ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕೆಂಬ ಮಾಹಿತಿ ನೋಡಬೇಕೆ?

Written by By: janajagran

Updated on:

crop insurance all information in Samrakshane ಬೆಳೆ ವಿಮೆ ಮಾಡಿದ ರೈತರಿಗೆ ಸರ್ಕಾರದ ಸಂರಕ್ಷಣೆ (Samrakshane) ವೆಬ್ ತಂತ್ರಾಂಶದಲ್ಲಿ ಬೆಳೆ ವಿಮೆ ಜಮೆ ಸ್ಟೇಟಸ್ ನೊಂದಿಗೆ ಹಲವಾರು ಮಾಹಿತಿಗಳು ಒಂದೇ ವೇದಿಕೆಯಲ್ಲಿ ದೊರೆಯುತ್ತದೆ.  ಬೆಳೆ ವಿಮೆ ಮಾಡಿಸಲಿಚ್ಚಿರುವ ರೈತರಿಗೆ ಯಾವ ಬೆಳೆಗೆ ಎಷ್ಟು ವಿಮಾ ಕಂತಿನ ಹಣ ಕಟ್ಟಬೇಕು. ಸರ್ಕಾರದ ಕಂತಿನ ಹಣವೆಷ್ಟು, ಬೆಳೆ ವಿಮೆ ಹಣ ಎಷ್ಟು ಜಮೆಯಾಗುತ್ತದೆ, ವಿಮಾ ಕಂಪನಿಗಳು ಹೆಸರಿನ ಮಾಹಿತಿ ಸಹ ದೊರೆಯುತ್ತದೆ.

ರೈತರ ವಿಮಾ ಕಂತಿನ ಹಣ ರೈತರು ಪಡೆದ ಬೆಳೆ ಸಾಲದಲ್ಲಿಯೇ ಕಡಿತವಾಗುತ್ತದೆ. ಆದರೆ ಇದು ಬಹಳಷ್ಟು ರೈತರಿಗೆ ಗೊತ್ತಿರುವುದಿಲ್ಲ. ಈ ಮಾಹಿತಿ ರೈತರಿಗೆ ಗೊತ್ತಿದ್ದರೂ ಯಾವ ಕಂಪನಿಯಿಂದ ವಿಮಾ ಕಂತಿನ ಹಣ ಕಟ್ಟಾಗಿದೆ ಎಂಬ ಮಾಹಿತಿ ಗೊತ್ತಿರುವುದಿಲ್ಲ. ಇಂತಹ ರೈತರಿಗೆ ಸರ್ಕಾರದ ಸಂರಕ್ಷಣೆ ವೆಬ್ ಪೇಜ್ ನಲ್ಲಿ ಎಲ್ಲಾ ಮಾಹಿತಿ ದೊರೆಯುತ್ತದೆ.

ಒಮ್ಮೆ ರೈತರು ಸಂರಕ್ಷಣೆ ಪೇಜ್ಗೆ ಭೇಟಿ ನೀಡಿದರೆ ಸಾಕು, ಸರ್ವ ಮಾಹಿತಿಗಳನ್ನು ಮೊಬೈಲ್ ನಲ್ಲಿಯೇ ಮನೆಯಲ್ಲಿ ಕುಳಿತು ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ

ಬೆಳೆ ವಿಮೆಯ ಕುರಿತಂತೆ ಸರ್ವ ಮಾಹಿತಿಗಳನ್ನು ನೋಡಲು ರೈತರು ಈ https://www.samrakshane.karnataka.gov.in/publichome.aspx

ಲಿಂಕ್ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆಯ ಡ್ಯಾಶ್ ಬೋರ್ಡ್ ಓಪನ್ ಆದರೆ ಅಲ್ಲಿ ಸ್ಕಿಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಕನ್ನಡದಲ್ಲಿ ಮಾಹಿತಿ ನೋಡಬೇಕಾದರೆ ಕನ್ನಡ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಇಂಗ್ಲೀಷನಲ್ಲಿ ಮಾಹಿತಿ ನೋಡಬೇಕಾಗದೆ ಇಂಗ್ಲೀಷ್ ಆಯ್ಕೆ ಮಾಡಿಕೊಳ್ಳಬಹುದು.

crop insurance all information in Samrakshane ಬೆಳೆ ವಿಮೆಯ ಲೆಕ್ಕಾಚಾರ ನೋಡುವುದು ಹೇಗೆ?

ರೈತರು ಬೆಳೆ ವಿಮೆಯ ಪ್ರಿಮಿಯಂ ಲೆಕ್ಕಾಚಾರ ನೋಡಬೇಕಾದರೆ  ರೈತ ಎಂಬ ಕಾಲಂ ಕೆಳಗಡೆಯಿರುವ ಪ್ರಿಮಿಯಂ ಲೆಕ್ಕಾಚಾರದ ಮೇಲೆ ಕ್ಲಿಕ್ ಮಾಡಬೇಕು. ಆಗ ವರ್ಷ, ಋತು, ನಂತರ ಜಿಲ್ಲೆ ಬರುತ್ತದೆ. ಅಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಬೆಳೆ, ಬೆಳೆ ವಿಸ್ತೀರ್ಣ ಆಯ್ಕೆ ಮಾಡಿಕೊಂಡ ನಂತರ ಪ್ರಿಮಿಯಂ ವಿವರ ಮೇಲೆ ಕ್ಲಿಕ್ ಮಾಡಬೇಕು. ಆಗ  ವಿಮಾ ಮೊತ್ತ, ಒಟ್ಟು ವಿಮಾ ಮೊತ್ತ, ರೈತರು ಕಟ್ಟುವ ವಿಮೆ ಹಣ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಎಷ್ಟು ಎಂಬ ಮಾಹಿತಿ ಇರುತ್ತದೆ. ಈಗ  ಬೇಸಿಗೆ ಇರುವುದರಿಂದ ಕೆಲವು ಜಿಲ್ಲೆಗಳಲ್ಲಿ ಬೇಸಿಗೆ ಬೆಳೆ ಬಿತ್ತಲಾಗುತ್ತದೆ. ಹಾಗಾಗಿ ಅಂತಹ ಜಿಲ್ಲೆಗಳ ಬೇಸಿಗೆಯಲ್ಲಿ ಬಿತ್ತಲಾದ  ಬೆಳೆಗಳ  ವಿಮೆಯ ಮಾಹಿತಿ ನೋಡಬಹುದು.

ವಿಮೆ ಮಾಡಬಹುದಾದ ಬೆಳೆಗಳು

ವಿಮೆ ಮಾಡಬಹುದಾದ ಬೆಳೆಗಳ ಮಾಹಿತಿ ಪಡೆಯಬೇಕಾದರೆ ಜಿಲ್ಲೆ, ತಾಲೂಕು, ಹೋಬಳಿ ಗ್ರಾಮ ಆಯ್ಕೆ ಮಾಡಿಕೊಂಡ ನಂತರ ಪ್ರದರ್ಶಿಸು ಮೇಲೆ ಕ್ಲಿಕ್ ಮಾಡಬೇಕು. ಆಗ ಯಾವ ಯಾವ ಬೆಳೆಗಳು ವಿಮೆಯಲ್ಲಿ ಬರುತ್ತದೆ ಎಂಬ ಮಾಹಿತಿ ಕಾಣುತ್ತದೆ.

ಅರ್ಜಿ ಸ್ಟೇಟಸ್ ನೋಡುವುದು ಹೇಗೆ?

ಅರ್ಜಿ ಸ್ಥಿತಿ ಮೇಲೆ ಕ್ಲಿಕ್ ಮಾಡಿದರೆ ನೀವು ವಿಮೆಯ ಅರ್ಜಿ ಸ್ಟೇಟಸ್ ನೋಡಬಹುದು.  ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಂಡು ಮೊಬೈಲ್ ನಂಬರ್ ನಮೂದಿಸಿ ಕ್ಯಾಪ್ಚಾ ಕೋಡ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ : ಜಮೀನುಗಳ ಸರ್ವೆ ನಂಬರ್ ಸಹಿತ ಬಂಡಿದಾರಿ, ಹಳ್ಳಕೊಳ್ಳಗಳ ಮ್ಯಾಪ್ ಬೇಕೆ? ಇಲ್ಲಿದೆ ಮಾಹಿತಿ

ಆಗ  ಪ್ರಸಕ್ತ ವರ್ಷ ಹಾಗೂ ಕಳೆದ ವರ್ ಎಷ್ಟು ಹಣ ಜಮೆಯಾಗಿದೆ. ಪ್ರಸಕ್ತ ವರ್ಷದ ಅರ್ಜಿಯ ಸ್ಟೇಟಸ್ ಏನಿದೆ ಎಂಬುದನ್ನು ಚೆಕ್ ಮಾಡಬಹುದು.

ವಿಮಾ ಕಂಪನಿಗಳ ಹೆಸರು ನೋಡುವುದು ಹೇಗೆ?

ನಿಮ್ಮ ಜಿಲ್ಲೆಗೆ ಯಾವ ಯಾವ ವಿಮಾ ಕಂಪನಿಗಳಿವೆ ಎಂಬ ಮಾಹಿತಿ ನೋಡಬೇಕಾದರೆ Know your Insurance co ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆಗೆ ಯಾವ ಯಾವ ವಿಮಾ ಕಂಪನಿಗಳಿವೆ ಎಂಬುದನ್ನು ನೋಡಬಹುದು.

ವಿಮಾ ಕಂಪನಿಯ ಸಹಾಯವಾಣಿ

ರೈತರು ಬೆಳೆ ವಿಮೆಯ ಕುರಿತಂತೆ ಮಾಹಿತಿ ಪಡೆಯಬೇಕಾದರೆ 1800 180 1551ಗೆ ಕರೆ ಮಾಡಬೇಕು. ಆಗ ಕಿಸಾನ್ ಕಾಲ್ ಸೆಂಟರ್ ನ ಅಧಿಕಾರಿಗಳು ಕರೆ ಸ್ವೀಕರಿಸಿ ರೈತರಿಗೆ ಅಗತ್ಯ ಮಾಹಿತಿ ನೀಡುತ್ತಾರೆ.

Leave a Comment