ರೈತರಿಗೆ, ಸಾರ್ವಜನಿಕರಿಗೆ ಸಿಡಿಲಿನ ಕುರಿತು ಮಾಹಿತಿ ನೀಡಲು ಬಂದಿದೆ ದಾಮಿನಿ ಆ್ಯಪ್. ರೈತರಿಗೆ ಆಯಾ ಪ್ರದೇಶದ ಸಿಡಿಲಿನ ಮುನ್ಸೂಚನೆ ಮತ್ತು ಎಚ್ಚರಿಕಯ ಮಾಹಿತಿ ನೀಡುತ್ತದೆ. ಈ ಆ್ಯಪ್ ಪ್ರಸ್ತುತ ಸಿಡಿಲಿನ ಹೊಡೆತಗಳ ನಿಖರ ಸ್ಥಳಗಳನ್ನು ಗುರುತಿಸಿ ನಮ್ಮ ಸುತ್ತಮುತ್ತಲಿನ 20 ರಿಂದ 40 ಚದರ ಕಿ.ಮೀವರೆಗೆ ಸಂಭವನೀಯ ಗುಡುಗು ಸಹಿತ ಸಿಡಲಿನ ಚಲನೆ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುತ್ತದೆ.

ಮಳೆಗಾಲಕ್ಕಿಂತ ಮುಂಚಿತವಾಗಿ ಅಕಾಲವಾಗಿ ಬರುವ ಮಳೆಯಲ್ಲಿ ಸಿಡಿಲು ಗುಡುಗಿನ ಆರ್ಭಟ ಹೆಚ್ಚಾಗಿರುತ್ತದೆ. ಸಿಡಿಲಿನ ಆರ್ಭಟಕ್ಕೆ ಎಷ್ಟೋ ಜೀವರಾಶಿಗಳು ಪ್ರಾಣ ಕಳೆದುಕೊಳ್ಳುತ್ತವೆ. ವಿಶೇಷವಾಗಿ ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುವಾಗ, ಕುರಿ ಮೇಕೆಗಳು, ದನಕರುಗಳು ಸಿಡಿಲಿಗೆ ಪ್ರಾಣ ಕಳೆದುಕೊಳ್ಳುತ್ತವೆ.  ಸಿಡಿಲಿನಿಂದ ಪಾರಾಗಲು ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆಯು ದಾಮಿನಿ ಎಂಬ ಆ್ಯಪ್ ನ್ನು ಅಭಿವೃದ್ಧಿಪಡಿಸಿದೆ.

ಈ ದಾಮಿನಿ ಆ್ಯಪ್  ಸಿಡಿಲು ಹೊಡೆಯುವ ಕೆಲವೇ ನಿಮಿಷಗಳ ಮೊದಲು ನಾಗರಿಕರಿಗೆ ಮುನ್ಸೂಚನೆ ನೀಡುತ್ತದೆ. ಹೌದು, ಸಿಡಿಲು ಬೀಳುವುದಕ್ಕಿಂತ ಮುಂಚಿತವಾಗಿ 20 ರಿಂದ 40 ಕಿ. ಮೀ ದೂರದವರೆಗೆ 5 ರಿಂದ 15 ನಿಮಿಷಗಳ ಮೊದಲೇ ವಿವಿಧ ಹಂತದಲ್ಲಿ ಸಂಭವಿಸಬಹುದಾದ ಸಿಡಿಲಿನ ಬಗ್ಗೆ ನಿಖರವಾದ ಮಾಹಿತಿ ನೀಡುತ್ತದೆ.

ದಾಮಿನಿ ಆ್ಯಪ್ ನೀಡುವ ನಿಖರ ಮಾಹಿತಿ ಆಧಾರದ ಮೇಲೆ ರೈತರು ಸುರಕ್ಷಿತ ಸ್ಥಳಕ್ಕೆ ತೆರಳಿ ತಮ್ಮ ಪ್ರಾಣ ಕಾಪಾಡಿಕೊಳ್ಳಬಹುದು.

ದಾಮಿನಿ ಆ್ಯಪ್ ಹೇಗೆ ಡೌನ್ಲೋಡ್ ಮಾಡಬೇಕು ?

ರೈತರು ಮೊಬೈಲ್ ನಲ್ಲಿ ದಾಮಿನಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ Damini App ಎಂದು ಟೈಪ್ ಮಾಡಬೇಕು. ಅಥವಾ ಈ

https://play.google.com/store/apps/details?id=com.lightening.live.damini&hl=kn&gl=US

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ Damini: Lightning Alert ಆ್ಯಪ್ ಓಪನ್ ಆಗುತ್ತದೆ. ಆಗ Install ಮೇಲೆ ಕ್ಲಿಕ್ ಮಾಡಬೇಕು.  ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಐ ಅಗ್ರಿ ಪ್ರೈವೇಸಿ ಪಾಲಿಸಿ ಬಾಕ್ಸ್ ಆಯ್ಕೆಮಾಡಿಕೊಳ್ಳಬೇಕು. Enable GPS ಮೇಲೆ ಕ್ಲಿಕ್ ಮಾಡಬೇಕು. ವೈಲ್ ಯೂಸಿಂಗ್ ದ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಇದ್ದ ಸ್ಥಳದ 20 ಕಿಮೀ, 40 ಕಿ. ಮೀ ವ್ಯಾಪ್ತಿಯ ಸರ್ಕಲ್ ಕಾಣುತ್ತದೆ. ಇದರೊಂದಿಗೆ ನಿಮ್ಮ ಸುತ್ತಮುತ್ತಲಿನ ಊರುಗಳು ಕಾಣುತ್ತವೆ.

ನೋಂದಣಿ ಹೇಗೆ ಮಾಡಬೇಕು ?

ಆ್ಯಪ್ ಕೆಳಗಡೆ ರೆಜಿಸ್ಟರ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಹೆಸರು ಭರ್ತಿ ಮಾಡಬೇಕು. ಮೊಬೈಲ್ ನಂಬರ್ ನಮೂದಿಸಬೇಕು. ನಿಮ್ಮ ವಿಳಾಸ, ಪಿನ್ ಕೋಡ್ ಹಾಕಿ ರೆಜಿಸ್ಟರ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಹೆಸರು ನೋಂದಾಯಿಸಲ್ಪಡುತ್ತದೆ.

ದಾಮಿನಿ ಆ್ಯಪ್ ಹೇಗೆ ಮುನ್ಸೂಚನೆ ನೀಡುತ್ತದೆ?

ಕೆಳಗಡೆ  ಕೆಂಪು ಬಣ್ಣ ತೋರಿಸಿದರೆ 0-5 ನಿಮಿಷದಲ್ಲಿ ಸಿಡಲು ಸಂಭವಿಸುವುದನ್ನು ಸೂಚಿಸುತ್ತದೆ. 5-10 ನಿಮಿಷದಲ್ಲಿ ಸಿಡಿಲು ಸಂಭವಿಸಿದರೆ  ಹಳದಿ ಬಣ್ಣ ತೋರಿಸುತ್ತದೆ. ಅದೇ ರೀತಿ 10-15 ನಿಮಿಷದೊಳಗೆ ಸಿಡಿಲು ಸಂಭವಿಸುವ ಸಾಧ್ಯತೆಯಿದ್ದರೆ ಆಗ ನೇರಳೆ ಬಣ್ಣ ಸೂಚಿಸುತ್ತದೆ.  ಇದರೊಂದಿಗೆ ಸಿಡಿಲಿನ ವೇಳೆ ಜನರು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ಸಿಡಿಲಿನ ಸಂದರ್ಭದಲ್ಲಿ ಜನರು ಯಾವ ಸ್ಥಳದಲ್ಲಿ ಇರಬಾರದು ಎಂದು ಮಾಹಿತಿ ನೀಡುತ್ತದೆ.

ಒಂದು ವೇಳೆ ನಿಮ್ಮ ವ್ಯಾಪ್ತಿಪ್ರದೇಶದ ಸುತ್ತಮುತ್ತ ಸಿಡಿಲು ಸಂಭವಿಸುವ ಸಾಧ್ಯತೆ ಇರದಿದ್ದರೆ No lightning warning ಎಂಬ ಸಂದೇಶ ಕಾಣುತ್ತದೆ. ಸಿಡಿಲಿನಿಂದ ಪ್ರಾಣ ರಕ್ಷಿಸಿಕೊಳ್ಳುವ ಉದ್ದೇಶದಿಂದ ದಾಮಿನಿ ಆ್ಯಪ್ ಬಂದಿದೆ. ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಮಳೆ ಬಂದಾಗ ಯಾವುದೇ ರಕ್ಷಣೆಯಿಲ್ಲದೆ ಮರಗಳ ಕೆಳಗಡೆ ನಿಂತುಕೊಂಡಿರುತ್ತಾರೆ. ದನಕರುಗಳೊಂದಿಗೆ, ಕುರಿ ಮೇಕೆ ಸಾಕಾಣಿಕೆ ಮಾಡುವ ರೈತರು ಸಹ ಸಿಡಿಲಿನಿಂದಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಮುಂಗಾರು ಪೂರ್ವದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗುತ್ತದೆ. ಇದರಿಂದ ಸಾವು ನೋವುಗಳು ಕಂಡುಬರುತ್ತವೆ. ಹಾಗಾಗಿ ರೈತರು ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಸಿಡಿಲಿನ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ.  ರೈತರು ಮತ್ತು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಮಿುಂಚು ಬರುವ ಮುನ್ಸೂಚನೆಯನ್ನು ತಿಳಿದುಕೊಳ್ಳಲು ದಾಮಿನಿ ಆ್ಯಪ್ ಅನ್ನು ಬಳಸಿಕೊಳ್ಳಬಹುದು.

Leave a Reply

Your email address will not be published. Required fields are marked *