ಕಳೆದ ಎರಡು ವರ್ಷಗಳ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರುಸ್ವಾಮಿಯವರು ಸಹಕಾರ ಸಂಘಗಳಿಂದ ಪಡೆದ ಒಂದು ಲಕ್ಷ ರೂಪಾಯಿಯವರೆಗೆ ಬೆಳೆ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಹಲವಾರು ರೈತರ ಸಾಲಮನ್ನಾ ಆಗಿಲ್ಲ. . ಸಾಮಾನ್ಯವಾಗಿ ಬೆಳೆ ಸಾಲ ಮನ್ನಾ ಆಗಿದ್ದರ ಕುರಿತು ಇನ್ನೂ ಬಹಳಷ್ಟು ರೈತರಲ್ಲಿ ಗೊಂದಲವಿದೆ. ಬೆಳೆ ಸಾಲ ಮನ್ನಾ (crop loan status)  ಆಗಿದೆಯೋ ಅಥವಾ ಇಲ್ಲವೋ  ರೈತರ ಬೆಳೆ ಸಾಲ ಮನ್ನಾ ಪಟ್ಟಿಯಲ್ಲಿ ಹೆಸರಿದೆಯೋ ಇಲ್ಲವೋ ಇತ್ಯಾದಿ ಗೊಂದಲುಗಳಿವೆ. ಆದರೆ ಇಲ್ಲಿ ಬೆಳೆಸಾಲಮನ್ನಾ ಆಗಿದೆಯೋ ಇಲ್ಲವೋ ಎಂಬುದನ್ನು ನೋಡಬಹುದು.

ಕೃಷಿ ಸಾಲಮನ್ನಾ ಸೌಲಭ್ಯಕ್ಕೆ ಅರ್ಹರಾಗಿರುವ ಫಲಾನುಭವಿಗಳ ಹೆಸರು, ಎಷ್ಟು ಹಣ ಮನ್ನಾ ಆಗಿದೆ.. ಅರ್ಹ ಫಲಾನುಭವಿಗಳನ್ನು ಇಲ್ಲಿ ತಮ್ಮ ಹೆಸರನ್ನು ಪರಿಶೀಲನೆ ಮಾಡಬಹುದು. ಇದಕ್ಕಾಗಿ ನೀವು ಬ್ಯಾಂಕಿಗೆ ಹೋಗುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹುದು. ಅದು ಹೇಗೆ ಸಾಧ್ಯ ಅಂದುಕೊಂಡಿದ್ದೀರಾ ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ…..

2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿಯವರು   ಸಾಲ ಮನ್ನಾ ಯೋಜನೆ ಘೋಷಿಸಿದ್ದರು. ಸಾಲಮನ್ನಾ ಘೋಷಣೆ ಮಾಡಿ ಎರಡು ವರ್ಷ ಕಳೆದರೂ ಇನ್ನೂ ಬ್ಯಾಂಕುಗಳಿಂದ ಇದುವರೆಗೆ ಬಹಳಷ್ಟು ರೈತರಿಗೆ ಯಾವುದೇ ಋಣುಮುಕ್ತ ಪತ್ರ ಸಿಕ್ಕಿಲ್ಲ. ಕೆಲವು ರೈತರ ಸಾಲಮನ್ನಾ ಆಗಿದ್ದರೂ ಸಹ ಇನ್ನೂ ಬಾಕಿಯಿದೆ ಎಂಬ ಮಾಹಿತಿ ವೆಬಸೈಟ್ ನಲ್ಲಿ ಕಾಣುತ್ತಿರುವುದರಿಂದ ಬಹಳಷ್ಟು ರೈತರು ಸಾಲಮನ್ನಾ ಕುರಿತಂತೆ ಗೊಂದಲದಲ್ಲಿದ್ದಾರೆ. ಸಾಲಮನ್ನಾ ಹಣ ಬ್ಯಾಂಕಿಗೆ ಜಮೆಯಾಗಿ ವಾಪಸ್ಸು ಹೋಗಿದೆ. ಇನ್ನೂ ಕೆಲವು ರೈತರದ್ದು ಬ್ಯಾಂಕಿಗೆ ಜಮೆಯಾಗಿದ್ದರೂ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ರೈತರ ಸಾಲ ಮನ್ನಾ ವಿಷಯವಾಗಿ ಸರ್ಕಾರ ಎಲ್ಲರಿಗೂ ತಿಳಿಸಲು ರೈತರ ಬೆಳೆ ಸಾಲ ಮನ್ನಾ ನೋಡಲು ಒಂದು ವೆಬ್ ಸೈಟ್ ಆರಂಭಿಸಿದೆ. ನಿಮ್ಮ ಬೆಳೆ ಸಾಲಮನ್ನಾ ಆಗಿದೆಯೋ? ಇಲ್ಲವೋ . ಸಾಲಮನ್ನಾ ಹಣ ಜಮೆಯಾಗಿದೆಯೋ ಅಥವಾ ಇಲ್ಲವೋ, ಎಷ್ಟು ಕಂತು ಜಮೆಯಾಗಿದೆ, ಸಾಲಮನ್ನಾ ಸ್ಟೇಟಸ್ ಸೇರಿದಂತೆ ಇತರ ಮಾಹಿತಿ ತಿಳಿದುಕೊಳ್ಳಬಹುದು ಇಲ್ಲಿ ಕ್ಲಿಕ್ ಮಾಡಿ.

ಸಾಲಮನ್ನಾ ಸ್ಟೇಟಸ್ ಗಾಗಿ ಈ  https://clws.karnataka.gov.in/clws/pacs/citizenreport/  ಲಿಂಕ್ಮೇ ಲೆ ಕ್ಲಿಕ್ ಮಾಡಬೇಕು. ಇಲ್ಲಿ ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಎರಡರಲ್ಲಿ ಯಾವುದಾದರೂ ಒಂದನ್ನು ಸೆಲೆಕ್ಟ್ ಮಾಡಬೇಕು. ಆಧಾರ್ ನಂಬರ್ ಸೆಲೆಕ್ಟ್ ಮಾಡಿದ್ದರೆ ಬಾಕ್ಸ್ ನಲ್ಲಿ ಆಧಾರ್ ನಂಬರ್ ಟೈಪ್ ಮಾಡಿ ಒಂದು ವೇಳೆ ರೇಷನ್ ಕಾರ್ಡ್ ಸೆಲೆಕ್ಟ್ ಮಾಡಿದ್ದರೆ ರೇಷನ್ ಕಾರ್ಡ್ ನಂಬರ್ ಹಾಕಿ ನಂತರ Fetch Report ಕ್ಲಿಕ್ ಮಾಡಿದರೆ ಸಾಕು. ನಿಮ್ಮ ಜಿಲ್ಲೆ, ತಾಲೂಕು, ಬ್ಯಾಂಕಿನ ಹೆಸರು, ಬ್ರ್ಯಾಂಚ್, ಹೆಸರು, ಅಕೌಂಟ್ ನಂಬರ್, ಎಷ್ಟು ಹಣ ಸಾಲಮನ್ನಾ ಆಗಿದೆ. ಸ್ಟೇಟಸ್ ಏನಿದೆ ಎಲ್ಲಾ ಮಾಹಿತಿ ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ.

Read This: ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ? ಇಲ್ಲಿ ಕ್ಲಿಕ್ ಮಾಡಿ ಕ್ಷಣಾರ್ಧದಲ್ಲಿ ಚೆಕ್ ಮಾಡಬಹುದು

Leave a Reply

Your email address will not be published. Required fields are marked *