ರೈತರಿಗೆ ಸಂತಸದ ಸುದ್ದಿ. ಯಾವ ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆಗಳು ಬಂದಿಲ್ಲವೋ ಅಂತಹ ರೈತರು ಮಾರ್ಚ್ 21 ರಿಂದ 27 ರವರೆಗೆ ರಾಜ್ಯದ ಎಲ್ಲಾ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಕಂದಾಯ ದಾಖಲೆಗಳನ್ನು ಉಚಿತವಾಗಿ ಪಡೆಯಬಹುದು ಎಂದು ಕಂದಾಯ ಇಲಾಖೆಯ ಶನಿವಾರ ಸುತ್ತೋಲೆ ಹೊರಡಿಸಿದೆ.

ಹೌದು, ರಾಜ್ಯ ಸರ್ಕಾರವು ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆ ವಿತರಿಸುವ  ಯೋಜನೆಗೆ ಚಾಲನೆ ನೀಡಲಾಗಿದ್ದು, ಈ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದರು.  ಇದರನ್ವಯ ಭೂ ಮಾಲಿಕತ್ವದ ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ  ಉಚಿತವಾಗಿ ಒದಗಿಸಲಾಗಿತ್ತು.  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಹೋಗಿ, ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ವಿತರಿಸಿದ್ದರು.  ಆದರೆ ಇನ್ನೂ ಕೆಲವು ರೈತರಿಗೆ ಕಂದಾಯ ದಾಖಲೆಗಳು ಸಿಗದಿದ್ದರಿಂದ ಈಗ ರೈತರು ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿಯೇ ದಾಖಲೆಗಳನ್ನು ಪಡೆಯಲು ಸುತ್ತೋಲೆ ಹೊರಡಿಸಿದೆ.

ಉಚಿತವಾಗಿ ಕಂದಾಯ ದಾಖಲೆ ಪಡೆಯಲು ಯಾವ ಗುರುತಿನ ಚೀಟಿ ಇರಬೇಕು?

ರೈತರಿಗೆ ಕಂದಾಯ ದಾಖಳೆ ಉಚಿತವಾಗಿ ತಲುಪಿಸಿರುವ ಬಗ್ಗೆ ಖಾತರಿಗೆ ಆಧಾರ್ ಕಾರ್ಡ್ ಬಳಸಿ ಗುರುತಿಸಬೇಕು. ಆಧಾರ್ ಕಾರ್ಡ್ ಇಲ್ಲದಿದ್ದರೆ ಪಡಿತರ ಚೀಟಿ ಬಳಸಿ ಗುರುತಿಸಬೇಕು. ರೈತರ ಮೊಬೈಲ್ ಸಂಖ್ಯೆ ಲಭ್ಯವಿದ್ದರೆ ಸಂಗ್ರಹಿಸಬೇಕು ಎಂದುಪ ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಡಾ.ಎಂ.ಎನ್. ರಾಜೇಂದ್ರ ಪ್ರಸಾದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಕಂದಾಯ ದಾಖಲೆಗಳಾದ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಗೆ ಇತ್ತೀಚೆಗೆ ಸಿಎಂ ಚಾಲನೆ ನೀಡಿದ್ದರು. ಇದರಡಿ ರಾಜ್ಯದ ರೈತ ಕುಟುಂಬಗಳಿಗೆ 4 ಕೋಟಿ ದಾಖಲೆ ವಿತರಿಸಲಾಗಿದೆ. ಮಾರ್ಚ್ 12 ಮತ್ತು 13 ರಂದು ರಾಜ್ಯ ಎಲ್ಲಾಜಿಲ್ಲೆಗಳಲ್ಲಿ 50 ಲಕ್ಷ ರೈತರಿಗೆ 5 ಕೋಟಿ ದಾಖಳೆಗಳನ್ನು ವಿತರಣೆ ಮಾಡಲಾಗಿದೆ.

ಇದನ್ನೂ ಓದಿ : ರೈತರಿಗೆ ಬೆಳೆ ವಿಮೆಯ ಸ್ಟೇಟಸ್, ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕೆಂಬ ಮಾಹಿತಿ ನೋಡಬೇಕೆ? ಇಲ್ಲಿದೆ ಮಾಹಿತಿ

ರೈತರು ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ವಿತರಿಸುವ ಯೋಜನೆಯಡಿ ಈಗಾಗಲೇ ಪಹಣಿ, ನಕಾಶೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಗಿದೆ. ಇವೇ ದಾಖಲೆಗಳನ್ನು ಯಾರಿಗೆ ವಿತರಣೆಯಾಗಿಲ್ಲವೋ ಅಂತಹ ರೈತರಿಗೆ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಉಚಿತವಾಗಿ ವಿತರಿಸಲಾಗುತ್ತಿದೆ.

ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆ ಯೋಜನೆಯಡಿ ಯಾವ ಯಾವ ರೈತರಿಗೆ ಕಂದಾಯ ದಾಖಲೆ ತಲುಪಿಲ್ಲವೋ ಅಂತಹ ರೈತರು ಮಾರ್ಚ್ 21 ರಿಂದ 27 ರ ಒಳಗಾಗಿ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ತೆಗೆದುಕೊಂಡು ಹತ್ತಿರದ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದುಕೊಳ್ಳಬಹುದು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಗಿರ್ಲಿ ಹಳ್ಳಿಯ ಹನುಮಪ್ಪ ದೊಡ್ಡಪ್ಪಯ್ಯರವರಿಗೆ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಯೋಜನೆಗೆ ಮಾರ್ಚ್ 12 ರಂದು ಚಾಲನೆ ನೀಡಿದ್ದರು.

ಇದನ್ನೂ ಓದಿ: ಪಿಎಂ ಕಿಸಾನ್ 11ನೇ ಕಂತಿನ ಹಣ ಯಾವ ರೈತರಿಗೆ ಬರಲಿದೆ? ಯಾವ ರೈತರಿಗೆ ಬರಲ್ಲ.. ಇಲ್ಲಿದೆ ಮಾಹಿತಿ

ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಿಂದ ರೈತರು ಮತ್ತು ಸಾರ್ವಜನಿಕರು ಕಚೇರಿಗಳಿಗೆ ಪದೇ ಪದೇ ಅಲೆದಾಡುವುದು ತಪ್ಪುತ್ತದೆ. ಕಂದಾಯ ದಾಖಲೆಗಳು ನೇರವಾಗಿ ರೈತರ ಮನೆ ಬಾಗಿಲಿಗೆ ತಲುಪುವುದರಿಂದ ರೈತರಿಗೆ ಸರ್ಕಾರದ ಖಾತ್ರಿಯೊಂದಿಗೆದಾಖಲೆಗಳು ಅಧಿಕೃತವಾಗಿ ಮತ್ತು ಸುಲಭವಾಗಿ ಕೈ ಸೇರಿ ಅನುಕೂಲವಾಗಲಿದೆ ಎಂದು ಕಂದಾಯ ದಾಖಲೆ ವಿತರಿಸಿ ರೈತರನ್ನುದ್ದೇಶಿಸಿ ಮಾತನಾಡಿದ್ದರು.

Leave a Reply

Your email address will not be published. Required fields are marked *