ರೈತರಿಗೆ ಗುಡ್ ನ್ಯೂಸ್ ಜಮೀನಿನ ಟಿಪ್ಪಣಿ ಮೊಬೈಲ್ ನಲ್ಲೇ ಪಡಯಲು ಇಲ್ಲಿ ಕ್ಲಿಕ್ ಮಾಡಿ

Written by Ramlinganna

Published on:

Farmers land Tippani check : ರೈತರು ತಮ್ಮ ಜಮೀನಿನ ಟಿಪ್ಪಣಿಯನ್ನು ಈಗ ಮೊಬೈಲ್ ನಲ್ಲೇ ಪಡೆಯಬಹುದು. ಹೌದು, ರೈತ ಮಿತ್ರರೇ ಟಿಪ್ಪಣಿ ಪಡೆಯಲು ನೀವು ಎಲ್ಲಿಯೂ ಹೋಗಬೇಕಿಲ್ಲ, ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ

Farmers land Tippani check ಏನಿದು ಜಮೀನಿನ ಟಿಪ್ಪಣಿ ?

ಜಮೀನಿನ ಟಿಪ್ಪಣಿ ಎಂದರೆ ಭೂಮಿ ಅಳತೆ ಮಾಡುವಾಗ ಸರ್ವೆಯರ್ ತಯಾರಿಸುವ ಮೂಲ ನಕ್ಷೆ ಹಾಗೂ ಅಳತೆಯ ದಾಖಲೆಯಾಗಿದೆ. ಇದು ಸರ್ವೆ ನಂಬರ್ ಗಡಿಗಳು, ಆಕಾರ ಮತ್ತು ಹಿಸ್ಸಾ ವಿಭಾಗಗಳ ನಿಖರ ಮಾಹಿತಿ ನೀಡುತ್ತದೆ.

ಟಿಪ್ಪಣಿಯ ಮುಖ್ಯ ವಿವರಗಳು

ಸರ್ವೆ ಮಾಡುವಾಗ ಬರೆದ ಮೂಲ ರೇಖಆಚಿತ್ರ, ಜಮೀನಿನ ಸುತ್ತಮುತ್ತಲಿನ ಅಳತೆ ಹಾಗೂ ದಿಕ್ಕುಗಳು

ಜಮೀನು ಒಡೆದು ಹಿಸ್ಸಾ ಮಾಡುವಾಗ ಇದು ಉಪಯೋಗವಾಗುತ್ತದೆ.

ಟಿಪ್ಪಣಿ ಪಡೆಯುವುದು ಹೇಗೆ ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಮೂಲ ಟಿಪ್ಪ್ಣಿಯನ್ನು ಪಡೆಯಬೇಕಾದರೆ ಈ

https://bhoomojini.karnataka.gov.in/oscitizen/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಅಟ್ಲಾಸ್, ಸರ್ವೆ ಪಕ್ಕಾ ಪುಸ್ತಕ, ಟಿಪ್ಪಣಿ, ಆಕಾರಬಂದು, ಎಣ್.ಎಮ್.ಬಿ, ಸರ್ವೆ ಪ್ರತಿ ಪುಸ್ತಕ ಹೀಗೆ ಕೆಲವು ದಾಖಲೆಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ನೀವು

Click here to view survey documents price list Link ಮೇಲೆ ಕ್ಲಿಕ್ ಮಾಡಿದರೆ ಸಾಕು ಯಾವ ದಾಖಲೆಯನ್ನು ಪಡೆಯಲು ಎಷ್ಟು ಹಣ ಪಾವತಿಸಬೇಕು ಎಂಬ ಪಟ್ಟಿ ಕಾಣಿಸುತ್ತದೆ.

ನೀವು ಜಮೀನಿನ ಟಿಪ್ಪಣಿ ಪಡೆಯಬೇಕಾದರೆ ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ನಂತರ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ.ಆ ಓಟಿಪಿಯನ್ನು ನಮೂದಿಸಿದ ನಂತರ ನೀವು ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಮೊಬೈಲ್ ನಲ್ಲೇ ಟಿಪ್ಪಣಿಯ ದಾಖಲೆಯನ್ನು ಚೆಕ್ ಮಾಡಬಹುದು.

ನಿಮ್ಮ ಜಮೀನಿನ ಆಕಾರ್ ಬಂದ್ ಹೀಗೆ ಚೆಕ್ ಮಾಡಿ

ನಿಮ್ಮ ಜಮೀನಿನ ಆಕಾರ್ ಬಂದ್ ಚೆಕ್ ಮಾಡಲು ಈ

https://bhoomojini.karnataka.gov.in/service39/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕರ್ನಾಟಕ ಸರ್ಕಾರ ಭೂ ಮಾಪನಾ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಆಕಾರ್ ಬಂದ್ ಚೆಕ್ ಮಾಡುವ ಪೇಜ್ ತೆರದುಕೊಳ್ಳುತ್ತದೆ. ಅಲ್ಲಿ  ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ  ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹಿಸ್ಸಾ ನಂಬರ್ ನಲ್ಲೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಆಕಾರ್ ಬಂದ್ ವೀಕ್ಷಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಆಕಾರ್ ಬಂದ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಮೂದಿಸಿ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಕಾಣಿಸುತ್ತದೆ. ನಂತರ ನೀವು ಆಯ್ಕೆ ಮಾಡಿದ ಸರ್ವೆ ನಂಬರ್ ಎಷ್ಟು ಹೆಕ್ಟೇರ್ ಅಂದರೆ ಎಷ್ಟು ಎಕರೆ ಜಮೀನಿದಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿ ಬೆಳೆ ವಿಮೆಗೆ ಯಾವ ದಾಖಲೆ ಬೇಕು? ಎಲ್ಲಿ ಮಾಡಬೇಕು ? ಇಲ್ದಿದೆ ಮಾಹಿತಿ

ಖರಾಬು ಜಮೀನು, ಖುಷ್ಕಿ ಜಮೀನು, ತರಿ ಜಮೀನು, ಬಾಗಾಯ್ತು ಹಾಗೂ ಪ್ಲಾಂಟೇಶನ್ ಜಮೀನು ಎಷ್ಟಿದೆ ಎಂಬ ಮಾಹಿತಿ ನಿಮಗೆ ಕಾಣಿಸುತ್ತದೆ.

Leave a Comment