Crop insurance documents : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸುವ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದೆ. ರೈತರು ಸಹ ಬೆಳೆ ವಿಮೆ ಮಾಡಿಸುತ್ತಿದ್ದಾರೆ. ಆದರೆ ಇನ್ನೂ ಬಹಳಷ್ಟು ರೈತರು ಬೆಳೆ ವಿಮೆ ಪರಿಹಾರದಿಂದಾಗಿ ವಂಚಿತವಾಗಿದ್ದಾರೆ. ಹಾಗಾದರೆ ಬೆಳೆ ವಿಮೆ ಮಾಡಿಸಲು ಯಾವ ಯಾವ ದಾಖಲೆ ಬೇಕು ಎಲ್ಲಿ ಬೆಳೆ ವಿಮೆ ಮಾಡಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.
Crop insurance documents ಬೆಳೆ ವಿಮೆ ಮಾಡಿಸಲು ಯಾವ ಯಾವ ದಾಖಲೆ ಬೇಕು ?
ಬೆಳೆ ವಿಮೆ ಮಾಡಿಸಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಇದರೊಂದಿಗೆ ಎಫ್ಐಡಿ ನಂಬರ್ ಗೊತ್ತಿರಬೇಕು. ಜಮೀನಿನ ಪಹಣಿ ಇರಬೇಕು. ಅಂದರೆ ಸರ್ವೆ ನಂಬರ್ ಗೊತ್ತಿರಬೇಕು. ಇದರೊಂದಿಗೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಇರಬೇಕು. ಈ ಎಲ್ಲಾ ದಾಖಲೆಯೊಂದಿಗೆ ನೀವು ಬೆಳೆ ವಿಮೆ ಮಾಡಿಸಬಹುದು.
ಬೆಳೆ ವಿಮೆ ಎಲ್ಲಿ ಮಾಡಿಸಬೇಕು ?
ಬೆಳೆ ವಿಮೆಯನ್ನು ನೀವು ಗ್ರಾಮ ಒನ್ ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಮಾಡಿಸಬಹುದು. ಇದರೊಂದಿಗೆ ನಿಮ್ಮ ಹತ್ತಿರದ ಸಿಎಸ್.ಸಿ ಕೇಂದ್ರಗಳಲ್ಲಿ ಬೆಳೆ ವಿಮೆ ಮಾಡಿಸಬಹುದು. ನೀವು ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ ಬ್ಯಾಂಕಿನಲ್ಲಿಯೂ ಬೆಳೆ ವಿಮೆ ಮಾಡಿಸಬಹುದು.
ನೀವು ಬೆಳೆ ವಿಮೆ ಮಾಡಿಸಿದ ನಂತರ ಏನು ಮಾಡಬೇಕು ?
ಬೆಳೆ ವಿಮೆ ಮಾಡಿಸಿದ ನಂತರ ನೀವು ಮುಂಗಾರು ಹಂಗಾಮಿಗೆ ಬೆಳೆ ಹಾಳಾಗಿದ್ದರೆ 72 ಗಂಟೆಯೊಳಗೆ ನೀವು ಬೆಳೆ ವಿಮಾ ಸಹಾಯವಾಣಿ ನಂಬರಿಗೆ ಕರೆ ಮಾಡಬೇಕು. ಆಗ ಬೆಳೆ ವಿಮೆ ಕಂಪನಿಯ ಪ್ರತಿನಿಧಿ ನಿಮ್ಮ ಜಮೀನಿಗೆ ಬಂದು ಬೆಳೆ ಹಾಳಾಗಿರುವುದನ್ನು ಪರಿಶೀಲನೆ ಮಾಡುತ್ತಾರೆ. ಹೌದು, ಬೆಳೆ ಪರಿಶೀಲನೆ ಮಾಡಿದ ನಂತರ ನಿಮ್ಮ ಬೆಳೆ ಯಾವ ಪ್ರಮಾಣದಲ್ಲಿ ಹಾಳಾಗಿದೆ ಎಂಬುದನ್ನು ಪರಿಶೀಲಿಸಿ ಮೇಲಿನ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ನಂತರ ನಮ್ಮ ಬೆಳೆ ಹಾಳಾಗಿರುವ ಆಧಾರದ ಮೇಲೆ ನಿಮಗೆ ವಿಮೆ ಹಣ ಪಾವತಿಸಲಾಗುವುದು.
ನಿಮ್ಮ ಊರಿನಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ?
ನಿಮ್ಮ ಊರಿನಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು ಈ
https://www.samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. Samrakshane ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು Crop You can Insure ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗತ್ತದೆ. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು.ನಂತರ Display ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.
ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲೂಕು, ನಿಮ್ಮ ಊರು ಕಾಣಿಸುತ್ತದೆ. ಅದರ ಮುಂದೆ ನಿಮ್ಮ ಊರಿನಿಂದ ನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು. ಹೆಕ್ಟೇರಿಗೆ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಹಣ ಜಮೆಯಗಬಹುದು ಎಂಬ ಮಾಹಿತಿ ನಿಮಗೆ ಕಾಣಿಸುತ್ತದೆ.
ಇದನ್ನೂ ಓದಿ ಮೊಬೈಲ್ ನಲ್ಲಿಯೇ ಜಮೀನಿನ ಪೋಡಿ ನಕ್ಷೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಉದಾಹರಣೆಗೆ ಪಪ್ಪಾಯ ಬೆಳೆ ಪ್ರತಿ ಹೆಕ್ಟೇರಿಗೆ 1 ಲಕ್ಷ 34 ಸಾವಿರ ರೂಪಾಯಿಯವರಗೆ ಜಮೆಯಾಗುತ್ತದೆ. ಭತ್ತ 1 ಲಕ್ಷ 80 ಸಾವಿರ ರೂಪಾಯಿ, ಮೆಣಸಿನ ಕಾಯಿ 71 ಸಾವಿರ ರೂಪಾಯಿ ಹಾಗೂ ತೊಗರಿ ಬೆಳೆ 38 ಸಾವಿರ ರೂಪಾಯಿ ಹಾಗೂ ಹತ್ತಿಗೆ 59 ಸಾವಿರ ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ. ಈ ಬೆಳೆ ವಿಮ ಹಣ ನಿಮ್ಮ ಬೆಳೆ ಹಾಳಾಗಿರುವ ಪ್ರಮಾಣದ ಆಧಾರ ಮೇಲೆ ವಿಮೆ ಹಣ ಜಮೆಯಾಗುತ್ತದೆ. ಸಂಪೂರ್ಣವಾಗಿ ಹಾಳಾದರೆ ಅದರ ವರದಿ ಸಂಪೂರ್ಣ ಬೆಳೆ ಹಾಳಾಗಿದೆ ಎಂದು ವರದಿ ಸಲ್ಲಿಸಿದರೆ ಪೂರ್ಣ ಹಣ ಜಮೆಯಾಗಲಿದೆ.





