ಕುರಿ ಸಾಕಾಣಿಕೆ ಮಾಡಲಿಚ್ಚಿಸುವ ರೈತರಿಗೆ ಸಂತಸದ ಸುದ್ದಿ.  ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ 10 ದಿನಗಳ ಕಾಲ ಉಚಿತವಾಗಿ ಕುರಿ ಸಾಕಾಣಿಕೆ ತರಬೇತಿ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕಲಬುರಗಿಯ ಎಸ್.ಬಿ.ಐ ಗ್ರಾಮೀಣ ಸ್ವಯಂ ಉದ್ಯೋಗತರಬೇತಿ ಸಂಸ್ಥೆಯಲ್ಲಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಏಪ್ರೀಲ್ 4 ರಿಂದ 13 ರವರೆಗೆ ಉಚಿತವಾಗಿ 10 ದಿನಗಳ ಕಾಲ ಕುರಿಮತ್ತು ಆಡು ಸಾಕಾಣಿಕೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಎಸ್.ಬಿ.ಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

10 ದಿನಗಳ ಕಾಲ ನಡೆಯುವ ಈ ತರಬೇತಿ ಸಂದರ್ಭದಲ್ಲಿ ಉಚಿತವಾಗಿ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುವುದು. ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಮತ್ತು ಬರೆಯಲು ಬರಬೇಕು. ಅಭ್ಯರ್ಥಿಗಳು 18 ರಿಂದ 45 ವಯೋಮಾನದೊಳಗಿರಬೇಕು. ಬಿಪಿಎಲ್, ಅಂತ್ಯೋದಯ ರೇನ್ ಕಾರ್ಡ್ ಹೊಂದಿರಬೇಕು. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಸಂಸ್ಥೆಯಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಮಾರ್ಚ್21 ರೊಳಗಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತರಬೇತಿ ಸಂಸ್ಥೆಯಲ್ಲಿ ಏಪ್ರೀಲ್ 1 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ3.30 ಗಂಟೆಯವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ರೈತರು ತರಬೇತಿಯ ಸಂಸ್ಥೆಗೆ ಹಾಗೂ ಮೊಬೈಲ್ ನಂಬರ್ 9243602888, 9886781239, ಹಾಗೂ 9900135705 ಗೆ ಸಂಪರ್ಕಿಸಲು ಕೋರಲಾಗಿದೆ.

ಕುರಿ ಸಾಕಾಣಿಕೆ ತರಬೇತಿಯಲ್ಲಿ ಏನೇನು ತರಬೇತಿ ನೀಡಲಾಗುವುದು ನಿಮಗೆ ಗೊತ್ತೇ?

ಸರ್ಕಾರದ ವತಿಯಿಂದ ರೈತರಿಗೆ ಹಮ್ಮಿಕೊಳ್ಳುವ ಕುರಿ, ಮೇಕೆ ಸಾಕಾಣಿಕೆಯಲ್ಲಿ  ಕುರಿ ಮೇಕೆಗಳ ತಳಿಗಳ ಬಗ್ಗೆ ಮಾಹಿತಿ ನೀಡಲಾಗುವುದು. ಕುರಿ ಮತ್ತು ಮೇಕೆಗಳಿಗೆ ಸೂಕ್ತ ವಸತಿ ನಿರ್ಮಾಣ ಹಾಗೂ ಅವುಗಳ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗುವುದು.  ಕುರಿಗಳ ತಳಿ ಸಂವರ್ಧನೆ ಹಾಗೂ ಗರ್ಭದ ಕುರಿ ಮೇಕೆಗಳ ಮತ್ತು ಮರಿಗಳ ಆರೈಕೆ ಹೇಗೆ ಮಾಡಬೇಕು ಎಂಬುದನ್ನು ತಿಳಿಸಲಾಗುವುದು.

ಕುರಿ ಮತ್ತು ಮೇಕೆಗಳ ಸೂಕ್ತ ಮೇವಿನ ಬೆಳೆಗಳು, ಪ್ರಾದೇಶಿಕ ಮೇವು ಉತ್ಪಾದನಾ ಕ್ಷೇತ್ರಕ್ಕೆ ಭೇಟಿ ಹಾಗೂ ಮೇವು ಪ್ರಾತ್ಯಕ್ಷತಾ ತಾಕುಗಳ ವೀಕ್ಷಣೆ ಮಾಡಿಸಲಾಗುವುದು. ಉಣ್ಣೆ ಕತ್ತರಿಸುವ ವಿಧಾನ, ಚರ್ಮ ಸಂಸ್ಕರಣೆ ವಿಧಾನ ಹಾಗೂ ಕುರಿ ಉತ್ಪನ್ನಗಳ ಮೌಲ್ಯ ವರ್ಧನೆ, ಮೇಕೆ ಸಾಕಾಣಿಕೆಯಲ್ಲಿನ ವಿಶೇಶ ನಿರ್ವಹಣಾ ಪದ್ಧತಿಗಳ ಬಗ್ಗೆ ತಿಳಿಸಲಾಗುವುದು.

ಇದನ್ನೂ ಓದಿ : ರೈತರಿಗೆ ಬೆಳೆ ವಿಮೆಯ ಸ್ಟೇಟಸ್, ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕೆಂಬ ಮಾಹಿತಿ ನೋಡಬೇಕೆ? ಇಲ್ಲಿದೆ ಮಾಹಿತಿ

ಕುರಿ ಮತ್ತು ಮೇಕೆಗಳಿಗೆ ಸಮತೋಲನ ಆಹಾರ ಪೂರೈಕೆ ಬಗ್ಗೆ ಮಾಹಿತಿ ನೀಡಲಾಗುವುದು. ರಸಮೇವು, ಅಜೋಲ್ಲಾ ಮತ್ತು ಜಲಕೃಶಿ ಮೇವು ಉತ್ಪಾದನೆ ಮಾಡುವುದರ ಬಗ್ಗೆ ತಿಳಿಸಲಾಗುವುದು. ಕುರಿ ಮೇಕೆಗಳ ಸಾಕಾಣಿಕೆಗೆ ನೀಡಲಾಗುವ ಸಾಲಸೌಲಭ್ಯ ಹಾಗೂ ಸಹಾಯಧನದ ಲಭ್ಯತೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು.ಕುರಿ ಮತ್ತು ಮೇಕೆಗಳಿಗೆ ಬರುವ ಸಾಮಾನ್ಯ ರೋಗಗಳು ಹಾಗೂ ಅವುಗಳ ಪರಿಹಾರ ಕ್ರಮದ ಬಗ್ಗೆ ಹೇಳಿಕೊಡಲಾಗುವುದು. ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಮಾರುಕಟ್ಟೆ ಬಗ್ಗೆ ಹಾಗೂ ರೈತರು ಕುರಿ ಸಾಕಾಣಿಕೆಯಲ್ಲಿ ಅನುಭವಿಸುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು.

ಪಶುಪಾಲಕರಿಗೆ ಉಚಿತ ಸಹಾಯವಾಣಿ

ಪಶುಪಾಲನೆ ಮಾಡುವ ರೈತರಿಗಾಗಿ ಸರ್ಕಾರವು ಉಚಿತ ಸಹಾಯವಾಣಿಯನ್ನು ಆರಂಭಿಸಿದೆ.  24*7 ಗಂಟೆಗಳ ಕಾಲ ಈ ಉಚಿತ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಸರ್ಕಾರದ 8277 100 200 ಗೆ ಕರೆ ಮಾಡಿ ದಿನದ 24 ಗಂಟೆಗಳ ಕಾಲ ಪ್ರಾಣಿ ಕಲ್ಯಾಣ ಸಹಾಯವಾಣಿಯಿಂದ ರೈತರು ಮಾಹಿತಿ ಪಡೆಯಬಹುದು. ಈ ಉಚಿತ ಸಹಾಯಾಣಿಗೆ ಕರೆ ಮಾಡಿದರೆ ಸಾಕು ರೈತರು ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ಸಂಪೂರ್ಣ ಮಾಹಿತಿ ಪಡೆಯಬಹುದು.

Leave a Reply

Your email address will not be published. Required fields are marked *