ರೈತರು ಕೃಷಿ ಇಲಾಖೆಯ ಸಬ್ಸಿಡಿ ಪಡೆಯಲು ಈಗ ಫ್ರೂಟ್ಸ್ ಐಡಿ ಕಡ್ಡಾಯಗೊಳಿಸಲಾಗಿದೆ. ಕೃಷಿ ಇಲಾಖೆ ಅಷ್ಟೇ ಅಲ್ಲ, ಪಶು ಇಲಾಖೆ, ತೋಟಗಾರಿಕೆ, ರೇಷ್ಮೆ ಇಲಾಖೆ, ಮೀನುಗಾರಿಕೆಯಿಂದ ರೈತರಿಗೆ ನೀಡುವ ಸೌಲಭ್ಯ ಪಡೆಯಲು ಫ್ರೂಟ್ಸ್ ಐಡಿ ಬೇಕಾಗುತ್ತದೆ. ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಲು ಹಾಗೂ ರೈತರ ಮಕ್ಕಳು ರೈತವಿದ್ಯಾನಿಧಿ ಯೋಜನೆಯಡಿ ಶಿಷ್ಯವೇತನ ಪಡೆಯಲು ಸಹ ಫ್ರೂಟ್ಸ್ ಐಡಿ ಮಹತ್ವದ್ದಾಗಿದೆ. ಆದರೆ ಫ್ರೂಟ್ಸ್ ಐಡಿಯನ್ನು ಪಡೆಯುವುದಕ್ಕಾಗಿ ರೈತರು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಫ್ರೂಟ್ಸ್ ಐಡಿಯನ್ನು ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಸಂಪೂರ್ಣ ಮಾಹಿತಿ.

Fruits Citizen login:

ಮೊಬೈಲ್ ನಲ್ಲಿಯೇ ಫ್ರೂಟ್ಸ್ ಐಡಿ ಕ್ರಿಯೇಟ್ ಮಾಡಲು https://fruits.karnataka.gov.in/OnlineUserLogin.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಫ್ರೂಟ್ಸ್ ಐಡಿ ಕ್ರಿಯೇಟ್ ಮಾಡಲು ಸರ್ಕಾರದ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ Citizen Registration ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ನಿಮ್ಮ ಹೆಸರು ಆಧಾರ್ ಕಾರ್ಡ್ ನಲ್ಲಿರುವಂತೆ ಬರೆದು ಆಧಾರ್ ನಂಬರ್ ನಮೂದಿಸಿ  ಐ ಆಗ್ರಿ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ನಂಬರ್ ನಮೂದಿಸಬೇಕು. ಒಂದು ವೇಳೆ ನೀವು ಈ ಮೇಲ್ ಐಡಿ ಇದ್ದರೆ ಯಸ್ ಆಯ್ಕೆಮಾಡಬೇಕು. ಇಲ್ಲದಿದ್ದರೆ ನೋ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಬೇಕು.  ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿ ನಂಬರ್ ನಮೂದಿಸಿ ಸಬ್ಮೀಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ  ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು.

ಫ್ರೂಟ್ಸ್ ತಂತ್ರಾಂಶದಲ್ಲಿ  ನಿಮ್ಮ ಹೆಸರು ನೋಂದಾಯಿಸಲು ನಿಮಗೆ ಸಮಸ್ಯೆಯಾಗುತ್ತಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು. ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಝರಾಕ್ಸ್ , ಜಾತಿ ಮತ್ತು ಆದಾಯ ಪ್ರಮಾಣ ಪತ್ರದೊಂದಿಗೆ ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬಹುದು.

Leave a Reply

Your email address will not be published. Required fields are marked *