ಈ ಗ್ರೀನ್ ಪಟ್ಟಿಯಲ್ಲಿದ್ದ ರೈತರಿಗೆ ಮಾತ್ರ ಸಾಲಮನ್ನಾ

Written by Ramlinganna

Updated on:

Croploan waiver Green list ಬಿಡುಗಡೆಯಾಗಿರುವ ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಗ್ರೀನ್ ಲಿಸ್ಟ್ ನಲ್ಲಿದ್ದರೆ ಮಾತ್ರ ನಿಮಗೆ ಸಾಲಮನ್ನಾ ಭಾಗ್ಯ ಸಿಕ್ಕಿದೆ ಎಂದರ್ಥ. ಗ್ರೀನ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿನ ಮುಂದೆ ನೋ ಇದ್ದರೆ ನೀವು ಸಾಲಮನ್ನಾ ಪಟ್ಟಿಯಲ್ಲಿದ್ದರೂ ಸಾಲಮನ್ನಾ ಭಾಗ್ಯ ನಿಮಗ ಸಿಗುವುದಿಲ್ಲ. ಏಕೆಂದರೆ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ವೆರಿಫೈ ಆಗಿಲ್ಲ. ಅಥವಾ ಇನ್ನಾವುದೋ ತಾಂತ್ರಿಕ ದೋಷದಿಂದಾಗಿ ನಿಮಗೆ ಸಾಲಮನ್ನಾ ಸಿಕ್ಲಿಲ್ಲ.  ನೀವು ಗ್ರೀನ್ ಲಿಸ್ಟ್ ನಲ್ಲಿದ್ದೀರೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ನಿಮ್ಮ ಬಳಿಯಿರುವ ಮೊಬೈಲ್ ನಲ್ಲೇ ನೀವು ಸಾಲಮನ್ನಾ ಗ್ರೀನ್ ಲಿಸ್ಟ್ ನಲ್ಲಿದ್ದೀರೋ ಇಲ್ಲವೋ ಎಂಬುದನ್ನು ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

Croploan waiver Green list ಸಾಲಮನ್ನಾ ಗ್ರೀನ್ ಲಿಸ್ಟ್ ನಲ್ಲಿ ಹೆಸರಿರುವುದನ್ನು ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ವಾಣಿಜ್ಯ ಬ್ಯಾಂಕಿನಲ್ಲಿ ಸಾಲ ಪಡೆದವರು ತಮ್ಮ ಹೆಸರು ಸಾಲಮನ್ನಾ ಗ್ರೀನ್ ಲಿಸ್ಟ್ ನಲ್ಲಿರುವುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/Revenue/LoanWaiverReportBANKNew?ServiceId=2059&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಮಾದರಿ ಕಾಲಂನಲ್ಲಿ ರೈತ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಹಾಗೂ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಂಡು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು  ನಂತರ ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು.  ಆಗ ಸಾಲಮನ್ನಾ ಪಟ್ಟಿ ಓಪನ್ ಆಗುತ್ತದೆ. ಅಲ್ಲಿ ಗ್ರಾಮ, ರೈತರ ಹೆಸರು, ತಂದೆಯ ಹೆಸರು, ಬ್ಯಾಂಕ್ ಶಾಖೆಯ ಹೆಸರು, ಬ್ಯಾಂಕ್ ಖಾತೆ, ನಿಮ್ಮ ಸಾಲ ಯಾವ ಪ್ರಕಾರದ್ದು ಹಾಗೂ ನೀವು ಎಷ್ಟು ಸಾಲ ಪೆಡಿದಿದ್ದೀರಿ ಹಾಗೂ ಹಸಿರು ಪಟ್ಟಿಯಲ್ಲಿ ನೀವಿದ್ದರೆ ಅಲ್ಲಿ Yes ಇರುತ್ತದೆ. ಇಲ್ಲದಿದ್ದರೆ No ಇರುತ್ತದೆ. ನಿಮ್ಮ ಹೆಸರು ಗ್ರೀನ್ ಲಿಸ್ಟ್ ನಲ್ಲಿ ಏಕಿಲ್ಲ ಎಂಬ ಕಾರಣವೂ ಅಲ್ಲಿ ಕಾಣುತ್ತದೆ. ಆ ಆಧಾರದ ಮೇಲೆ ನಿಮ್ಮ ಹೆಸರು ಗ್ರೀನ್ ಲಿಸ್ಟ್ ನಲ್ಲಿ ಏಕೆ ಸೇರಿಸಿಲ್ಲ ಎಂಬುದನ್ನು ಚೆಕ್ ಮಾಡಬಹುದು. ಅದರ ಮುಂದೆ ಸಾಲಮ್ನಾ ವಿತರಿಸಲಾಗಿದೆಯೋ ಇಲ್ಲವೋ ಹಾಗೂ ಎಷ್ಟು ಸಾಲ ಮನ್ನಾ ನೀಡಲಾಗಿದೆ ಎಂಬ ಮಾಹಿತಿಯೂ ಇರುತ್ತದೆ.

ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಂದ ಸಾಲ ಪಡೆದವರು ಹೀಗೆ ಚೆಕ್ ಮಾಡಿ

ನೀವು ಒಂದು ವೇಳೆ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಂದ ಸಾಲ ಪಡೆದಿದ್ದರೆ ನಿಮ್ಮ ಸಾಲಮನ್ನಾ ಪಟ್ಟಿಯಲ್ಲಿ ಗ್ರೀನ್ ಲಿಸ್ಟ್ ನಲ್ಲಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು

https://mahitikanaja.karnataka.gov.in/Revenue/LoanWaiverReportPACSNew?ServiceId=2060&Type=TABLE&DepartmentId=2066

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆ ಮಾದರಿ ಕಾಲಂನಲ್ಲಿ ನೀವು ರೈತ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನಿಮ್ಮ ಹೆಸರು, ಬ್ಯಾಂಕಿನ ಹೆಸರು, ಸಾಲದ ಪ್ರಕಾರ, ಎಷ್ಟು ಸಾಲ ಪಡೆಯಲಾಗಿದೆ. ಹಾಗೂ ಹಸಿರು ಪಟ್ಟಿಯಲ್ಲಿದ್ದರೆ ಯಸ್, ಇಲ್ಲದಿದ್ದರೆ ನೋ ಎಂದಿರುತ್ತದೆ. ಹಸಿರು ಪಟ್ಟಿಯಲ್ಲಿ ನಿಮ್ಮ ಹೆಸರು ಏಕಿಲ್ಲ ಎಂಬ ಕಾರಣವನ್ನು ಸಹ ನಮೂದಿಸಲಾಗಿರುತ್ತದೆ. ಈ ಆಧಾರ ಮೇಲೆ ನೀವು ನಿಮ್ಮ ಸಾಲ ಮನ್ನಾ ಏಕಾಗಿಲ್ಲ ಎಂಬುದನ್ನು ಮೊಬೈಲ್ ನಲ್ಲೇ ತಿಳಿದುಕೊಳ್ಳಬಹುದು.  ಒಂದು ವೇಳೆ ಸಾಲ ಮನ್ನಾ ಆಗಿದ್ದರೆ ಎಷ್ಟು ಸಾಲ ಮನ್ನಾ ಆಗಿದೆ ಚೆಕ್ ಮಾಡಬಹುದು.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

Leave a Comment