ ಕಂತಿನ ಹಣ ಜಮೆಮಾಡುವ ಸಾಧ್ಯತೆಯಿತ್ತು. ಏಕೆಂದರೆ ಬಜೆಟ್ ನಲ್ಲಿ ಯೋಜನೆಯ ಹಣ ಹೆಚ್ಚಳ ಘೋಷಣೆ ಮಾಡಿ ರೈತರಿಗೆ ಗುಡ್ ನೀಡುವ ಸಾಧ್ಯತೆಯಿದೆ. ಹಾಗಾಗಿ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಜಮೆ ಮಾಡಲು ವಿಳಂಬ ಮಾಡಲಾಗುತ್ತಿದೆ ಎಂಬುದು ಮೂಲಗಳ ವರದಿಯಾಗಿದೆ.

ಇಕೆವೈಸಿ ಸಕ್ಸೆಸ್ ಆಗಿದೆಯೋ ಇಲ್ಲವೋಚೆಕ್ ಮಾಡುವುದು ಹೇಗೆ?

ರೈತರು ಒಂದು ವೇಳೆ ಈಗಾಗಲೇ ಇಕೆವೈಸಿ ಮಾಡಿಸಿದ್ದರೆ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ನೋಡಿ ಮಾಹಿತಿ.

ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://exlink.pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ಒಂದು ವೇಳೆ ನಿಮ್ಮ ಇಕೆವೈಸಿ ಪ್ರಕ್ರಿಯೆ ಸಕ್ಸೆಸ್ ಆಗಿದ್ದರೆ ಇಕೆವೈಸಿ ಸಕ್ಸೆಸ್ ಫುಲ್ ಎಂಬ ಮೆಸೆಜ್ ಕಾಣುತ್ತದೆ. ಒಂದು ವೇಳೆ ಇಕೆವೈಸಿ ಆಗದಿದ್ದರೆ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಏನಿದು ಪಿಎಂ ಕಿಸಾನ್ ಯೋಜನೆ?

ರೈತರ ಆರ್ಥಿಕ ಅಭಿವೃದ್ಧಗಾಗಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಪ್ರತಿ ವರ್ಷ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಯಂತೆ 6 ಸಾವಿರ ರೂಪಾಯಿನ್ನ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಈಗಾಗಲೇ 12 ಕಂತುಗಳ ರೈತರ ಖಾತೆಗೆ ಜಮೆ ಮಾಡಲಾಗಿದೆ. ಈಗ 13ನೇ ಕಂತಿನಗಾಗಿ ಕಾಯುತ್ತಿರುವ ರೈತರಿಗೆ ಸಂತಸದ ಸುದ್ದಿ ಸಿಗುವ ಸಾಧ್ಯತೆಯಿದೆ.

ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿಸಿದ ಫಲಾನುಭವಿಗಳು ಕೂಡಲೇ ಇಕೆವೈಸಿ ಮಾಡಿಸಿಕೊಳ್ಳಬೇಕು. ಇಕೆವೈಸಿ ಮಾಡಿಸುವುದು ತಡವಾದರೆ ನಿಮಗೆ 13ನೇ ಕಂತಿನ ಹಣ ಜಮೆಯಾಗುವುದಿಲ್ಲ. ಏಕೆಂದರೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇಕೆವೈಸಿ ಕಡ್ಡಾಯಗೊಳಿಸಲಾಗಿದೆ. ಹಾಗಾಗಿ ರೈತರು ಕೂಡಲೇ ಇಕೆವೈಸಿ ಮಾಡಿಸಿಕೊಳ್ಳಬೇಕು.

Good news for Pmkisan Beneficiary ಪಿಎಂ ಕಿಸಾನ್ ಯೋಜನೆಯ ಹಣ ಯಾವ ತಿಂಗಳಲ್ಲಿ ಜಮೆಯಾಗುತ್ತದೆ?

ಪಿಎಂ ಕಿಸಾನ್ ಯೋಜನೆಯ ಹಣವನ್ನು ಮೂರು ಕಂತುಗಳಲ್ಲಿ ಜಮೆ ಮಾಡಲಾಗುತ್ತದೆ. ಮೊದಲನೇ ಕಂತು ಏಪ್ರೀಲ್ – ಜುಲೈ ತಿಂಗಳ ಮಧ್ಯದಲ್ಲಿ ಜಮೆ ಮಾಡಲಾಗುವುದು. ಎರಡನೇ ಕಂತು ಆಗಸ್ಟ್ ನವೆಂಬರ್ ತಿಂಗಳ ಮಧ್ಯದಲ್ಲಿ ಜಮೆ ಮಾಡಲಾಗುವುದು. ಅದೇ ರೀತಿ ಮೂರನೇ ಕಂತು ಡಿಸೆಂಬರ್ – ಮಾರ್ಚ್ ತಿಂಗಳ ಮಧ್ಯದಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುವುದು.

ಇದನ್ನೂ ಓದಿ:ಈ ಗ್ರೀನ್ ಪಟ್ಟಿಯಲ್ಲಿದ್ದ ರೈತರಿಗೆ ಮಾತ್ರ ಸಾಲಮನ್ನಾ: ನಿಮ್ಮ ಹೆಸರಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಪಿಎಂಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇಲ್ಲಿಯವರೆಗೆ ಜಮೆಯಾದ ಎಲ್ಲಾ ಕಂತುಗಳು ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಹಾಗಾಗಿ ಈ ಯೋಜನೆಯಡಿ ನೋಂದಣಿಯಾದ ಎಲ್ಲಾ ರೈತರಿಗೆ ನೇರವಾಗಿ ಅವರ ಖಾತೆಗೆ ಜಮೆಯಾಗುತ್ತಿದೆ. ಇಲ್ಲದಿದ್ದರೆ ಇದಕ್ಕಿಂತ ಮುಂಚಿತವಾಗಿ ಸರ್ಕಾರದ ಯೋಜನೆಗಳ ಲಾಭ ಮಧ್ಯವರ್ತಿಗಳ ಪಾಲಾಗುತ್ತಿತ್ತು

Leave a Comment