ಪಿಎಂ ಕಿಸಾನ್ ಯೋಜನೆ ಹಣ ಜಮೆ ಸ್ಟೇಟಸ್ ಚೆಕ್ ಮಾಡಿ

Written by Ramlinganna

Updated on:

How to check PM Kisan status ರೈತರು ತಮ್ಮ ಮೊಬೈಲ್ ನಂಬರ್ ಹಾಕಿ ತಮ್ಮ ಪಿಎಂ ಕಿಸಾನ್ ಯೋಜನೆಯ ಅಕೌಂಟ್ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಹೌದು, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಮೊಬೈಲ್  ನಂಬರ್ ಹಾಗೂ ಇಮೆಜ್ ಟೆಕ್ಸ್ಟ್ ಟೈಪ್ ಮಾಡಿ ಪಿಎಂ ಕಿಸಾನ್ ಯೋಜನೆಗೆ ನೀವು ಅರ್ಹರಿದ್ದೀರಾ ಎಂಬುದನ್ನು ಚೆಕ್ ಮಾಡಬಹುದು.  ಏಕೆಂದರೆ ಪಿಎಂ ಕಿಸಾನ್ ಯೋಜನಯೆ 12ನೇ ಕಂತಿನ ಹಣ ಜಮೆಯಾಗಲು ಕ್ಷಣಗಣನೆ ಶುರುವಾಗಿದೆ. ಈ ಸಲ ಕೆಲವು ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗುವ ಸಾಧ್ಯತೆ ಕಡಿಮೆಯಿದೆ. ಇಕೆಂದರೆ ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಪಿಎಂ ಕಿಸಾನ್ ಯೋಜನೆಯ ಲಾಭ ಸಿಗುವುದರಿಂದ ಕೆಲವು ರೈತರು ಪಿಎಂ ಕಿಸಾನ್ ಯೋಜನೆಯಿಂದ ವಂಚಿತಗೊಳ್ಳುವ ಸಾಧ್ಯತೆಯಿದೆ.

How to check PM Kisan status ಪಿಎಂ ಕಿಸಾನ್ ಯೋಜನೆಯ ನಿಮ್ಮ ಖಾತೆ ಆ್ಯಕ್ಟಿವ್ ಇದೆಯೇ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಮೊಬೈಲ್ ನಲ್ಲೇ ಪಿಎಂ ಕಿಸಾನ್ ಯೋಜನೆಯ ಅಕೌಂಟ್ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಇದಕ್ಕಾಗಿ ರೈತರು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ತೆರೆದುಕೊಳುಳ್ಳುತ್ತದೆ. ಅಥವಾ ಗೂಗಲ್ ನಲ್ಲಿ  pm kisan ಎಂದು ಟೈಪ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಲಿಂಕ್ ಮೇಲೆ ಕ್ಲಿಕ್ ಮಾಡಿದ ಫಾರ್ಮರ್ ಕಾರ್ನರ್ ನಲ್ಲಿ  Beneficiary status ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೆಜ್ ಟೆಕ್ಸಟ್ ಟೈಪ್ ಮಾಡಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮ್ಮ ಪಿಎಂ ಕಿಸಾನ್ ಯೋಜನೆಯ  ಸ್ಟೇಟಸ್ ಪೇಜ್ ಓಪನ್ ಆಗುತ್ತದೆ.

ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಮೊಬೈಲ್ ನಂಬರಿನಕೊನೆಯ ನಾಲ್ಕು ಅಂಕೆ, ರಾಜ್ಯ, ಜಿಲ್ಲೆ, ಗ್ರಾಮ, ರೆಜಿಸ್ಟರ್ ನಂಬರ್ ಇರುತ್ತದೆ. ಆಧಾರ್ ಕಾರ್ಡ್ ವೆರಿಫೈಡ್ ಆಗಿದೆಯೋ ಇಲ್ಲವೋ ಚೆಕ್ ಮಾಡಬೇಕು. ನಂತರ ನಿಮ್ಮ ಅಕೌಂಟ್ ಆ್ಯಕ್ಟಿವ್ ಇದೆಯೋ ಇಲ್ಲ ವೋ ಎಂಬ ಮೆಸೆಜ್ ಇರುತ್ತದೆ. ಅದರ ಮುಂದುಗಡೆ ಆ್ಯಕ್ಟಿವ್ ಇದ್ದರೆ ಆ್ಯಕ್ಟಿವ್ಇರುತ್ತದೆ. ಒಂದು ವೇಳೆ ನಿಮ್ಮ ಖಾತೆ ಆ್ಯಕ್ಟಿವ್ ಇಲ್ಲದಿದ್ದರೆ ಯಾವ ಕಾರಣಕ್ಕಾಗಿ ಇನ್ ಆ್ಯಕ್ಟಿವ್ ಆಗಿದೆ ಎಂಬ ಮೆಸೆಜ್ ಇರುತ್ತದೆ. ಒಂದು ವೇಳೆ ನೀವು ತೆರಿಗೆ ಪಾವತಿಸುವರಾಗಿದ್ದರೆ Beneficiary is inactive due to income tax payee ಎಂಬ ಮೆಸೆಜ್ ಇರುತ್ತದೆ.

ಪಿಎಂ ಕಿಸಾನ್ ಯೋಜನೆಯ ಹಣ ಯಾವ ತಿಂಗಳಲ್ಲಿ ಜಮಯಾಗುತ್ತದೆ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿಯಂತೆ ಒಟ್ಟು 6 ಸಾವಿರ ರೂಪಾಯಿ ಜಮೆಯಾಗುತ್ತದೆ. ಏಪ್ರೀಲ್ ರಿಂದ ಜುಲೈ ತಿಂಗಳೊಳಗೆ ಮೊದಲ ಕಂತು ಜಮೆಯಾಗುತ್ತದೆ.

ಇದನ್ನೂ ಓದಿ : ಬೆಳೆ ಹಾನಿಯಾದ ರೈತರು ಇಂದೇ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಿರಿ: ಅರ್ಜಿ ಎಲ್ಲಿ ಸಲ್ಲಿಸಬೇಕು? ಇಲ್ಲಿದೆ ಮಾಹಿತಿ

ಅದೇ ರೀತಿ ಎರಡನೇ ಕಂತು ಆಗಸ್ಟ್ ತಿಂಗಳಿಂದ ನವೆಂಬರ್ ತಿಂಗಳೊಳಗೆ ಜಮೆಯಾಗುತ್ತದೆ. ಮೂರನೇ ಕಂತು ಡಿಸೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳೊಳಗೆ ಜಮೆಯಾಗುತ್ತದೆ. 11ನೇ ಕಂತಿನ ಹಣ ಮೇ 31 ರಂದು ಜಮೆಯಾಗಿದ್ದರಿಂದ 12ನೇ ಕಂತಿನ ಹಣ ಸೆಪ್ಟೆಂಬರ್ ಅಂತ್ಯದೊಳಗೆ ಜಮೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಾಗಿ ನಿಮ್ಮ ಖಾತೆಗೆ ಹಣ ಜಮೆಯಾಗುತ್ತೋ ಇಲ್ಲವೋ ಎಂಬುದನ್ನು ಸ್ಟೇಟಸ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

Leave a Comment