ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳ ಸ್ಟೇಟಸ್ ನಲ್ಲಿ ಪೇಮೇಂಟ್ ಪ್ರೋಸೆಸ್ಡ್ (Payment Processed) ಕಾಣುತ್ತಿದ್ದರೆ ನಿಮಗೆ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ ಜಮೆಯಾಗಲಿದೆಯೇ? ಅಥವಾ ಜಮೆಯಾಗುವುದಿಲ್ಲ ಎಂಬುದರ ಮಾಹಿತಿ ಇಲ್ಲಿದೆ.

ಹೌದು, ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ನಲ್ಲಿ ಈಗ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಈಗ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲು ಪೇಮೆಂಟ್ ಪ್ರೋಸೆಸ್ಡ್ ಎಂದು ಬಂದರೆ ಮಾತ್ರ ರೈತರ ಖಾತೆಗೆ ಹಣ ಜಮೆಯಾಗಲಿದೆ. ಈಗಾಗಲೇ ಈ ಹಣವನ್ನು ರೈತರ ಖಾತೆಗೆ ಜಮೆ ಮಾಡಲು ಸರ್ಕಾರವು ಬ್ಯಾಂಕಿಗೆ ಹಣ ವರ್ಗಾವಣೆ ಮಾಡಲಾಗಿದೆ. ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಲು ತಿಳಿಸಿದ ದಿನಾಂಕಕ್ಕೆ ರೈತರ ಖಾತೆಗೆ ಹಣ ಜಮೆಯಾಗಲಿದೆ.

ಮೊಬೈಲ್ ನಲ್ಲೇ ಪಿಎಂ ಕಿಸಾನ್ ಸ್ಟೇಟಸ್ ನೋಡುವುದು ಹೇಗೆ?

ಪಿಎಂ ಕಿಸಾನ್ ಪೇಮೆಂಟ್ ಪ್ರೊಸೆಸ್ಡ್ ಸ್ಟೇಟಸ್ ಎಲ್ಲಿ ಚೆಕ್ ಮಾಡಬೇಕೆಂದುಕೊಂಡಿದ್ದರೆ ನಿಮ್ಮ ಸಂಶಯಕ್ಕೆ ಇಲ್ಲಿದೆ ಮಾಹಿತಿ. ರೈತರು ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ನಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಚೆಕ್ ಮಾಡಬೇಕಾದರೆ ಈ

https://pmkisan.gov.in/beneficiarystatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಆಧಾರ್ ಕಾರ್ಡ್ ನಮೂದಿಸಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಖಾತೆಗೆ ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಜಮೆಯಾಗಿದೆ ಎಂಬುದನ್ನು ನೋಡಬಹುದು. ಮುಂದಿನ ಕಂತು ಅಂದರೆ ಸರ್ಕಾರ ಬಿಡುಗಡೆ ಮಾಡುವ 11 ನೇ ಕಂತಿನ ಹಣ ಜಮೆಯ ಸ್ಟೇಟಸ್ ಸಹ ಚೆಕ್ ಮಾಡಬಹುದು.

ನಿಮ್ಮ ಸ್ಟೇಟಸ್ ನಲ್ಲಿ ಪೇಮೆಂಟ್ ಪ್ರೊಸೆಸ್ಡ್ ಎಂದು ಕಂಡರೆ ಖಂಡಿತವಾಗಿ ಅತೀ ಶೀಘ್ರದಲ್ಲಿ ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಜಮೆಯಾಗಲಿದೆ. ಒಂದುವೇಳೆ Rft signed ಎಂಬುದು ಕಂಡರೆ ಪಿಎಂ ಕಿಸಾನ್ ಹಣ ಪೇಮೆಂಟ್ ಮಾಡಲು ರಾಜ್ಯ ಸರ್ಕಾರದಿಂದ ಅಂಗೀಕೃತವಾಗಿದೆ ಎಂದರ್ಥ.

ಒಂದು ವೇಳೆ waiting for  approval by state ಇದ್ದರೆ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಹಣವನ್ನು ಈ ರೈತರ ಖಾತೆಗೆ ಜಮೆ ಮಾಡಬಹುದೇ ಎಂದು ರಾಜ್ಯಸರ್ಕಾರಕ್ಕೆ ಕಳಿಸುತ್ತಾರೆ. ರಾಜ್ಯ ಸರ್ಕಾರದಿಂದ ಇನ್ನು ಅನುಮೋದನೆ ಸಿಕ್ಕಿಲ್ಲ ಎಂದರ್ಥ.

ಅತೀ ಶೀಘ್ರದಲ್ಲಿ ರಾಜ್ಯಸರ್ಕಾರದಿಂದ ಅಪ್ರೂವಲ್ ದೊರೆತ ನಂತರ Rft signed ಎಂದು ಬರುತ್ತದೆ. ನಂತರ Payment processed ಎಂದು ಬರುತ್ತದೆ. ಇದೆಲ್ಲೆ ಇನ್ನೆರಡು ವಾರದಲ್ಲಿ ಮುಗಿದು ಮೇ ಅಂತ್ಯದೊಳಗೆ ರೈತರ ಖಾತೆಗೆ ಹಣ ಜಮೆಯಾಗಲಿದೆ.

ರೈತರು ಇಕೆವೈಸಿ ಮಾಡಿಸದಿದ್ದರೆ ಇನ್ನೂ ಅವರಿಗೆ ಕಾಲಾವಕಾಶವಿದೆ. ಮೇ 31 ರೊಳಗೆ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ.ಒಂದು ವೇಳೆ ನೀವು ಇನ್ನೂ ಇಕೆವೈಸಿ ಮಾಡಿಸದಿದ್ದರೆ ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಬಹುದು. ನಿಮ್ಮ ಮೊಬೈಲ್ ನಲ್ಲಿಯೂ ಇಕೆವೈಸಿ ಮಾಡಿಸಬಹುದು. ಇದು ತುಂಬಾ ಸರಳವಾಗಿರುತ್ತದೆ.

ಪಿಎಂ ಕಿಸಾನ್ ಯೋಜನೆಯ ಮುಖ್ಯ ಪುಟದಲ್ಲಿ  ಫಾರ್ಮರ್ ಕಾರ್ನರ್ ಕೆಳಗಡೆ eKYC New ಮೇಲೆ ಕ್ಲಿಕ್ ಮಾಡಿ  ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಸ್ವತಃ ರೈತರೇ ಇಕೆವೈಸಿ ಮಾಡಿಕೊಳ್ಳಬಹುದು.

ಮೊಬೈಲ್ ನಲ್ಲೇ ಇಕೆವೈಸಿ ಮಾಡಿಸುವುದು ಹೇಗೆ?

ರೈತರು ಮೊಬೈಲ್ ನಲ್ಲೇ ಇಕೆವೈಸಿ ಮಾಡಬೇಕಾದರೆ ಈ

https://exlink.pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಮೊಬೈಲ್ ನಂಬರ್ ನಮೂದಿಸಬೇಕು. ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.  ನಿಮ್ಮ ಮೊಬೈಲಿಗೆ ಒಟಿಪಿ ಬರುತ್ತದೆ. ಓಟಿಪಿ ನಮೂದಿಸಿ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ನಿಮ್ಮಮೊಬೈಲಿಗೆ ಇಕೆವೈಸಿ ಸಕ್ಸೆಸ್ಫುಲಿ ಸಬ್ಮಿಟೆಡ್ ಎಂಬ ಮೆಸೆಜ್ ಬರುತ್ತದೆ. ಆದ ನೀವು ಮಾಡಿದ ಇಕೆವೈಸಿ ಮಾಡಿದ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಆನ್ಲೈನ್ ನಲ್ಲಿ ಇಕೆವೈಸಿ ಮಾಡಿಸಲು ನಿಮಗೆ ಸಮಸ್ಯೆಯಾಗುತ್ತಿದ್ದರೆ ಹತ್ತಿರದ ಸಿಎಸ್.ಸಿ ಕೇಂದ್ರಕ್ಕೆ ಹೋಗಿ ನಿಮ್ಮ ಆಧಾರ್ ಕಾರ್ಡ್, ಮೊಬೈಲ್, ನಂಬರ್, ಪಹಣಿ ಅಗತ್ಯವಿದ್ದರೆ ಸಲ್ಲಿಸಬೇಕು. ಇದರೊಂದಿಗೆ ಬ್ಯಾಂಕ್ ಪಾಸ್ ಬುಕ್ ಇರಬೇಕು. ಈ ದಾಖಲೆಗಳನ್ನು ಸಲ್ಲಿಸಿ ಸಿ.ಎಸ್.ಸಿ ಕೇಂದ್ರಗಳಲ್ಲಿ ಇಕವೈಸಿ ಮಾಡಿಸಬಹುದು. ಮೇ 31 ರೊಳಗೆ ಇಕೆವೈಸಿ ಮಾಡಿಸಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಬೇಕೆಂದು ಕೋರಲಾಗಿದೆ.

Leave a Reply

Your email address will not be published.