ರೈತರಿಗೆ ಯಾವ ಯೋಜನೆಯಿಂದ ಎಷ್ಟು ಸಬ್ಸಿಡಿ ಸಿಗಲಿದೆ?

Written by Ramlinganna

Updated on:

these facilities will get farmer ಕೃಷಿ ಇಲಾಖೆಯಿಂದ ರೈತರಿಗೆ ವಿವಿಧ ಯೋಜನೆಗಳಡಿಯಲ್ಲಿ ಯಾವ ಯಾವ ಸೌಲಭ್ಯಗಳು ಸಿಗುತ್ತವೆ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆಕೇದಂ್ರ ಸರ್ಕಾರದಿಂದ ತಲಾ 2000 ರೂಪಾಯಿಯಂತೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. ಇದರೊಂದಿಗೆ ರಾಜ್ಯ ಸರ್ಕಾರದಿಂದ ತಲಾ 2 ಸಾವಿರ ರೂಪಾಯಿ ವರ್ಷಕ್ಕೆ ಎರಡು ಕಂತುಗಳಲ್ಲಿ ಒಟ್ಟು 4 ಸಾವಿರ ರೂಪಾಯಿ ನೀಡಲಾಗುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರ ಸೇರಿ ಒಟ್ಟು 10 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು.

ರೈತ ಶಕ್ತಿ ಯೋಜನೆ

ರೈತ ಶಕ್ತಿ ಯೋಜನೆಯಡಿ ರೈತರಿಗೆ ಕೃಷಿ ಯಾಂತ್ರೀಕರಣವನ್ನು ಪ್ರೋತ್ಸಾಹಿಸಲು ಡೀಸೆಲ್ ಸಹಾಯಧನ ನೀಡುವ ರೈತ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ಎಕರೆಗೆ 250 ರೂಪಾಯಿಗಳಂತೆ ಐದು ಎಕರೆಗೆ 1250 ರೂಪಾಯಿ ಸಹಾಯಧನ ನೀಡಲಾಗುವುದು.

these facilities will get farmer ಕೃಷಿ ಯಾಂತ್ರೀಕರಣ ಯೋಜನೆ

ಇತ್ತೀಚೆಗೆ ಕೃಷಿಯಲ್ಲಿ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗುತ್ತಿದ್ದರಿಂದ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಿ ಮಾಡಲು ಸಹಾಯಧನ ನೀಡಲಾಗುವುದು. ಹೌದು, ಉಳುಮೆಯಿಂದ ಕೊಯ್ಲುವರೆಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳ ಖರೀದಿಗೆ  ಸಾಮಾನ್ಯ ರೈತರಿಗೆ ಶೇ. 50 ರಷ್ಟುಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ  ನೀಡಲಾಗುವುದು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ

ತೋಟಗಾರಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ ಹಾಗೂ ತೋಟಗಾರಿಕೆ ಮಾಡುತ್ತಿರುವ ರೈತರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ, ತುಂತುರು ನೀರಾವರಿ ಅಳವಡಿಸಲು ಸಹಾಯಧನ ನೀಡಲಾಗುವುದು. ಈ ಯೋಜನೆಯಡಿಯಲ್ಲಿ ರೈತರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ

ತೋಟಗಾರಿಕೆ ಬೆಳೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯನ್ನು ಜಾರಿಗೆ ತರಲಾಗಿದೆ.  ಕೇಂದ್ರ ಸರ್ಕಾರದ ಈ ಯೋಜನೆಯಡಿ ದೇಶದ ರೈತರಿಗೆ ಹೆಚ್ಚಿನ ಬೆಲೆಗೆ ತರಕಾರಿ, ಹಣ್ಣು, ಹೂವು ಮತ್ತು ಸಾಂಬಾರು ಪದಾರ್ಥಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುವುದು.

ಇದನ್ನೂ ಓದಿ : ನಿಮ್ಮ ಜಮೀನಿನೊಂದಿಗೆ ನಿಮ್ಮ ಅಕ್ಕಪಕ್ಕದ ಜಮೀನು ಯಾರ ಹೆಸರಿಗೆ ಎಷ್ಟು ಎಕರೆ ಜಂಟಿಯಾಗಿದೆ? 

ಇದರೊಂದಿಗೆ ಪ್ಯಾಕ್ ಹೌಸ್ ನಿರ್ಮಾಣ, ಹಸಿರು ಮನೆ, ಈ ಯೋಜನೆಯಡಿ ರೈತರಿಗೆ ನೀರಾವರಿ ನೆಟ್ ಹೌಸ್, ಶೇಖರಣೆ ಹಾಗೂ ಬೇಲಿ ಇತ್ಯಾದಿಗಳಿಗೆ ಆರ್ಥಿಕ ನೆರವು ನೀಡಲಾಗುವುದು.

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ

2021-22ನೇ ಸಾಲಿನ ಆರ್ಥಿಕ ವರ್ಷದಿಂದ ರೈತರ ಮಕ್ಕಳಿಗೆ ಶಿಷ್ಯವೇತನ ನೀಡುವುದಕ್ಕಾಗಿ ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಹೌದು, ಪಿಯುಸಿ, ಐಟಿಐ, ಡಿಪ್ಲೋಮಾ ಓದುತ್ತಿರುವ ಮಕ್ಕಳಿಗೆ ಬಾಲಕರಿಗೆ 2500ರೂಪಾಯಿ ಬಾಲಕಿಯರಿಗೆ 3000 ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುವುದು.Fಇದರೊಂದಿಗೆ  ಬಿಎ, ಬಿಎಸ್.ಸಿ, ಬಿಕಾಂ, ಬಿಟೆಕ್ ಓದುತ್ತಿರುವ ಬಾಲಕರಿಗೆ 5 ಸಾವಿರ, ಬಾಲಕಿಯರಿಗೆ 5500 ರೂಪಾಯಿ ನೀಡಲಾಗುವುದು. ಎಲ್.ಎಲ್.ಬಿ, ಪ್ಯಾರಾ ಮೆಡಿಕಲ್, ಬಿಫಾರ್ಮಾ, ನರ್ಸಿಂಗ್ ಇತ್ಯಾದಿ ಕೋರ್ಸ್ ಗಳ  ಹುಡುಗರಿಗೆ 7500, ಹುಡುಗಿಯರಿಗೆ 8000 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುವುದು. ಎಂಬಿಬಿಎಸ್, ಬಿ,ಇ ಓದುವ ಹುಡುಗರಿಗೆ 10 ಸಾವಿರ,  ಹುಡುಗಿಯರಿಗೆ 11 ಸಾವಿರ ರೂಪಾಯಿ ನೀಡಲಾಗುವುದು.

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ

ಪ್ರಕೃತಿ ವಿಕೋಪಗಳಾದ ಅತೀವೃಷ್ಟಿ, ಅನಾವೃಷ್ಟಿ, ಸಿಡಿಲು ಗುಡುಗುನಿಂದಾಗಿ ಉಂಟಾಗ ಬೆಂಕಿ ಅವಘಢ ಸೇರಿದಂತೆ ಇನ್ನಿತರ ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟವಾದರೆ ರೈತಹಿಗೆ ಪರಿಹಾರ ನೀಡಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಬೆಳೆ ಸಾಲ ಪಡೆದ ರೈತರಿಗೆ ಬೆಳೆ ವಿಮೆಯು ಕಡ್ಡಾಯವಾಗಿದೆ. ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ವಿಮಾ ಸೌಲಭ್ಯ ಪಡೆದುಕೊಳ್ಳಬಹುದು.

ಮೇಲಿನ ಯೋಜನೆಗಳೊಂದಿಗೆ ಮೀನುಗಾರಿಕೆ, ಪಶು ಸಂಗೋಪನೆ ಇಲಾಖೆಯ ವತಿಯಿಂದಲೂ ವಿವಿಧ ಯೋಜನೆಗಳಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಹಾಯಧನ ನೀಡಲಾಗುವುದು.

Leave a Comment