ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಸ್ಥಾಪನೆಗೆ ಸಬ್ಸಿಡಿ

Written by By: janajagran

Updated on:

Farm Machinery Bank subsidy ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದಾಗಿ ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮಾಹಿತಿಯ ಕೊರತೆಯಿಂದಾಗಿ ರೈತರಿಗೆ ಯೋಜನೆಗಳ ಸೌಲಭ್ಯಗಳು ಸಿಗುತ್ತಿಲ್ಲ.  ಆಧುನಿಕ ತಂತ್ರಜ್ಞಾನ ಎಲ್ಲಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ.

ಈಗ ಕೃಷಿಯಲ್ಲಿಯೂ ಆಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆ ಕಡಿಮೆಯಾಗುತ್ತಿದ್ದರಿಂದ ಸರ್ಕಾರವು ರೈತರಿಗೆ ನೆರವು ನೀಡಲು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.  ಹೌದು,  2021-22ನೇ ಕೃಷಿ  ಯಾಂತ್ರೀಕರಣ ಉಪಭಿಯಾನ ಯೋಜನೆಡಿಯಲ್ಲಿ   ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಆರಂಭಿಸಲಾಗಿದೆ.

ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಯೋಜನೆ ಎಂದರೇನು? ಅದರ ಉದ್ದೇಶವೇನು? ಅದರ ಪ್ರಯೋಜನ, ಕೇಂದ್ರ ಆರಂಭಿಸಲು ಅರ್ಹತೆ, ಅರ್ಜಿ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಹೋಬಳಿ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು. ಇದರಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿರುವ ಕೆಲವು ಗ್ರಾಮಗಳಿಗೆ ಮಾತ್ರ ಈ ಕೇಂದ್ರದ ಸೌಲಭ್ಯ ಸಿಗುತ್ತಿತ್ತು. ದೂರದ ಗ್ರಾಮಗಳಿಗೆ ಕೃಷಿ ಯಂತ್ರಧಾರೆ ಕೇಂದ್ರಗಳ ಸೌಲಭ್ಯ ಸಿಗುತ್ತಿರಲಿಲ್ಲ. ಹಾಗಾಗಿ ಈಗ ಗ್ರಾಮಗಳಲ್ಲಿಯೂ ಕೃಷಿ ಯಂತ್ರೋಪಕರಣಗಳ ಕೇಂದ್ರ ಸ್ಥಾಪಿಸಲು ಸರ್ಕಾರ ಮುಂದಾಗಿದೆ.

2021-22ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ Farm Mechanization Bank ಸ್ಥಾಪಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ಥಳೀಯವಾಗಿ ಕೃಷಿ ಯಂತ್ರೋಪಕರಣಗಳ ತಯಾರಿಕೆ ಸೌಲಭ್ಯದೊಂದಿಗೆ ಕೃಷಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ಆರಂಭಿಸಲಾಗಿದೆ. ಯುವ ರೈತರನ್ನು ಕೃಷಿಯಲ್ಲೇ ಉಳಿಸಿಕೊಳ್ಳುವಲ್ಲಿ ಅವರಿಗೆ ಉದ್ಯೋಗ ಅವಕಾಶ ಸೃಷ್ಟಿಸುವ ಉದ್ದೇಶದಿಂದ ಗ್ರಾಮೀಣ ಕೃಷಿಯಂತ್ರೋಪಕರಣಗಳ ಕಾರ್ಯಕ್ರಮವನ್ನುಆಯೋಜಿಸಲಾಗಿದೆ.

ಇದನ್ನೂ ಓದಿ : ರೈತರ ಖಾತೆಗೆ ಜಮೆಯಾಯಿತು ಪರಿಹಾರದ ಹೆಚ್ಚುವರಿ ಹಣಃ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಕೃಷಿ ಯಂತ್ರೋಪಕರಣಗಳು, ಪಂಪ್ ಸೆಟ್ಗಳು, ಕೊಳವೆ ಬಾವಿಗಳು, ರಿಪೇರಿ ಮಾಡುವ, ಸೂಕ್ಷ್ಮ ನೀರಾವರಿ ಘಟಕಗಳ ದುರಸ್ಥಿ ಮಾಡುವ ಸೌಲಭ್ಯವನ್ನು ಗ್ರಾಮಗಳಲ್ಲಿಯೇ ನೀಡಲಾಗುವುದು.  ಸದರಿ ಕೇಂದ್ರಗಳನ್ನು ಬ್ಯಾಂಕ್ ಲೋನ್ ಆಧಾರದ ಮೇಲೆ ಒಂದು ಬಾರಿ (Bank Ended Subsidy)  ಸಹಾಯಧನ ನೀಡುವ ಮೂಲಕ ಗ್ರಾಮೀಣ ಕೃಷಿ ಯಂತ್ರೋಪಕರಣ ಕೇಂದ್ರ ಸ್ಥಾಪಿಸಿ ಮತ್ತು ಮುನ್ನೆಡಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ಹೋಬಳಿಯ  ಶಿಲಾರಕೋಟ ಗ್ರಾಮದಲ್ಲಿ ಒಂದು, ಜೇವರ್ಗಿ ತಾಲೂಕಿನ ನೆಲೋಗಿ ಹೋಬಳಿಯ ಮುಂದೇವಾಲ ಗ್ರಾಮದಲ್ಲಿ ಒಂದು,ಕಲಬುರಗಿ ಜಿಲ್ಲೆಯ ಕಮಲಾಪುರ ಹೋಬಳಿಯ ಗೊಬ್ಬೂರವಾಡಿ ಗ್ರಾಮದಲ್ಲಿ ಒಂದು, ಚಿತ್ತಾಪುರ ತಾಲೂಕಿನ ಮಾಡಬೂಳ ಹೋಬಳಿಯ ಪೇಠಶಿರೂರ ಗ್ರಾಮದಲ್ಲಿ ಒಂದು,ಚಿಂಚೋಳಿ ತಾಲೂಕಿನ ಐನಾಪೂರ ಹೋಬಳಿಯ ಚಿಮ್ಮನಚೋಡ ಗ್ರಾಮದಲ್ಲಿ ಒಂದು, ಆಳಂದ ತಾಲೂಕಿನ ಖಜೂರಿ  ಹೋಬಳಿಯ ಕಿಣ್ಣಿಸುಲ್ತಾನ ಗ್ರಾಮದಲ್ಲಿ ಒಂದು, ಅಫಜಲ್ಪುರ ತಾಲೂಕಿನ ಆತನೂರ ಹೋಬಳಿಯ ಧನ್ನೂರ ಗ್ರಾಮದಲ್ಲಿಒಂದು ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ.

ಇದೇ ರೀತಿ ರಾಜ್ಯದ ಇತರ ಹೋಬಳಿ ವ್ಯಾಪ್ತಿಯಲ್ಲಿರುವ ಗ್ರಾಮದಲ್ಲಿಯೂ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿರುತ್ತದೆ. ರೈತರು ತಮ್ಮ ಹತ್ತಿರದ ರೈತ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Farm Machinery Bank subsidy ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪಿಸಲು ಅರ್ಹತೆ

ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪಿಸುವುದಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವವರು  ಆಯಾ ಗ್ರಾಮದ ನೋಂದಾಯಿತ ರೈತ ಸಹಕಾರಿ ಸೊಸೈಟಿಗಳ ಸದಸ್ಯರಾಗಿರಬೇಕು. ನೋಂದಾಯಿತ ರೈತರ ಸೊಸೈಟಿಯಾಗಿರಬೇಕು. ರೈತ ಉತ್ಪಾದಕ ಸಂಸ್ಥೆಗಳು (ಎಫ್.ಪಿಓ)  ಮತ್ತು ಗ್ರಾಮ ಪಂಚಾಯತ್ ಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಎಲ್ಲಿ ಸಿಗುತ್ತದೆ?

ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪಿಸಲು ಬೇಕಾಗುವ ಅರ್ಜಿಗಳು ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಸಿಗುತ್ತದೆ. ಕಲಬುರಗಿ ಜಿಲ್ಲೆಯ ರೈತರು ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಮಾರ್ಚ್ 2 ರಿಂದ ಪಡೆದು ಅರ್ಜಿಗಳನ್ನು ಮಾರ್ಚ್ 5 ರೊಳಗಾಗಿ ಸಲ್ಲಿಸಬೇಕು. ಅಗತ್ಯ ದಾಖಲೆಗಳೊಂದಿಗೆ ರೈತರು ಮಾರ್ಚ್ 5 ಸಾಯಂಕಾಲ 5 ರೊಳಗೆ ಸಲ್ಲಿಸಬೇಕು.

ಇದನ್ನೂ ಓದಿ: ಮೊಬೈಲ್ ನಲ್ಲೇ ಖಾತಾ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

ಹೆಚ್ಚಿನ ಮಾಹಿತಿಗಾಗಿ ರೈತರು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ಅಥವಾ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯವನ್ನು ಸಂಪರ್ಕಿಸಬಹುದು.

Leave a Comment