ಅಪೆಕ್ಸ್, ಡಿಸಿಸಿ ಬ್ಯಾಂಕ್ಗಳಲ್ಲಿ ಸಾಲ ಪಡೆದಿದ್ದು, ಕೊರೋನಾ ಸೋಂಕಿನಿಂದ ಮೃತಪಟ್ಟಿರುವ ರಾಜ್ಯದ 10.187 ರೈತರ ಸುಮಾರು 80 ಕೋಟಿ ರೂಪಾಯಿ ಸಾಲಮನ್ನಾ (crop loan) ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಂನತೆ ನಡೆಸಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ತಿಳಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಸಾಲಮನ್ನಾ ಕುರಿತು ಮುಂದಿನ ಮುರ್ನಾಲ್ಕು ದಿನಗಳಲ್ಲಿ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿಯ ಸಭೆ ಸೇರಿ ಈ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಿವಿಧ ವರ್ಗಗಳಿಗೆ ನೆರವಿನ ಪ್ಯಾಕೇಜ್ ನೀಡಿದ್ದ ರಾಜ್ಯ ಸರ್ಕಾರ ಇದೀಗ ಕೊರೋನಾ ಸೋಂಕಿಗೆ ಬಲಿಯಾದ 10187 ರೈತರ ಕೃಷಿ ಸಾಲ ಮನ್ನಾ ಮಾಡುವ ಮೂಲಕ ಅವಲಂಬಿತ ಕುಟುಂಬದ ಮೇಲಿನ ಹೊರೆ ಇಳಿಸುವ ಚಿಂತನೆ ನಡೆದಿದೆ.
ರೈತರು ಕೃಷಿಗಾಗಿ ಸಾಲ ಮಾಡಿದ ನಂತರ ಕೊರೋನಾ ಸಂಕಷ್ಟಕ್ಕೊಳಗಾಗಿ ಮೃತಪಟ್ಟಿದ್ದರೆ ಅಂತಹ ಕುಟುಂಬಕ್ಕೆ ಸಾಲಮನ್ನಾ ಮಾಡುವ ಉದ್ದೇಶವಾಗಿದೆ. ಡಿಸಿಸಿ ಬ್ಯಾಂಕ್ ಹಾಗೂ ಪಿಕಾರ್ಡ್, ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಸಾಲ ಪಡೆದು ಕೊರೋನಾದಿಂದ ಮೃತಪಟ್ಟಿರುವ ರೈತರ ಸಾಲಮನ್ನಾ ಮಾಡುವ ಚಿಂತನೆಯನ್ನು ಮುಖ್ಯಮಂತ್ರಿಯವರು ಚಿಂತನೆ ನಡೆಸಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರೈತರ ಸಹಾಯಕ್ಕೆ ಬರಲು ಮುಖ್ಯಮಂತ್ರಿಯವರು ಹಾಗೂ ಸರ್ಕಾರ ಸದಾ ನಿಲ್ಲಲಿದೆ ಎಂದರು.
ಇದೇ ವಾರ ಶನಿವಾರ ಸಹಕಾರ ಸಭೆ ನಡೆಯಲಿದೆ. ಅಲ್ಲಿ ಮಾರ್ಗಸೂಚಿ ಕುರಿತಂತೆ ಚರ್ಚಿಸಿ ತೀರ್ಮಾನವಾಗಲಿದೆ. ಪ್ರಾಥಮಿಕ ಹಂತದಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ಮುಂದೆ ಅರ್ಜಿ ಕರೆಯಬೇಕೋ ಅಥವಾ ಅರ್ಹತಾ ಮಾನದಂಡ ನಿಗದಿ ಪಡಿಸಬೇಕೇ ಎಷ್ಟು ಪ್ರಮಾಣದ ಸಾಲ ಮನ್ನಾ ಮಾಡಬೇಕು ಒಂದೇ ಮನೆಯಲ್ಲಿ ಇಬ್ಬರು ರೈತರು ಮೃತಪಟ್ಟರೆ ಅವರ ಸಾಲಮನ್ನಾ ಹೇಗೆ ಪರಿಗಣಿಸಬೇಕೆಂಬುದು ಎಂಬುದೆಲ್ಲಾ ತೀರ್ಮಾನ ಅಂತಿಮವಾಗಲಿದೆ.
ಕೋವಿಡ್ ಸಂಕಷ್ಟ ಕಾಲದಲ್ಲಿ ರೈತರ ಸಹಾಯಕ್ಕೆ ಬರಲು ಸಾಲ ಸೌಲಭ್ಯ ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ರೈತರಿಗೆ ಸಾಲಸೌಲಭ್ಯ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಕಳೆದ ವರ್ಷ 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿತ್ತು. ಈ ನಿಟ್ಟಿನಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿದೆ.
ಜಿಲ್ಲಾವಾರು ಮೃತಪಟ್ಟ ರೈತರು
ಬೆಳಗಾವಿ ಜಿಲ್ಲೆಯಲ್ಲಿ 3334 ರೈತರು, ಬೀದರ್ ಜಿಲ್ಲೆಯಲ್ಲಿ 824 ರೈತರು, ವಿಜಯಪುರ 754, ಬಾಗಲಕೋಟೆ ಜಿಲ್ಲೆಯಲ್ಲಿ 672, ಹಾಸನ ಜಿಲ್ಲೆಯಲ್ಲಿ 454 ರೈತರು, ಮಂಡ್ಯ 410, ದಾವಣಗೆರೆ ಜಿಲ್ಲೆಯಲ್ಲಿ 402 ರೈತರು, ಬೆಂಗಳೂರು 381, ಬಳ್ಳಾರಿಯಲ್ಲಿ 357, ಧಾರವಾಡ 376, ತುಮಕೂರು 307, ಶಿವಮೊಗ್ಗ 307, ಮೈಸೂರು 281. ರಾಯಚೂರು 237, ಕಲಬುರಗಿ 224, ರಾಯಚೂರು 237, ಚಿತ್ರದುರ್ಗ, 156, ಚಿಕ್ಕಮಗಳೂರು 113, ದಕ್ಷಿಣ ಕನ್ನಡ 152 ರೈತರು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಮೊಬೈಲ್ ನಲ್ಲಿಯೇ ನಿಮ್ಮ ಬೆಳೆಸಾಲಮನ್ನಾ (crop loan status) ಆಗಿದ್ದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ