ನಿಮ್ಮ ಜಮೀನಿಗೆ ಕಾಲುದಾರಿ, ಬಂಡಿದಾರಿ ಇದೆಯೇ ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Farmer can download village map ರೈತರು ತಮ್ಮ ಜಮೀನಿನ ಮ್ಯಾಪ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬಹುದು. ಹೌದು, ರೈತರು ದೇಶದ ಯಾವುದೇ ಮೂಲೆಯಲ್ಲಿರಲಿ, ತಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ತಮ್ಮೂರಿನ ಸುತ್ತಮುತ್ತಲಿನ ಜಮೀನಿನ ಮ್ಯಾಪನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿ ರೈತರಿಗೆ ಯಾರ ಸಹಾಯವೂ ಬೇಕಿಲ್ಲ. ತಾಲೂಕು ಕಚೇರಿ, ಕಂದಾಯ ಇಲಾಖೆಗೂ ಸುತ್ತಾಡಬೇಕಿಲ್ಲ. ಅತೀ ಸುಲಭವಾಗಿ ತಮ್ಮೂರಿನ ಮ್ಯಾಪ್ ನ್ನು ವೀಕ್ಷಿಸಬಹುದು.

ರೈತರು ತಮ್ಮ ಊರಿನ ಮ್ಯಾಪನ್ನು ಕುಳಿತಲ್ಲಿಯೇ ವೀಕ್ಷಿಸಲು ಹಾಗೂ ಡೌನ್ಲೋಡ್ ಮಾಡಿಕೊಳ್ಳಲು ಕಂದಾಯ ಇಲಾಖೆಯು  ಈ ವ್ಯವಸ್ಥೆಯನ್ನು ಮಾಡಿದೆ. ರೈತರ ಜಮೀನಿನ ಸುತ್ತಮುತ್ತಲಿನ ಸರ್ವೆ ನಂಬರ್ ಗಳು, ತಮ್ಮ ಜಮೀನಿಗೆ ಹೋಗಲು ಬಂಡಿದಾರಿ, ಕಾಲುದಾರಿ ಇದೆಯೋ ಇಲ್ಲವೋ ಚೆಕ್ ಮಾಡಬಹುದು.

ಇದರೊಂದಿಗೆ ತಮ್ಮ ಊರಿನ ಸುತ್ತಮುತ್ತ ಹರಿಯುವ ಹಳ್ಳಕೊಳ್ಳಗಳು, ಕಾಲುವೆಗಳು, ನದಿಗಳು ಹರಿಯುತ್ತಿದ್ದರೆ ಯಾವ ದಿಕ್ಕಿನಲ್ಲಿ ಹರಿಯುತ್ತಿದೆ. ಯಾವ ಸರ್ವೆ ನಂಬರ್ ಪಕ್ಕದಲ್ಲಿ ನದಿ, ಹಳ್ಳಕೊಳ್ಳಗಳು ಹರಿಯುತ್ತಿವೆ ಎಂಬ ಮಾಹಿತಿ ರೈತರಿಗೆ ಸಿಗಲಿದೆ.

Farmer can download village map ಗ್ರಾಮ ನಕ್ಷೆಯನ್ನು ರೈತರು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡುವುದು ಹೇಗೆ?

ರೈತರು ಮೊಬೈಲ್ ನಲ್ಲೇ ತಮ್ಮಊರಿನ ಗ್ರಾಮದ ನಕ್ಷೆ ವೀಕ್ಷಿಸಲು ಅಥವಾ ಡೌನ್ಲೋಡ್ ಮಾಡಿಕೊಳ್ಳಲು ಈ

https://mahitikanaja.karnataka.gov.in/Revenue/RevenueVillageMap?ServiceId=1023&Type=TABLE%20&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಸಾರ್ವಜನಿಕರಿಗೆ ಮಾಹಿತಿ ನೀಡುವ ಪೇಜ್ ತೆರೆದುಕೊಳ್ಳುತ್ತದೆ. ಡೌನ್ಲೋಡ್ ಗ್ರಾಮ ನಕ್ಷೆ ಕೆಳಗಡೆಯಿರುವ ಜಿಲ್ಲೆ ಕೆಳಗಡೆ ನಿಮ್ಮ ಜಿಲ್ಲೆ, ತಾಲೂಕು ಕೆಳಗಡೆಯಿರುವ ಬಾಕ್ಸ್ ನಲ್ಲಿ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಕೆಳಗಡೆಯಿರುವ ಬಾಕ್ಸ್ ನಲ್ಲಿ ಹೋಬಳಿ ಆಐಯ್ಕೆ ಮಾಡಿಕೊಂಡು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು.

ಇದಾದ ಮೇಲೆ ರೈತರು ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.  ಆಗ ಸಲ್ಲಿಸಿ ಕೆಳಕಡೆ ಇನ್ನೊಂದು ಕಾಲಂ ಕಾಣುತ್ತದೆ. ನಕ್ಷೆ ಕೆಳಗಡೆ ನೀಲಿ ಬಣ್ಣದಲ್ಲಿ ಕಾಣುವ ನಕ್ಷೆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮ್ಮೂರಿನ ಮ್ಯಾಪ್ ನಿಮಗೆ ಕಾಣುತ್ತದೆ.

ಮ್ಯಾಪ್ ನಲ್ಲಿ ಏನೇನು ಮಾಹಿತಿ ಒಳಗೊಂಡಿರುತ್ತದೆ?

ಗ್ರಾಮ ನಕ್ಷೆಯಲ್ಲಿ ಎಡಗಡೆ ಇನ್ನೊಂದು ಕಾಲಂ ಕಾಣುತ್ತದೆ. ಅಲ್ಲಿ ಗ್ರಾಮದ ಗಡಿ ರೇಖೆ, ಸರ್ನೆ ನಂಬರ್ ಗಡಿ, ಹಿಸ್ಸಾ ನಂಬರ್ ಗಳು, ಸರ್ವೆ ನಂಬರ್ ಗಳು, ಕಾಲುದಾರಿ, ಬಂಡಿ ದಾರಿ, ಡಾಂಬರು ರಸ್ತೆ, ಹಳ್ಳ, ಬೆಟ್ಟ, ಕೆರೆ, ನೀರು ಹರಿಯುವ ದಿಕ್ಕು, ಹಾಳಾದ ಬಾವಿ, ದೇವಸ್ಥಾನ ಸೇರಿದಂತೆ ಇನ್ನಿತರ ಮಾಹಿತಿಯ ಕಾಲಂ ಇರುತ್ತದೆ.ಅದರ ಮುಂದುಗಡೆ ಗುರುತಿಸುವ ಚಿಹ್ನೆಗಳಿರುತ್ತವೆ.

ಅದರ ಆಧಾರದ ಮೇಲೆ ರೈತರು ಗಡಿಗಳನ್ನು, ಕೆರೆ ಕಟ್ಟೆಗಳನ್ನು, ದೇವಸ್ಥಾನ, ಹಾಳಾದ ಬಾವಿ, ತಮ್ಮ ಜಮೀನಿಗೆ ಹೋಗುವ ಕಾಲುದಾರಿ, ಬಂಡಿದಾರಿ ರಸ್ತೆಗಳು ಹೇಗೆ ಹಾದು ಹೋಗಿವೆ ಎಂಬುದನ್ನು ಮ್ಯಾಪ್ ಝೂಮ್ ಮಾಡಿ ವೀಕ್ಷಿಸಬಹುದು. ಮ್ಯಾಪ್ ಕಾರ್ನರ್ ನಲ್ಲಿ ಡೌನ್ಲೋಡ್ ಹಾಗೂ ಪ್ರಿಂಟ್ ಆಪಶನ್ ಸಹ ಇದೆ. ಇದನ್ನೂ ತಮ್ಮ ದಾಖಲೆಗಾಗಿ ಡೌನ್ಲೋಡ್ ಸಹ ಮಾಡಿಕೊಳ್ಳಬಹುದು. ನಂತರ ನೀವು ಬೇಕಾದ ಹಾಗೆ ದೊಡ್ಡ ಆಕಾರದಲ್ಲಿ ಪ್ರಿಂಟ್ ತೆಗೆದಿಟ್ಟುಕೊಳ್ಳಬಹುದು.

ಇದನ್ನೂ ಓದಿ ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಈ ಸಲ ಯಾರಿಗೆ ಜಮೆಯಾಗುತ್ತದೆ ಇಲ್ಲಿದೆ ಮಾಹಿತಿ

ತಮ್ಮ ಜಮೀನಿಗೆ ಕಾಲುದಾರಿ, ಬಂಡಿದಾರಿಗಳಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಇದು ರೈತರಿಗೆ ತುಂಬಾ ಪ್ರಯೋಜನಕಾರಿ ಮಾಹಿತಿಯನ್ನು ನೀಡುತ್ತದೆ. ತಮ್ಮ ಊರಿನ ಅಕ್ಕಪಕ್ಕದ ಊರಿನಿಂದ ನಿಮ್ಮೂರಿಗೆ ಹಾದು ಹೋಗುವಕ ಕಾಲುದಾರಿ, ಬಂಡಿದಾರಿಗಳ ಮಾಹಿತಿ ಸಹ ಇರುತ್ತದೆ. ಸರ್ವೆ ನಂಬರ್ ಗಳ ಅಂಕಿಗಳು ಕನ್ನಡ ಅಂಕಿಗಳಲ್ಲಿರುತ್ತದೆ. ತಮ್ಮ ಊರಿನ ಸುತ್ತಮುತ್ತಲಿರುವ ಎಲ್ಲಾ ಸರ್ವೆ ನಂಬರ್ ಗಳ ಮಾಹಿತಿ ಇರುತ್ತದೆ. ನಿಮಗೆ ನಿಮ್ಮ ಸರ್ವೆ ನಂಬರ್ ಗೊತ್ತಿದ್ದರೆ ಸಾಕು, ಅದರ ಅಕ್ಕಪಕದ್ದಲ್ಲಿ ರಸ್ತೆ ಹೇಗೆ ಹಾದು ಹೋಗುತ್ತಿದೆ ಎಂಬ ಮಾಹಿತಿ ಸುಲಭವಾಗಿ ವೀಕ್ಷಿಸಬಹುದು.

Leave a Comment