ಮುಂಗಾರು ಆರಂಭವಾಗಿದ್ದರಿಂದ ರೈತರಿಗೆ ಅನುಕೂಲವಾಗಲು ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಸಾಮಾಜಿಕ ಅರಣ್ಯ ವಲಯದ ಹೊದ್ದೂರು-ವಾಟೆಕಾಡು ಇಲಾಖಾ ಸಸ್ಯ ಕ್ಷೇತ್ರದಲ್ಲಿ 2022-23ನೇ ನೆಡಲು ವಿವಿಧ ಹಣ್ಣು ಹಂಪಲು ಹಾಗೂ ಕಾಡು ಜಾತಿಯ ಸಸಿಗಳ್ನು ಸಹಾಯಧನದಲ್ಲಿ ವಿತರಿಸಲಾಗುವುದು.
ಶ್ರೀಗಂಧ, ರಕ್ತಚಂದನ, ಶಿವಾನೆ, ಸಿಲ್ವರ್, ತೇಗ, ಬೀಟೆ, ಮಳೆಮರ, ನೇರಳೆ, ಹೊನ್ನೆ, ಸುಬಾಬುಲ್, ಕಾಡುಬಾದಾಮಿ, ಹಲಸು, ಗಜ್ಜಿಗೆ, ನೆಲ್ಲಿ, ಹೆಬ್ಬಿದಿರು, ಗಸಗಸೆ, ಕಾಡುಮಾವು, ನಂದಿ, ಪುನರ್ ಪುಳಿ, ಆಲ, ಅರಳಿ ಸೇರಿದಂತೆ ಇನ್ನಿತರ ಸಸಿಗಳನ್ನು ಲಭ್ಯವಿದೆ. ರೈತರು ಕೇವಲ 1 ರೂಪಾಯಿ ಹಾಗೂ 3 ರೂಪಾಯಿಗೆ ಪ್ರತಿ ಸಸಿಗಳನ್ನುರಿಯಾಯಿತಿ ದರದಲ್ಲಿ ಪಡೆಯಬಹುದು. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ರೈತರು ಸೇರಿದಂತೆ ಇನ್ನಿತರರು ಈ ಸಸಿಗಳನ್ನು ಪಡೆಯಬಹುದು.
ರೈತರು ತಮ್ಮ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪುಸ್ತಕದ ಪ್ರತಿ ಹಾಗೂ ತಮ್ಮ ಜಮೀನಿನ ಆರ್.ಟಿ.ಸಿ ಅಂದರೆ ಪಹಣಿ ಪ್ರತಿ ನೀಡಿ ಸಸಿಗಳನ್ನು ಪಡೆಯಬಹುದು. ರೈತರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ರೈತರು ಮಯೂರ್ ಕಾರವೇಕರ್, ವಲಯ ಅರಣ್ಯಾಧಿಕಾರಿ 7829301127, ದರ್ಶಿನಿ, ಉಪವಲಯ ಅರಣ್ಯಾಧಿಕಾರಿ 9743722646, ಚಂದ್ರಾವತಿ, ಅರಣ್ಯ ರಕ್ಷಕಿ 7975952388ಗೆ ಸಂಪರ್ಕಿಸಲು ಕೋರಲಾಗಿದೆ.
ಇತರ ಜಿಲ್ಲೆಗಳ ರೈತರಿಗೂ ಸಹ ಅರಣ್ಯ ಇಲಾಖೆಯ ವತಿಯಿಂದ 1 ರೂಪಾಯಿಯಿಂದ 3 ರೂಪಾಯಿಯವರೆಗೆ ಕಡಿಮೆ ದರದಲ್ಲಿ ಸಸಿಗಳನ್ನು ವಿತರಿಸಲಾಗುವುದು.
ಮಡಿಕೇರಿ ತಾಲೂಕಿನ ರೈತರಲ್ಲದೆ ಇತರ ಜಿಲ್ಲೆಯ ರೈತರೂ ಸಹ ಆಯಾ ತಾಲೂಕಿನ ವ್ಯಾಪ್ತಿಯಲ್ಲಿರುವ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರಗಳಿಂದ ರಿಯಾಯಿತಿಯಲ್ಲಿ ಸಸಿಗಳನ್ನು ಪಡೆಯಬಹುದು. ರೈತರು ಶ್ರೀಗಂಧ, ತೇಗು, ಹೆಬ್ಬೇವು, ಮಹಾಗನಿ ಸೇರಿದಂತೆ ಇನ್ನಿತರ ಗಿಡಗಳನ್ನು ಪಡೆದು ಬೆಳೆಸಬಹುದು.
ಆನ್ಲೈನ್ ನಲ್ಲೇ ಸಸಿಗಳ ಲಭ್ಯತೆ ದಾಸ್ತಾನು ವೀಕ್ಷಿಸಿ
ನಿಮ್ಮ ತಾಲೂಕಿನ ಹತ್ತಿರದ ಸಸ್ಯಕ್ಷೇತ್ರದಲ್ಲಿ ಯಾವ ಯಾವ ಸಸಿಗಳು ಲಭ್ಯವಿದೆ ಎಂಬುದನ್ನು ಆನ್ಲೈನ್ ನಲ್ಲೇ ರೈತರು ನೋಡಬಹುದು. ಅದಕ್ಕಾಗಿ ಯಾರ ಸಹಾಯವೂ ಬೇಕಿಲ್ಲಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲೇ ವೀಕ್ಷಿಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ.
ರೈತರು ತಮ್ಮ ತಾಲೂಕಿನ ವ್ಯಾಪ್ತಿಯಲ್ಲಿರುವ ಸಸ್ಯಕ್ಷೇತ್ರದಲ್ಲಿ ಯಾವ ಯಾವ ಸಸಿಗಳು ಲಭ್ಯವಿದೆ ಎಂಬುದನ್ನು ನೋಡಲು ಈ
https://aranya.gov.in/Enursery/Home/Dashboardlocation.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅರಣ್ಯ ಇಲಾಖೆಯ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಜಿಲ್ಲೆ, ತಾಲೂಕು ಆಯ್ಕೆ ಮಾಡಿಕೊಂಡು ಹುಡುಕು ಮೇಲೆ ಕ್ಲಿಕ್ ಮಾಡಬೇಕು. ಆಗ ಕರ್ನಾಟಕದ ನಕ್ಷೆ ಕಾಣುತ್ತದೆ. ಅಲ್ಲಿನಿಮ್ಮ ಜಿಲ್ಲೆಯ ಹತ್ತಿರ ಸಸಿಗಳ ಸಂಕೇತ ಕಾಣುತ್ತದೆ. ಅಲ್ಲಿ ಸಸ್ಯಕ್ಷೇತ್ರದ ಸ್ಥಳ ಮತ್ತು ಎಷ್ಟು ಸಸಿಗಳು ಲಭ್ಯವಿದೆ ಎಂಬ ಮಾಹಿತಿ ಕಾಣುತ್ತದೆ. ರೈತರು ನೇರವಾಗಿ ತಮ್ಮ ಹತ್ತಿರದ ಸಸ್ಯಕ್ಷೇತ್ರಕ್ಕೆ ಹೋಗಿ ತಮಗೆಬೇಕಾದ ಸಸಿಗಳನ್ನು ರಿಯಾಯಿತಿದರದಲ್ಲಿ ಪಡೆಯಬಹುದು.
ಯಾವ ಯಾವ ಸಸಿಗಳು ಲಭ್ಯವಿದೆ ಎಂಬುದನ್ನ ಸಹ ರೈತರು ಆನ್ಲೈನ್ ಮೂಲಕ ನೋಡಬಹುದು. ರೈತರು ಯಾವ ಯಾವ ಸಸಿಗಳು ದಾಸ್ತಾನಿದೆ ಎಂಬುದನ್ನು ತಿಳಿಯಲು ಈ
https://aranya.gov.in/Enursery/Home/queryformkannada.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅರಣ್ಯ ಇಲಾಖೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ವಿಭಾಗ ಅಂದರೆ ಜಿಲ್ಲೆ, ಉಪ ವಿಭಾಗ, ತಾಲೂಕು, ಸಸ್ಯಕ್ಷೇತ್ರದ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು. ಯೋಜನೆಯಲ್ಲಿ ಎಲ್ಲಾ ಹಾಗೂ ಜಾತಿಯಲ್ಲಿ ಎಲ್ಲಾ ಆಯ್ಕೆ ಮಾಡಿಕೊಂಡು ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು. ಆಗ ಯಾವ ಯಾವ ಸಸಿಗಳು ಹಾಗೂ ಎಷ್ಟು ಸಸಿಗಳು ಲಭ್ಯವಿದೆ ಎಂಬ ಮಾಹಿತಿ ಕಾಣುತ್ತದೆ.
ಸಸಿಗಳನ್ನು ರಿಯಾಯಿತಿ ದರದಲ್ಲಿ ಪಡೆಯಲು ರೈತರು 1926 ಸಹಾಯವಾಣಿಗೆ ಕರೆ ಮಾಡಬಹುದು. ಈ ಸಹಾಯವಾಣಿಗೆ ಕರೆ ಮಾಡಿ ತಮ್ಮ ಹತ್ತಿರದ ಸಸ್ಯಕ್ಷೇತ್ರ ಯಾವುದು ಮತ್ತು ಅಲ್ಲಿ ಯಾವ ಯಾವ ಸಸಿಗಳು ಲಭ್ಯವಿದೆ ಎಂಬ ಮಾಹಿತಿಯನ್ನು ಪಡೆಯಬಹುದು.