ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ ಈ ಮಾರ್ಚ್ ತಿಂಗಳ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ರೈತರ ಖಾತೆಗೆ ಜಮೆಯಾಗಲಿದೆ. ಆದರೆ ಕಳೆದ 10ನೇ ಕಂತಿನ ಹಣ ಕೆಲವು ರೈತರಿಗೆ ಜಮೆಯಾಗಿರಲಿಲ್ಲ. ಇದಕ್ಕೆ ಕಾರಣ ಇಕೆವೈಸಿ ಎನ್ನಲಾಗುತ್ತಿದೆ. ಹಾಗಾಗಿ ರೈತರಿಗೆ ಮಾರ್ಚ್ 31 ರೊಳಗೆ ಎಕೆವೈಸಿ ಮಾಡಿಸಿಕೊಳ್ಳಬೇಕೆಂದು ಗಡವು ನೀಡಲಾಗಿತ್ತು. ಈಗಾಗಲೇ ಕೆಲವು ರೈತರು ಇಕೆವೈಸಿ ಮಾಡಿಸಿಕೊಂಡಿದ್ದಾರೆ ಇನ್ನೂಕೆಲವು ರೈತರು ಮಾಡಿಸಿರಲಿಕ್ಕಿಲ್ಲ. ಮಾರ್ಚ್ 31 ರೊಳಗೆ ಇಕೆವೈಸಿ ಮಾಡಿಸಿದರೆ ಮಾತ್ರ ಮುಂದಿನ ಕಂತು ರೈತರ ಖಾತೆಗೆ ಜಮೆಯಾಗಲಿದೆ. ಪಿಎಂ ಕಿಸಾನ್ ಯೋಜನೆ 11ನೇ ಕಂತು ಇಕೆವೈಸಿ ಮಾಡಿಸಿದರೈತರಿಗೆ ಮಾತ್ರ ಬರಲಿದೆ. ಇಕೆವೈಸಿ ಮಾಡಿಸದೆ ಇರುವ ರೈತರಿಗೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ
ಏನಿದು ಇಕೆವೈಸಿ?
ಇಕೆವೈಸಿ ಎಂದರೆ ಎಲೆಕ್ಟ್ರಾನಿಕ್ ನೋ ಯುವರ್ ಕ್ಲಿಯಂಟ್ (Electronic Know your Client) ಅಂದರೆ ಬ್ಯಾಂಕುಗಳಲ್ಲಿ ಇದನ್ನು ಬಳಸಲಾಗುತ್ತದೆ. ಆಧಾರ್ ಆಧಾರಿತ ದೃಢೀಕರಣದ ಮೂಲಕ ಗ್ರಾಹಕರ ಗುರುತನ್ನು ವಿದ್ಯುನ್ಮಾನವಾಗಿ ಪರಿಶೀಲಿಸುವುದನ್ನು ಇಕೈವೈಸಿ ಎನ್ನುತ್ತಾರೆ. ಆಧಾರ್ ಕಾರ್ಡ್ ಮೂಲಕ ರೈತರ ಅಂದರೆ ಫಲಾನುಭವಿಗಳ ಗುರುತು ಮತ್ತು ವಿಳಾಸದ ಪುರಾವೆಯನ್ನು ಒದಗಿಸುತ್ತದೆ. ಹಾಗಾಗಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಲು ಇಕೆವೈಸಿ ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ: ಜಮೀನುಗಳ ಸರ್ವೆ ನಂಬರ್ ಸಹಿತ ಬಂಡಿದಾರಿ, ಹಳ್ಳಕೊಳ್ಳಗಳ ಮ್ಯಾಪ್ ಬೇಕೆ? ಇಲ್ಲಿದೆ ಮಾಹಿತಿ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಲು ಮಾರ್ಚ್ 31 ರೊಳಗೆ ಎಲ್ಲಾ ರೈತ ಸಂಪರ್ಕ ಕೇಂದ್ರ ಅಥವಾ ಸಿ.ಎಸ್.ಸಿ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆಯಿಂದ ಮನವಿ ಮಾಡಿಕೊಡಲಾಗುತ್ತಿದೆ.ಈ ಕುರಿತು ಪತ್ರಿಕೆಗಳಲ್ಲಿಯೂ ಕೃಷಿ ಇಲಾಖೆಯ ಅಧಿಕಾರಿಗಳು ಪ್ರಕಟಣೆ ನೀಡಿ ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ಇನ್ನೂ 15 ದಿನಗಳ ಕಾಲಾವಕಾಶವಿದೆ. ಆದಷ್ಟು ಬೇಗ ರೈತರು ಹತ್ತಿರದ ಸಿ.ಎಸ್.ಸಿ ಕೇಂದ್ರಕ್ಕೆ ಹೋಗಿ ಪಹಣಿ, ಆಧಾರ್ ಕಾರ್ಡ್, ಮತ್ತು ಬ್ಯಾಂಕ್ ಪಾಸ್ಬುಕ್ ನೊಂದಿಗೆ ಇಕೆವೈಸಿ ಮಾಡಿಸಿಕೊಳ್ಳಬಹುದು.
ಇಕೆವೈಸಿ ಮಾಡಿಸುವುದು ಹೇಗೆ?
ಇಕೆವೈಸಿ ಮಾಡಲು
https://pmkisan.gov.in/NewHome3.aspx
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ಫಾರ್ಮರ್ ಕಾರ್ನಾರ್ ಕೆಳಗಡೆ ಇಕೈವೈಸಿ ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ಕಾರ್ಡ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರಮೊಬೈಲ್ ನಂಬರ್ ನಮೂದಿಸಬೇಕು. ಆಗ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಮೊಬೈಲಿಗೆ ಬರುವ ಓಟಿಪಿಯನ್ನು ನಮೂದಿಸಿ ಇಕೆವೈಸಿ ಮಾಡಬೇಕುಕ. ಇಕೆವೈಸಿ Successfully submitted ಎಂಬ ಸಂದೇಶ ಬಂದರೆ ನೀವು ಮಾಡಿದ ಇಕೆವೈಸಿ ಯಶಸ್ವಿಯಾಗಿದೆ ಎಂದರ್ಥ.
ಇಕೆವೈಸಿ ಸ್ಟೇಟಸ್ ನೋಡುವುದು ಹೇಗೆ?
ರೈತರು ಮೊಬೈಲ್ ನಲ್ಲಿಯೇ ಇಕೆವೈಸಿ ಮಾಡಿರುವುದು ಯಶಸ್ವಿಯಾಗಿದೆಯೋ ಇಲ್ಲವೋ ಎಂಬುದನ್ನು ನೋಡಲು
https://pmkisan.gov.in/BeneficiaryStatus.aspx
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ಓಪನ್ಆಗುತ್ತದೆ. ಅಲ್ಲಿ ನಿಮ್ಮ ಆಧಾರ್ ನಂಬರ್ ಅಧವಾ ಮೊಬೈಲ್ ನಂಬರ್ ಈ ಎರಡರಲ್ಲಿ ಯಾವುದಾದರೊಂದನ್ನು ನಮೂದಿಸಬೇಕು. ಒಂದು ವೇಳೆ ನೀವು ಅಕೌಂಟ್ ನಂಬರ್ ನಮೂದಿಸಿ ಸ್ಟೇಟಸ್ ಚೆಕ್ ಮಾಡುವುದಾದರೆ ಅಕೌಂಟ್ ನಂಬರ್ ಆಯ್ಕೆ ಮಾಡಿ ಅಕೌಂಟ್ ನಂಬರ್ ನಮೂದಿಸಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ನೀವು ಆಧಾರ್ ಕಾರ್ಡ್ ನಮೂದಿಸಿ ಚೆಕ್ ಮಾಡುವುದಾದರೆ ಆಧಾರ್ ಕಾರ್ಡ್ ನಮೂದಿಸಬೇಕು. ನಂತರ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಸ್ಟೇಟಸ್ ಪೇಜ್ ಓಪನ್ ಆಗುತ್ತದೆ.ಅಲ್ಲಿ PMFS/Bank status ಮುಂದುಗಡೆ Farmer Records has been accepted by PFMS/Bank ಇದ್ದರೆ ನೀವು ಮಾಡಿಸಿದ ಇಕೆವೈಸಿ ಯಶಸ್ವಿಯಾಗಿದೆ ಎಂದು ತಿಳಿದುಕೊಳ್ಳಬೇಕು. ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ನಿಮ್ಮ ಖಾತೆಗೆ ಜಮೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಇಕೆವೈಸಿ ಪೆಂಡಿಗ್ ಬೈ ಸ್ಟೇಟ್ ಅಥವಾ ಇನ್ನೇನಾದರು ಇದ್ದರೆ ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಿ.ಎಸ್.ಸಿ ಸೆಂಟರ್ ಗೆ ಹೋಗಿ ಇಕೆವೈಸಿ ಮಾಡಿಸಿಕೊಳ್ಳಬಹುದು.