ಕೇಂದ್ರ ಸರ್ಕಾರವು ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು ಆರಂಭಿಸಿದೆ. 2015 ರಲ್ಲಿ ಆರಂಭಿಸಲಾದ ಈ ಯೋಜನೆಯಡಿಯಲ್ಲಿ ಪ್ರತಿ ಹೆಕ್ಟೇರಿಗೆ ರೈತರಿಗೆ ಶೇ. 50 ಸಾವಿರ ರೂಪಾಯಿ ಸಹಾಯಧನ ಸಿಗಲಿದೆ. ಪರಂಪರಾಗತ ಕೃಷಿ ವಿಕಾಸ ಯೋಜನೆ ಎಂದರೇನು? ಅರ್ಜಿ ಸಲ್ಲಿಕೆ ಹೇಗೆ? ಯಾವ ರೈತರು ಈ ಯೋಜನೆಯಡಿಯಲ್ಲಿ ಸಲ್ಲಿಸಲು ಅರ್ಹತೆಗಳೇನು? ರೈತರಿಗೆ ಯಾವ ಸೌಲಭ್ಯ ಹೇಗೆ ಸಿಗಲಿದೆ ಎಂಬುದರ ಕುರಿತು ಸಮಗ್ರ ಮಾಹಿತಿ ಇಲ್ಲಿದೆ.
ಕೇಂದ್ರ ಸರ್ಕಾರವು ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು 2015ರಲ್ಲಿ ಆರಂಭಿಸಿದೆ. ಇದು ಕೇಂದ್ರ ಪ್ರಾಯೋಜಿತಯೋಜನೆಯಾಗಿದೆ. ರಾಷ್ಟ್ರೀಯ ಮಣ್ಣು ಫಲವತ್ತತೆ ಮಿಷನ್ ನ್ಯಾಷನಲ್ ಸುಸ್ಥಿರ ಕೃಷಿ ಮಿಷನ್ ಅಡಿಯಲ್ಲಿ ಜಾರಿ ಮಾಡುತ್ತಿರುವ ಯೋಜನೆಗಳಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು ಆರಂಭಿಸಲಾಗಿದೆ.
ಪರಂಪರಾಗತ ಕೃಷಿ ವಿಕಾಸ ಯೋಜನೆಯಡಯಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ಕ್ರಮವಾಗಿ 60:40 ಅನುಪಾತದಲ್ಲಿ ರೈತರಿಗೆ ಅನುದಾನ ನೀಡುತ್ತವೆ. ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ ಕ್ರಮವಾಗಿ 90:10 ಅನುಪಾತದಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶೇ. 100 ರಷ್ಟು ಸಹಾಯಧನ ನೀಡಲಾಗುವುದು. ಸಾವಯವ ಗೊಬ್ಬರ, ಕೀಟನಾಶಕ, ಎರೆಹುಳು ಗೊಬ್ಬರ ಇತ್ಯಾದಿ ಗಳನ್ನು ಖರೀದಿಸಲು ಶೇ. 60 ರಷ್ಟು ರೈತರಿಗೆ ಸಹಾಯಧನ ನೀಡಲಾಗುವುದು.
ಸಾವಯವ ಕೃಷಿ ವಿಕಾಸ ಯೋಜನೆಯ ಉದ್ದೇಶ
ರೈತರ ಆದಾಯ ಹೆಚ್ಚಿಸುವುದು ಮತ್ತು ವ್ಯಾಪಾರಿಗಳಿಗೆ ಸಮರ್ಥ ಮಾರುಕಟ್ಟೆ ರಚಿಸುವುದು. ರೈತರನ್ನು ನೈಸರ್ಗಿಕ ಸಂಪನ್ಮಲಗಳ ಉತ್ಪಾದನೆಗೆ ಮತ್ತು ಕ್ರೋಢೀಕರಣಕ್ಕೆ ಪ್ರೇರೇಪಿಸುವುದು. ರೈತರ ಗುಂಪುಗಳನ್ನು ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಸಾವಯವ ಕೃಷಿ ಮಾಡುವಂತೆ ಪ್ರೇರೇಪಿಸವುದು.
ರೈತರಿಗೆ 50 ಸಾವಿರ ಪ್ರೋತ್ಸಾಹಧನ
ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಪ್ರತಿ ರೈತರಿಗೆ ಮೂರು ವರ್ಷಗಳಕಾಲ 50 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. ಈ ಮೊತ್ತದಲ್ಲಿ ಸಾವಯವ ಗೊಬ್ಬರಗಳು, ಕೀಟನಾಶಕಗಳು, ಬೀಜಿಗಳು ಇತ್ಯಾದಿಗಳಿಗೆ ಪ್ರತಿ ಹೆಕ್ಟೇರಿಗೆ 31 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. ಕ್ಲಸ್ಟರ್ ರಚನೆ ಮತ್ತು ಸಾಮರ್ಥ್ಯ ನಿರ್ಮಾಣಕ್ಕೆ ಪ್ರತಿ ಹೆಕ್ಟೇರಿಗೆ 3 ಸಾವಿರ ರೂಪಾಯಿ ನೀಡಲಾಗುವುದು. ಸಹಾಯಧನದ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು.
ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಸೌಲಭ್ಯ ಪಡೆಯಲು ಯಾವ ಯಾವ ದಾಖಲೆ ಬೇಕು?
ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರೈತರು ಸೌಲಭ್ಯ ಪಡೆಯಬೇಕಾದರೆ ಆಧಾರ್ ಕಾರ್ಡ್ ಹೊಂದಿರಬೇಕು. ವಾಸಸ್ಥಳ ಪ್ರಮಾಣ ಪತ್ರ ಇರಬೇಕು. ಜಾತಿ ಮತ್ತು ಆದಾಯ ಪ್ರಮಾಣಪತ್ರ ಇರಬೇಕು. ಪಡಿತರ ಚೀಟಿ ಹೊಂದಿರಬೇಕು. ಬ್ಯಾಂಕ್ ಪಾಸ್ಬುಕ್ ಹೊಂದಿರಬೇಕು.
ಇದನ್ನೂ ಓದಿ: ಐದು ನಿಮಿಷ ಮೊದಲೇ ಸಿಡಿಲಿನ ಮುನ್ಸೂಚನೆ ನೀಡುತ್ತದೆ ದಾಮಿನಿ ಆ್ಯಪ್- ಇಲ್ಲಿದೆ ಸಂಪೂರ್ಣ ಮಾಹಿತಿ
ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಈ ಯೋಜನೆಯಡಿ ಭಾಗವಹಿಸಲು ಆಸಕ್ತರಿರುವರು ಲಾಭ ಪಡೆಯಹಬಹುದು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳು ಪರಂಪರಾಗತ ಕೃಷಿ ವಿಕಾಸ ಯೋಜನೆಯಿಂದ ಆಗುವ ಲಾಭಗಳ ಕುರಿತು ರೈತರಿಗೆ ಮನವವರಿಕೆ ಮಾಡಬೇಕು. ತೋಟಗಾರಿಕೆ ಬೆಳೆಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದುದ್ದರಿಂದ ರೈತರಿಗೆ ಸಹಾಯಧನ ನೀಡಿ ಯೋಜನೆ ಯಶಸ್ವಿಗೊಳಿಸಬೇಕು.
ಪರಂಪರಾಗತ ಕೃಷಿ ವಿಕಾಸ ಯೋಜನೆ ಕುರಿತು, ಈ ಯೋಜನೆಯಡಿಯಲ್ಲಿ ರೈತರು ಲಾಭ ಹೇಗೆ ಪಡೆದುಕೊಳ್ಳಬೇಕೆಂಬುದರ ಕುರಿತು ಮಾಹಿತಿ ಪಡೆಯಲು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು. ನಿಮ್ಮ ತಾಲೂಕಿನ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯಿಂದಲೂ ಈ ಯೋಜನೆ ಕುರಿತು ಮಾಹಿತಿ ಪಡೆಯಬಹುದು.