ಪಿಎಂ ಕಿಸಾನ್ ಯೋಜನೆಯ 12ನೇ ಕಂತು ಯಾರಿಗೆ ಜಮೆ? ಇಲ್ಲಿದೆ ಮಾಹಿತಿ

Written by Ramlinganna

Updated on:

ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಈ ಸಲ ಕೆಲವು ರೈತರಿಗೆ ಜಮೆ ಯಾಗುತ್ತದೆ. ಇನ್ನೂ ಕೆಲವು ರೈತರಿಗೆ ಜಮೆಯಾಗುವುದಿಲ್ಲ. ಹೌದು, ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ಎಲ್ಲಾ ರೈತರಿಗೆ ಈ ಸಲ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗುವುದಿಲ್ಲ. ಹಾಗಾದರೆ ಯಾವ ರೈತರಿಗೆ ಯೋಜನೆಯ ಹಣ ಜಮೆಯಾಗುತ್ತದೆ? ಯಾರಿಗೆ ಜಮೆಯಾಗುವುದಿಲ್ಲ? ಏಕೆ ಜಮೆಯಾಗುವುದಿಲ್ಲ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿಎಂ ಕಿಸಾನ್ ಹಣ ಯಾರಿಗೆ ಜಮೆಯಾಗುತ್ತದೆ?

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ಎಲ್ಲಾ ರೈತರಿಗೆ ಈ ಸಲ ಜಮೆಯಾಗುವುದಿಲ್ಲ. ರೈತರಿಗೆ ಇಕೆವೈಸಿ ಮಾಡಿಸಲು ಮೂರು ಸಲ ಗಡವು ನೀಡಲಾಗಿತ್ತು. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಯಾರು ಇಕೆವೈಸಿ ಮಾಡಿಸಿದ್ದಾರೋ ಅಂತಹ ರೈತರಿಗೆ ಮಾತ್ರ 12 ನೇ ಕಂತಿನ ಹಣ ಜಮೆಯಾಗುತ್ತದೆ.

ಈ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗಲ್ಲ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇಕೆವೈಸಿ ಮಾಡಿಸಿದ ಮಾತ್ರಕ್ಕೆ ಎಲ್ಲರಿಗೂ 12ನೇ ಕಂತಿನ ಹಣ ಜಮೆಯಾಗುವುದಿಲ್ಲ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಂಯ ಸೌಲಭ್ಯ ಸಿಗುತ್ತದೆ. ಆದರೆ ಒಂದೇ ಕುಟುಂಬದಲ್ಲಿ ಇಬ್ಬರು ಮೂವರು ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಪತಿ, ಪತ್ನಿ, ಮಕ್ಕಳು ಸಹ ಪಿಎಂ ಕಿಸಾನ್ ಯೋಜನೆಗೆ ತಮ್ಮ ಹೆಸರು ನೋಂದಾಯಿಸಿಕೊಂಡು ಸೌಲಭ್ಯ ಪಡೆಯುತ್ತಿರುವುದು, ಸರ್ಕಾರಿ ನೌಕರರು, ತೆರಿಗೆ ಪಾವತಿಸುತ್ತಿರುವವರು ಸಹ ಯೋಜನೆಯ ಸೌಲಭ್ಯ ಪಡೆಯುತ್ತಿರುವುದು  ಗಮನಕ್ಕೆ ಬಂದಿದೆ. ಹಾಗಾಗಿ ಇಕೆವೈಸಿ ಕಡ್ಡಾಯಗೊಳಿಸಲಾಗಿತ್ತು ಈಗ ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಜನರಿಗೆ ಜಮೆಯಾಗುವುದಿಲ್ಲ.

ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಈ ಮೆಸೆಜ್ ಬಂದರೆ ಹಣ ಜಮೆ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಎಂಟರ್ ವ್ಯಾಲ್ಯು  ಮುಂದಿರುವ ಬಾಕ್ಸ್ ನಲ್ಲಿ ಮೊಬೈಲ್ ನಂಬರ್ ನಮೂದಿಸಬೇಕು. ಎಂಟರ್ ಇಮೆಜ್ ಟೆಕ್ಸ್ಟ್  ಮುಂದಿರುವ ಬಾಕ್ಸ್ ನಲ್ಲಿ ಬಾಕ್ಸ್ ಕೆಳಗಡೆಯಿರುವ ಇಮೆಜ್ ಕೋಡ್ ನಮೂದಿಸಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ waiting for approval by state ಅಥವಾ FTO generated and payment confirmation is pending ಮೆಸೆಜ್ ಬಂದರೆ ನಿಮಗೆ ಪಿಎ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಜಮೆಯಾಗುವ ಸಾಧ್ಯತೆಯಿದೆ.

ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು google ನಲ್ಲಿ pm kisan ಎಂದು ಟೈಪ್ ಮಾಡಬೇಕು. ಆಗ ಮೇಲ್ಗಡೆ ಕಾಣುವ ಪಿಎಂ ಕಿಸಾನ್ ಯೋಜನೆಯ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ eKYC New ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಆಧಾರ್ ನಂಬರ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.

ಏನಿದು ಪಿಎಂ ಕಿಸಾನ್ ಯೋಜನೆ?

ರೈತರ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂಪಾಯಿಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಈ ಯೋಜನೆ ಪ್ರಾರಂಭಗೊಂಡ ಮೇಲೆ ಇಲ್ಲಿಯವರೆಗೆ 11 ಕಂತುಗಳು ರೈತರ ಖಾತೆಗೆ ಜಮೆ ಮಾಡಲಾಗಿದೆ.12 ನೇ ಕಂತಿನ ಹಣ ಅತೀ ಶೀಘ್ರದಲ್ಲಿ ಜಮೆ ಮಾಡಲಾಗುವುದು. ಆದರೆ ಪಿಎಂ ಕಿಸಾನ್ ಯೋಜನೆಯ ಲಾಭವನ್ನು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲವೆಂದು ಇಕೆವೈಸಿ ಕಡ್ಡಾಯಗೊಳಿಸಲಾಗಿದೆ.

Leave a Comment