ವಿವಿಧ ಯೋಜನೆಗಳಡಿಯಲ್ಲಿ ಶೇ. 50 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

ತೋಟಗಾರಿಕೆ ಇಲಾಖೆ. ರೇಷ್ಮೆ ಇಲಾಖೆ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಸಹಾಯಧನ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ರೇಷ್ಮೆ ಇಲಾಖೆಯ 2023-24ನೇ ಸಾಲಿನ ಫಲಾನುಭವಿ ಆಧಾರಿತ ಯೋಜನೆಗಳಿಗೆ ಸಹಾಯಧನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹೊಸ ಹಿಪ್ಪುನೆರಳೆ ನರ್ಸರಿ ಸ್ಥಾಪನೆ ಮಾಡಲು ಸಹಾಯಧನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಆಗಸ್ಟ್ 16 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್ 16 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಸೆಪ್ಟೆಂಬರ್ 15 ಕೊನೆಯ ದಿನಾಂಕದವಾಗಿದೆ.

ಹೆಚ್ಚಿನ ಮಾಹಿತಿಗೆ ರೇಷ್ಮೆ ಉಪನಿರ್ದೇಶಕರು, ಶಿವಮೊಗ್ಗ, 100 ಅಡಿ ರಸ್ತೆ, ರಾಜೇಂದ್ರ ನಗರ, ನಿರ್ಮಲ ನರ್ಸಿಂಗ್ ಹೋಂ ಎದುರು, ಶಿವಮೊಗ್ಗ, ಮೊಬೈಲ್ ಸಂಖ್ಯೆ 9845849636, ದೂರವಾಣಿ ಸಂಖ್ಯೆ 08182 295637, ರೇಷ್ಮೆ ಸಹಾಯಕ ನಿರ್ದೇಶಕರು, ಮೊಬೈಲ್ ಸಂಖ್ಯೆ 9972911112 ನ್ನು ಸಂಪರ್ಕಿಸಬಹುದು ಎಂದು ರೇಷ್ಮೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2023-24ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳಡಿ ಕೋಲಾರ ಜಿಲ್ಲೆಯ ಆಸಕ್ತ ವ್ಯಕ್ತಿ, ಸಂಘ ಸಂಸ್ಥೆಗಳಿಂದ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕೋಲಾರದ ಮೀನುಗಾರಿಕೆ ಉಪ ನಿರ್ದೇಶಕ 9740138511, ಮೀನುಗಾರಿಕೆ ಸಹಾಯಕ ನಿರ್ದೇಶಕ 9972717346, ಮಾಲೂರು ಮೀನುಗಾರಿಕೆ ಸಹಾಯಕ ನಿರ್ದೇಶಕ 9972717346, ಮುಳುಬಾಗಿಲು ಮೀನುಗಾರಿಕೆ ಸಹಾಯಕ ನಿರ್ದೇಶಕ 9482475770, ಶ್ರೀನಿವಾಸಪುರ ಮೀನುಗಾರಿಕೆ ಸಹಾಯಕ ನಿರ್ದೇಶಕ 8892654844, ಬೇತಮಂಗಲ ಮೀನುಗಾರಿಕೆ ಸಹಾಯಕ ನಿರ್ದೇಶಕ ಬೇತಮಂಗಲ (ಕೆಜಿಎಫ್ ಮತ್ತು ಬಂಗಾರಪೇಟೆ) 9482475770 ಹಾಗೂ ಮೀನುಗಾರಿಕೆ ಸಹಾಯವಾಣಿ 8277200300 ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಯ ವತಿಯಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ತುಮಕೂರು ಜಿಲ್ಲೆಯ ತೋಟಗಾರಿಕೆ ಇಲಾಖೆ ವತಿಯಿಂದ2023-24ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ, ತೋಟಗಾರಿಕೆ ರೈತರಿಗೆ ಹಾಗೂ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ನೆರವಿನಲ್ಲಿ ಮಾರ್ಗಸೂಚಿಯನ್ವಯ ವಿವಿಧ ಕಾರ್ಯಕ್ರಮಗಳನ್ನಾಧರಿಸಿ ಶೇ. 25 ರಿಂದ 50 ರಷ್ಟು ಸಹಾಯಧನ ನೀಡಲಾಗುವುದು. ಆಸಕ್ತ ರೈತರು ಹಾಗೂ ಉದ್ದಿಮೆದಾರರು ಅರ್ಜಿಯೊಂದಿಗೆ ಪಹಣಿ,  ಆಧಾರ್ ಪ್ರತಿ ಮತ್ತಿತರ ದಾಖಲಾತಿಗಳೊಂದಿಗೆ ಆಗಸ್ಟ್ 29 ರೊಳಗಾಗಿ ಸಂಬಂಧಿಸಿದ ತಾಲೂಕಿನ ತೋಟಗಾರಿಕೆ ಕಚೇರಿಗೆ ಸಲ್ಲಿಸಬಹುದು.

ಇದನ್ನೂ ಓದಿ : ಈ ಲಿಸ್ಟ್ ನಲ್ಲಿರುವವರಿಗೆ ಜುಲೈ 24 ರಂದು ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಜಮೆ

ಹೆಚ್ಚಿನ ಮಾಹಿತಿಗಾಗಿ ತುಮಕೂರು ಹಿರಿಯ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಮೊ. 8944042356, ಸಹಾಯಕ ತೋಟಾಗಿರೆಕ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಕೋರಾ ಹೋಬಳಿ 8970870918, ಬೆಳ್ಳಾವಿ ಹೋಬಳಿ 7022679182, ಕಸಬಾ ಹೋಬಳಿ 8095003877, ಹೆಬ್ಬೂರ ಹೋಬಳಿ 9538287992, ಊರ್ಡಿಗೆರೆ ಹೋಬಳಿ 9986548685, ಗೂಳೂರು ಹೋಬಳಿ 9620691223 ನ್ನುಸಂಪರ್ಕಿಸಲು ಕೋರಲಾಗಿದೆ.

ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತೋಟಗಾರಿಕೆ ಇಲಾಖೆಯ ವತಿಯಿಂದ 2023-24  ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ, ತೋಟಗಾರಿಕೆ ರೈತರಿಗೆ ಹಾಗೂ ಉದ್ದಿಮೆದಾರರಿಗೆ ನೆರವುನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸುಧಾಕರ್ ತಿಳಿಸಿದ್ದಾರೆ.

ಈ ಯೋಜನೆಯ ವಿವಿಧ ಕಾರ್ಯಕ್ರಮಗಳಡಿ ಹಣ್ಣಿನ ಬೆಳೆಗಳಾದ ಬಾಳೆ, ಮಾವು, ಸೀಬೆ, ಅಂಜೂರ ಹಾಗೂ ದಾಳಿಂಬೆ ಹೊಸ ಪ್ರದೇಶ ವಿಸ್ತರಣೆ, ಹಣ್ಣಿನ ಬೆಳೆಗಳಾದ ಡ್ರಾಗನ್ ಹಣ್ಣು, ನೇರಳೆ, ಹುಣಸೆ ಹೊಸ ಪ್ರದೇಶ ವಿಸ್ತರಣೆ, ಹೂವಿನ ಬೆಳೆಗಳಾದ ಸುಗಂಧರಾಜ, ಚೆಂಡು ಹೂ, ಸೇವಂತಿಗೆ ಹಾಗೂ ಇತರ ಬಿಡಿ ಹೂವುಗಳ ಹೊಸ ಪ್ರದೇಶ ವಿಸ್ತರಣೆ, ಹೈಬ್ರಿಡ್ ತರಕಾರಿ ಬೆಲೆಗಳ ಹೊಸ ಪ್ರದೇಶ ವಿಸ್ತರಣೆ, ಗೋಡಂಬಿ, ಕೋಕೋ, ಕಾಳು ಮೆಣಸು ಬೆಳೆಗಲ ಹೊಸ ಪ್ರದೇಶ ವಿಸ್ತರಣೆ, ಅಣಬೆ ಉತ್ಪಾದನಾ ಘಟಕ ಸೇರಿದಂತೆ ಇನ್ನಿತರ ಘಟಕಗಳ ಸ್ಥಾಪನೆಗೆ ಸಹಾಧನ ನೀಡಲಾಗುವುದು.

ಶೇ. 25 ರಿಂದ 50 ರವರೆಗ ಸಹಾಯಧನ ನೀಡಲಾಗುವುದು. ಆಸಕ್ತ ರೈತರು ಹಾಗೂ ಉದ್ದಿಮೆದಾರರು ಅರ್ಜಿಯೊಂದಿಗೆ ಪಹಣಿ, ಆಧಾರ್ ಪ್ರತಿ ಮತ್ತಿತರ ದಾಖಲಾತಿಗಳೊಂದಿಗೆ ಆಗಸ್ಟ್ 29 ರೊಳಗಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

Leave a comment