ಪಿಎಂ ಕಿಸಾನ್ ಯೋಜನೆಯ 9ನೇ ಕಂತಿನ ರೈತರ ಹೆಸರು ಈಗಾಗಲೇ ಬಿಡುಗಡೆಯಾಗಿದೆ. ಹಣ ಜಮೆಯಾಗಲು ರಾಜ್ಯ ಸರ್ಕಾರದಿಂದ ಅಪ್ರೋವಲ್ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು. ಹೌದು. ಪಿಎಂ ಕಿಸಾನ್  ಹಣ ಖಾತೆಯಲ್ಲಿ ಜಮಾವಾಗಿದೆಯೋ ಇಲ್ಲವೋ ಎಂಬುದನ್ನು ನೋಡಲು ಈಗ  ಬ್ಯಾಂಕಿಗೆ ಹೋಗುವ ಅವಶ್ಯಕತೆಯಿಲ್ಲ. ನೋಂದಣಿ ಮಾಡಿಸಿಕೊಂಡ ರೈತರುಮನೆಯಲ್ಲಿಯೇ ಕುಳಿತು pm kisan status ನೋಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.

ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಪಿಎಂ ಕಿಸಾನ್ ಯೋಜನೆಯೂ ಒಂದು. ಈ ಯೋಜನೆ ದೇಶದಲ್ಲಿ ಅತೀ ಹೆಚ್ಚು ಪ್ರಸಿದ್ಧಿ ಪಡೆದಿದೆ. ಕೇಂದ್ರ ಸರ್ಕಾರವು  ವಾರ್ಷಿಕವಾಗಿ  ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ 6,000 ರೂಪಾಯಿ ಸಹಾಯ ಧನ ರೈತರ ಖಾತೆಗೆ ಜಮೆ ಮಾಡುತ್ತದೆ. ಇಲ್ಲಿಯವರೆಗೆ 8 ಕಂತುಗಳನ್ನು ನೋಂದಣಿ ಮಾಡಿಸಿದ ರೈತರ ಖಾತೆಗೆ ಜಮೆ ಮಾಡಿದೆ.  ಆಗಸ್ಟ್ ತಿಂಗಳಲ್ಲಿ 9ನೇ ಕಂತಿನ ಹಣ ಬಿಡುಗಡೆಯಾಗುವ ಸಾಧ್ಯತೆಯಿದೆ.

ನೋಂದಣಿ ಮಾಡಿಸಿಕೊಂಡ ರೈತರು ಪಿಎಂ ಕಿಸಾನ್ ಯೋಜನೆಯ ಹಣ ಯಾವ ಸ್ಥಿತಿಯಲ್ಲಿದೆ. ಜಮೆಯಾಗಲು ರಾಜ್ಯ ಸರ್ಕಾರದಿಂದ ಅನುಮೋದನೆಯಾಗಿಯೋ ಇಲ್ಲವೋ ಎಂಬುದನ್ನು ನೋಡಲು  ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಬಹುದು. ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡ ರೈತರು ಈ https://pmkisan.gov.in/beneficiarystatus.aspx  ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ   ಪಿಎಂ ಕಿಸಾನ್ ಯೋಜನೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ಅಥವಾ Acccount Number ಇದರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡರೆ ಮೊಬೈಲ್ ನಂಬರ್ ನಮೂದಿಸಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು. ನಿಮ್ಮ ಖಾತೆಯಲ್ಲಿ ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಜಮೆಯಾಗಿದೆ. 9ನೇ ಕಂತಿನ ಹಣ ಜಮೆಯಾಗಲು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ನೋಡಿಕೊಳ್ಳಬಹುದು. ವಾದಾದರೊಂದನ್ನು  ಗಲ್ ನಲ್ಲಿ pm kisan samman status  ಎಂದುಟೈಪ್ ಮಾಡಿ, PM Kisan Beneficiary status ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ನಂಬರ್ ಅಥವಾ ಅಕೌಂಟ್ ನಂಬರ್ ಅಥವಾ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿಕೊಳ್ಳಬಹುದು.

ಇನ್ನೇಕೆ ತಡ ಒಂದು ಸಲ ಚೆಕ್ ಮಾಡಿ ನೋಡಿಕೊಳ್ಳಬಾರದೇಕೆ. ಇಲ್ಲಿಯವರೆಗೆ ಎಷ್ಟು ಕಂತು ಹಣ ನಿಮ್ಮ ಖಾತೆಗೆ ಜಮೆಯಾಗಿದೆ ಹಾಗೂ ಯಾವ್ಯಾವಾ ತಿಂಗಳಲ್ಲಿ ಜಮೆಯಾಗಿದ್ದನ್ನು ಕ್ಷಣಾರ್ಧದಲ್ಲಿ ನೋಡಬಹುದು.

Leave a Reply

Your email address will not be published. Required fields are marked *