Baragala Parihara Status ಮೊಬೈಲ್ ನಲ್ಲಿ ಚೆಕ್ ಮಾಡಿ

Written by Ramlinganna

Published on:

Baragala Parihara Status ಸ್ಟೇಟಸನ್ನು ರೈತರು ಯಾರ ಸಹಾಯವೂ ಇಲ್ಲದೆ ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ರೈತರು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

ಹೌದು, ಪ್ರಸಕ್ತ ಸಾಲಿನಲ್ಲಿ ಮಳೆಯಿಲ್ಲದೆ ರಾಜ್ಯದಲ್ಲಿ ಅಪಾರ ಪ್ರಮಾಣದ ರೈತರ ಬೆಳೆ ಹಾನಿಯಾಗಿತ್ತು. ಹೀಗಾಗಿ ರಾಜ್ಯದ ರೈತರ ಸಂಕಷ್ಟ ಅರಿತ ರಾಜ್ಯ ಸರ್ಕಾರವು ಬರಗಾಲ ಪರಿಹಾರ ಘೋಷಣೆ ಮಾಡಿದೆ. ಈಗಾಗಲೇ ರಾಜ್ಯದ ರೈತರಿಗೆ ಮೊದಲ ಕಂತಿನ ಪರಿಹಾರ ಹಣ ಜಮೆ ಸಹ ಮಾಡಿದೆ. ರಾಜ್ಯದ ಬಹುತೇಕ ಜಿಲ್ಲೆಯ ರೈತರಿಗೆ ಈಗಾಗಲೇ ಬರಗಲಾ ಪರಿಹಾರ ಮೊದಲ ಕಂತಿನ ಹಣ ಜಮೆಯಾಗಿದೆ. ರೈತರು ಬರಗಾಲ ಪರಿಹಾರ ಹಣ ತಮಗೆ ಎಷ್ಟು ಜಮೆಯಾಗಿದೆ? ಇದರೊಂದಿಗೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಬೆಳೆ ಹಾನಿ ಪರಿಹಾರ ಹಣ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

Baragala Parihara Status ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಬರಗಾಲ ಪರಿಹಾರ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಹಣ ಸಂದಾಯ ವರದಿ ( Parihara Payment Report) ಕಾಣಿಸುತ್ತದೆ. ಅಲ್ಲಿ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತವೆ. ಪರಿಹಾರ ನಮೂದು ಸಂಖ್ಯೆಹಾಗೂ ಆಧಾರ್ ಸಂಖ್ಯೆ ಹೀಗೆ ಎರಡು ಆಯ್ಕೆಗಳಲ್ಲಿ ರೈತರು ಆಧಾರ್ ಸಂಖ್ಯೆ / Aadhar Number ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು. Select Year Type ನಲ್ಲಿ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಬೇಕು. ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಲು / Fetch Details ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ಓಪನ್ಆಗುವುದು. ಅಲ್ಲಿ ಬರಗಾಲ ಪರಿಹಾರ ಹಣ ಜಮೆಯಾಗಿದ್ದರೆ ಎಕರೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಮಾಹಿತಿ ಕಾಣಿಸುತ್ತದೆ.

ಎನ್.ಡಿ.ಆರ್.ಎಫ್ ಪ್ರಕಾರ ಯಾವ ಬೆಳೆಗೆ ಎಷ್ಟು ಪರಿಹಾರ ಹಣ ನೀಡಲಾಗುವುದು?

ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಶೇ. 33 ಕ್ಕಿಂತ ಹೆಚ್ಚು ಹಾನಿಯಾದ ವಿಸ್ತೀರ್ಣಕ್ಕೆ ಪ್ರತಿ ಹೆಕ್ಟೇರ್ ಗೆ ಪರಿಹಾರ ನಿಗದಿ ಮಾಡಲಾಗಿದೆ.

ಹೌದು, ಪ್ರತಿ ಹೆಕ್ಟೇರ್ ಮಳೆ ಆಶ್ರಿತ ಬೆಳೆಗೆ 8500 ರೂಪಾಯಿ, ನೀರಾವರಿ ಪ್ರತಿ ಹೆಕ್ಟೇರ್  ಬೆಳೆಗೆ 17 ಸಾವಿರ ರೂಪಾಯಿ ಬಹುವಾರ್ಷಿಕ ಪ್ರತಿ ಹೆಕ್ಟೇರ್ ಬೆಳೆಗೆ 22500 ಪರಿಹಾರ ನಿಗದಿ ಮಾಡಿದೆ. ಮಾರ್ಗಸೂಚಿ ಅನ್ವಯ ಎರಡು ಹೆಕ್ಟೇರ್ ವರೆಗೆ ಮಾತ್ರ ಬೆಳೆ ಪರಿಹಾರ ನೀಡಲಾಗುತ್ತದೆ.

ಇದನ್ನೂ ಓದಿ ನೀವು ನಿಂತಿರುವ ಜಮೀನು ಯಾರ ಹೆಸರಿನಲ್ಲಿದೆ? ಇಲ್ಲೇ ಚೆಕ್ ಮಾಡಿ

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ಅನುದಾನದಡಿ ಬೆಳೆ ಹಾನಿ ಪರಿಹಾರದ ಮೊದಲ ಕಂತಾಗಿ ಅರ್ಹ ರೈತರಿಗೆ ತಲಾ 2 ಸಾವಿರ ರೂಪಾಯಿ ಹಣವನ್ನು ಪಾವತಿಸಲು ತೀರ್ಮಾನಿಸಲಾಗಿದೆ. ಉಳಿಕೆ ಪರಿಹಾರದ ಮೊತ್ತವನ್ನು ಕೇಂದ್ರದಿಂದ ಅನುದಾನ ಬಂದ ಮೇಲೆ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಮಾಹಿತಿ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯ ರೈತರು ಯಾರಿಗೆ ಸಂಪರ್ಕಿಸಬೇಕು?

ಮೈಸೂರು ತಾಲೂಕು ಕಚೇರಿಯ ದೂರವಾಣಿ ಸಂಖ್ಯೆ 0821 2414812, ನಂಜನಗೂಡು 08221 223108, ಟಿ. ನರಸಿಪುರ 91485 55170, ಎಚ್.ಡಿ. ಕೋಟೆ 08228 255325, ಹುಣಸೂರು 08222 252929, ಪಿರಿಯಾಪಟ್ಟಣ 08223 274175, ಸರಗೂರು 08228 296100, ಕೆ.ಆರ್. ನಗರ 08223 262371 ಹಾಗೂ ಸಾಲಿಗ್ರಾಮ08223 262371 ಸಂಪರ್ಕಿಸಬಹುದು.

ಕಲಬುರಗಿ ಜಿಲ್ಲೆಯ ರೈತರು ಯಾರಿಗೆ ಸಂಪರ್ಕಿಸಬೇಕು?

ಬರಗಾಲ ಪರಿಹಾರ ಕುರಿತಂತೆ ಸಹಾಯವಾಣಿ ಸಂಖ್ಯೆ 1077, ತಾಲೂಕು ಮಟ್ಟದ ಸಹಾಯವಾಣಿಗಳಾದ ಅಫಜಲ್ಪುರ ತಾಲೂಕಿನ ರೈತರು 7760208044, ಆಳಂದ ತಾಲೂಕಿನ ರೈತರು 08477 202428, ಚಿತ್ತಾಪುರ ತಾಲೂಕಿನ ರೈತರು 08474 236250, ಚಿಂಚೋಳಿ ತಾಲೂಕಿನ ರೈತರು 9902977599,  ಜೇವರ್ಗಿ ತಾಲೂಕಿನ ರೈತರು 7411843393, ಕಮಲಾಪುರ ತಾಲೂಕಿನ ರೈತರು 08478 200144, ಕಲಬುರಗಿ ತಾಲೂಕಿನ ರೈತರು 08472 278636, ಶಹಾಬಾದ್ 08474 295910, ಸೇಡಂ ತಾಲೂಕಿನ ರೈತರು 9535448788, ಹಾಗೂ ಯಡ್ರಾಮಿ ತಾಲೂಕಿನ ರೈತರು 9743682346 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Leave a Comment