ಪಿಎಂ ಕಿಸಾನ್ ಮತ್ತು ಸಿಎಂ ಕಿಸಾನ್ ಯೋಜನೆ ಎರಡು ಬೇರೆ

Written by By: janajagran

Updated on:

PmKisan and CMkisan status ರಾಜ್ಯದ ಬಹುತೇಕ ರೈತರಿಗೆ ಸಿಎಂ ಕಿಸಾನ್ ಯೋಜನೆ ಬಗ್ಗೆ ಗೊತ್ತಿರಲಿಕ್ಕಿಲ್ಲ. ಏಕೆಂದರೆ ಬಹುತೇಕ ರೈತರು ಪಿಎಂ ಕಿಸಾನ್ ಯೋಜನೆ ಬಗ್ಗೆ ಕೇಳಿರುತ್ತಾರೆ. ಈಗಾಗಲೇ ಈ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿ ಪಡೆಯುತ್ತಿದ್ದಾರೆ. ಹಾಗಾಗಿ ರೈತರಿಗೆ ಪಿಎಂ ಕಿಸಾನ್ ಯೋಜನೆ ಬಗ್ಗೆ ಗೊತ್ತಿದೆ. ಆದರೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಂತೆ ರೈತರಿಗೆ ಹೆಚ್ಚುವರಿಗೆಯಾಗಿ 4 ಸಾವಿರ ರೂಪಾಯಿ ಪ್ರತಿ ವರ್ಷ ಸಹಾಯ ನೀಡಲು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಿಎಂ ಕಿಸಾನ್ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಯಡಿಯಲ್ಲಿ ರೈತರಿಗೆ ಈಗಾಗಲೇ ಎರಡು ಕಂತುಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂರನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಈ ಹಣವನ್ನು ಆಧಾರ್ ಕಾರ್ಡ್ ಆಧಾರಿತ ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗಿದೆ.

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಜಮೆಯಾಗುವ ಹಣದ ಸಂದೇಶ ಹಾಗೂ ಸ್ಟೇಟಸ್ ಎಲ್ಲವನ್ನೂ ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಪಿಎಂ ಕಿಸಾನ್ ಯೋಜನೆಯ ಪಟ್ಟಿಯಲ್ಲಿರುವ ರೈತರ ಹೆಸರು, ಯಾವ ಬ್ಯಾಂಕಿಗೆ ಹಣ ವರ್ಗಾವಣೆಯಾಗಿದೆ ಹಾಗೂ ಯಾವಾಗ ರೈತರ ಖಾತೆಗೆ ಜಮೆಯಾಗಿದೆ ಎಂಬುದನ್ನು ನೋಡಬಹುದು. ಅದೇ ರೀತಿ ಸಿಎಂ ಕಿಸಾನ್ ಯೋಜನೆಯ ಹಣ ರೈತರ ಯಾವ ಖಾತೆಗೆ ಜಮೆಯಾಗಿದೆ ಮತ್ತು ಯಾವಾಗ ಜಮೆಯಾಗಿದೆ ಎಂಬುದನ್ನು ಸಹ ನೋಡಬಹುದು.

ರಾಜ್ಯದ ಬಹುತೇಕ ರೈತರಿಗೆ ರಾಜ್ಯದ ಸಿಎಂ ಕಿಸಾನ್ ಹಣ ಯಾವ ಖಾತೆಗೆ ಜಮೆಯಾಗಿದೆ ಎಂಬುದೇ ಗೊತ್ತಿರುವುದಿಲ್ಲ.ಏಕೆಂದರೆ ಫ್ರೂಟ್ಸ್ ನೋಂದಣಿ ಮಾಡಿಸುವಾಗ ರೈತರು ಯಾವ ಬ್ಯಾಂಕ್ ಅಕೌಂಟ್ ಕೊಟ್ಟಿರುತ್ತಾರೋ ಮತ್ತು ಆಧಾರ್ ಕಾರ್ಡ್ ಯಾವ ಬ್ಯಾಂಕಿಗೆ ಲಿಂಕ್ ಆಗಿದೆಯೋ ಆ ಖಾತೆಗೆ ಆಧಾರ್ ಆಧಾರಿತ ಡಿಬಿಟಿ ಮೂಲಕ ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ.

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಿದಂತೆ ರಾಜ್ಯ ಸರ್ಕಾರದ ಸಿಎಂ ಕಿಸಾನ್ ಸ್ಟೇಟಸ್ ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಫ್ರೂಟ್ಸ್ ನಲ್ಲಿ ನೋಂದಣಿ ಮಾಡಿಸಿದ ರೈತರೆಲ್ಲರೂ ಸಿಎಂ ಕಿಸಾನ್ ಹಣ ಜಮೆಯಾಗಿರುವ ಸ್ಟೇಟಸ್ ಚೆಕ್ ಮಾಡಬಹುದು.

PmKisan and CMkisan status ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಮೊಬೈಲ್ ನಲ್ಲಿ ಸಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಲು ಈ

https://fruits.karnataka.gov.in/OnlineUserLogin.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರದ ಫ್ರೂಟ್ಸ್ ವೆಬ್ ಸೈಟ್ ಓಪನ್ ಆಗುತ್ತದೆ. ಒಂದು ವೇಳೆ ಫ್ರೂಟ್ಸ್ ಲಾಗಿನ್ ನಿಮ್ಮದಿದ್ದರೆ ಮೊಬೈಲ್ ನಂಬರ್ ಪಾಸ್ವರ್ಡ್ ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಸರ್ಚ್ ಕೆಳಗಡೆ ಪೇಮೆಂಟ್ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಖಾತೆಗೆ ಸಿಎಂ ಕಿಸಾನ್ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಜಮೆಯಾಗಿರುವ ಹಣದ ಸ್ಟೇಟಸ್ ಓಪನ್ ಆಗುತ್ತದೆ. ನಿಮ್ಮ ಹೆಸರು, ಯೋಜನೆ, ವರ್ಶ, ಪೇಮೆಂಟ್ ಜಮೆಯಾದ ದಿನಾಂಕ ಕಾಣುತ್ತದೆ.

ಒಂದು ವೇಳೆ ನೀವು ಪಾಸ್ವರ್ಡ್ ಮರೆತಿದ್ದರೆ ರಿಸೆಟ್ ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮಮೊಬೈಲ್ ನಂಬರ್ ನಮೂದಿಸಿ ರಿಸೆಟ್ ಪಾಸ್ವರ್ಡ ಮೇಲೆ ಕ್ಲಿಕ್ ಮಾಡಿ ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಬಹುದು. ಈ ಪಾಸ್ವರ್ಡ್ ಸಹಾಯದಿಂದ ನೀವು ಲಾಗಿನ್ ಆಗಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಇಲ್ಲೇ ಚೆಕ್ ಮಾಡಿ

ಫ್ರೂಟ್ಸ್ ತಂತ್ರಾಂಶದಲ್ಲಿ ನಿಮ್ಮ ಹೆಸರು ನೋಂದಣಿ ಮಾಡಿಸದಿದ್ದರೆ  ನೀವು ಸಿಟಿಜನ್ ರೆಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರು, ಆಧಾರ್ ಕಾರ್ಡ್ ನಮೂದಿಸಿ ಐ ಅಗ್ರಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಮುಂದೆ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಫ್ರೂಟ್ಸ್ ತಂತ್ರಾಂಶದಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

Leave a Comment