ತೋಟಗಾರಿಕೆ ಮಾಡಲಿಚ್ಚಿಸುವ ಹಾಗೂ ತೋಟಗಾರಿಕೆ ಮಾಡುತ್ತಿರುವ ರೈತರಿಗೆ ಸಂತಸದ ಸುದ್ದಿ. ರೈತರಿಗೆ ಶೇ. 90 ರಷ್ಟು ಸಹಾಯಧನದಲ್ಲಿ ತುಂತುರು ನೀರಾವರಿ ಘಟಕ (ಸ್ಲ್ರಿಂಕ್ಲರ್) ನಿರ್ಮಿಸಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಹಾವೇರಿ ತಾಲೂಕಿನ ಬ್ಯಾಡಗಿ ಹೋಬಳಿ ಕೇಂದ್ರದಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯಡಿಯಲ್ಲಿ 2021-22ನೇ ಸಾಲಿನಲ್ಲಿ ಸಣ್ಣ ಮತ್ತು ಅತೀಸಣ್ಣ ಹಿಡುವಳಿದಾರ ರೈತರಿಗೆ ಶೇ. 90 ರಷ್ಟು ಸಹಾಯಧನದನಲ್ಲಿ ತುಂತುರು ನೀರಾವರಿ ಘಟಕ (ಸ್ಪ್ರಿಂಕ್ಲರ್) ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ರೈತರು ತಮ್ಮ ಹೆಸರಿನ ಆಧಾರ್ ಕಾರ್ಡ್, ಸಂಬಂಧಿಸಿದ ಜಮೀನಿನ ಉತಾರ (ಪಹಣಿ) ಅ ಖಾತೆ ಉತಾರ, ಬೆಳೆ ಮತ್ತು ನೀರಾವರಿ ದೃಢೀಕರಣ, ಬ್ಯಾಂಕ್ ಪಾಸ್ ಬುಕ್ ಹಾಗೂ 20 ರೂಪಾಯಿಯ ಬಾಂಡ್ ಮತ್ತು 2 ಪಾಸ್ ಪೋರ್ಟ್ ಫೊಟೊದೊಂದಿಗೆ ಅರ್ಜಿ ಸಲ್ಲಿಸಬಹುದು.

ರೈತರು 63 ಎಂಎಂಗೆ 1932 ರೂಪಾಯಿ ಮತ್ತು 75 ಎಂಎಂ ಗೆ 2070 ರೂಪಾಯಿ ವಂತಿಗೆ ಭರಿಸಬೇಕು. ಸುಮಾರು 26690 ರೂಪಾಯಿ ಮೌಲ್ಯದ ಸ್ಪ್ರಿಂಕ್ಲರ್ ಗಳನ್ನು ರೈತರಿಗೆ ಸಹಾಯಧನದಲ್ಲಿ ನೀಡಲಾಗುವುದು. ಆದರೆ ಕಳೆದ 2018-19ನೇ ಸಾಲಿನಿಂದ ಇತ್ತೀಚೆಗೆ ತುಂತುರು ನೀರಾವರಿ ಘಟಕ (ಸ್ಪ್ರಿಂಕ್ಲರ್) ಅಳವಡಿಸಿಕೊಂಡಿದ್ದಲ್ಲಿ ಪ್ರಸಕ್ತ ಸಾಲಿನಲ್ಲಿ ಅಂತಹ ರೈತರಿಗೆ ತುಂತುರು ನೀರಾವರಿ ಘಟಕ ಪಡೆಯಲು ಅರ್ಹರಿರುವುದಿಲ್ಲ.

ಹೆಚ್ಚಿನ ವಿವರಗಳಿಗೆ ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳುವಂತೆ ಬ್ಯಾಡಗಿ ಸಹಾಯಕ ಕೃಷಿ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಂತುರು ನೀರಾವರಿ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ

ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳನ್ನು ಸ್ಥಾಪಿಸಲು  ಹಾವೇರಿ ತಾಲೂಕಿನ ರೈತರಿಂದಲೂ ಅರ್ಜಿ ಆಹ್ವಾನಿಸಲಾಗಿದೆ. ಹಾವೇರಿ ತಾಲೂಕು,ಕರ್ಜಗಿ ಮತ್ತು ಗುತ್ತಲ ಹೋಬಳಿಗಳಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ಘಟಕ ಸ್ಥಾಪಿಸಲು ಅರ್ಜಿ ಹಾಕಬಹುದು.

ರೈತರು ತಮ್ಮ ಎಫ್ಐಡಿ (ರೈತ ಗುರುತಿನ ಚೀಟಿ)ಯೊಂದಿಗೆ ಆಧಾರ್ ಕಾರ್ಡ್, ಜಮೀನಿನ ಅ ಖಾತೆ, ಜಮೀನಿನ ಉತಾರ, 2 ಫೋಟೋ, 20 ರೂಪಾಯಿಯ ಬಾಂಡ್ ನಲ್ಲಿ ಒಪ್ಪಿಗೆ ಪತ್ರ, ಗ್ರಾಮ ಲೆಕ್ಕಾಧಿಕಾರಿಯಿಂದ ನೀರಾವರಿ ಪ್ರಮಾಣ ಪತ್ರ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಂದನಿರಪೇಕ್ಷಣಾ ಪ್ರಮಾಣ ಪತ್ರ ಅರ್ಜಿಯೊಂದಿಗೆ ಲಗತ್ತಿಸಿ ತಾಲೂಕಿನ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ನೀಡಿ ತುಂತುರು ನೀರಾವರಿ ಘಟಕಗಳನ್ನು ಪಡೆಯಬಹುದು.

ಇದನ್ನೂ ಓದಿ : ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ದಾರಿ, ಸರ್ವೆನಂಬರ್, ಊರಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ರೈತರು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಕುರಿತು ವಿಚಾರಿಸಬಹುದು. ರೈತರು ತಮ್ಮ ವಂತಿಗೆಯ ಹಣವನ್ನು ಆರ್.ಟಿಜಿ.ಎಸ್ ಮೂಲಕ ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳಿಗೆ ಸಂಪರ್ಕಿಸಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ರೈತ ಫಲಾನುಭವಿಗಳು ತಮ್ಮ ಆರ್.ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಮ್ಮ ಹೋಬಳಿಗೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಲು ಹಾವೇರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಡಿ.ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *