ಈ ತೋಟಗಾರಿಕೆ ಬೆಳೆಗಳಿಗೆ ಇಷ್ಟು ವಿಮೆ ಹಣ ಜಮೆ

Written by Ramlinganna

Updated on:

Crop insurance money will be credit 2022-23ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.ತೋಟಗಾರಿಕೆಯ ಯಾವ ಯಾವ ಬೆಳೆಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ರೈತರು ಎಷ್ಟು ವಿಮೆ ಹಣ ಕಟ್ಟಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ?

ದಾಳಿಂಬೆ, ಕರಿಮೆಣಸು, ಅಡಿಕೆ, ದ್ರಾಕ್ಷಿ, ಅರಿಶಿಣ, ಶುಂಠಿ, ಮಾವು, ವೀಳ್ಯದ ಎಲೆ, ಪಪ್ಪಾಯ ಹಾಗೂ ನಿಂಬೆ ಹಣ್ಣಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ.

Crop insurance money will be credit ಬೆಳೆ ವಿಮೆಗೆ ಕೊನೆಯ ದಿನಾಂಕ ಯಾವುದು?

ದಾಳಿಂಬೆ, ಕರಿಮೆಣಸು, ಅಡಿಕೆ, ದ್ರಾಕ್ಷಿ, ಶುಂಠಿ, ವೀಳ್ಯದ ಎಲೆ, ಪಪ್ಪಾಯ ಹಾಗೂ ನಿಂಬೆ ಹಣ್ಣಿನ ಬೆಳೆ ವಿಮೆ ಮಾಡಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ. ಅದೇ ರೀತಿ ಅರಿಶಿಣ ಹಾಗೂ ಮಾವು ಬೆಳೆ ವಿಮೆ ಮಾಡಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.

ರೈತರು ತಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಆನ್ಲೈನ್ ನಲ್ಲೇ ಚೆಕ್ ಮಾಡಬಹುದು. ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆಯ ರೈತರಾಗಿದ್ದರೆ ಕಲಬುರಗಿ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರು

https://www.samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆವಿಮೆಯ ಅಂದರೆ ಸಂರಕ್ಷಣೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ District ಪಕ್ಕದಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು ಎಂಬ ಪೇಜ್ ಓಪನ್ ಆಗುತ್ತದೆ. ಅಲ್ಲಿ ಯಾವ ಬೆಳೆಗೆ ವಿಮೆ ಮಾಡಿಸಲು ಕೊನೆಯ ದಿನಾಂಕ ಎಂಬ ಮಾಹಿತಿಯೂ ಕಾಣುತ್ತದೆ. ಬೆಳೆ ವಿಮೆ ಮಾಡಿಸಲು ಇನ್ನೂ ಎಷ್ಟು ದಿನ ಬಾಕಿ ಇದೆ ಎಂಬ ಮಾಹಿತಿ ಕಾಣುತ್ತದೆ.

ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಬೇಗನೆ ಬೆಳೆ ವಿಮೆ ಮಾಡಿಸಿದರೆ ಉತ್ತಮ. ಏಕೆಂದರೆ ಕೊನೆಯ ದಿನಾಂಕ ಸಮಯದಲ್ಲಿ ತಾಂತ್ರಿಕ ದೋಷ ಉಂಟಾಗಬಹುದು. ಅಥವಾ ನಿಮಗೆ ಬೇರೆ ಕೆಲಸದಿಂದಾಗಿ ಬೆಳೆ ವಿಮೆ ಮಾಡಿಸುವುದಕ್ಕಾಗಲಿಕ್ಕಿಲ್ಲ. ಹೀಗಾಗಿ ಬೆಳೆ ವಿಮೆ ಮಾಡಿಸದೆ ಉಳಿಯಬಹುದು.

ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು?

ಅಡಿಕೆ ಬೆಳೆಗೆ ಒಂದು ಎಕರೆಗೆ ರೈತರು 2590 ರೂಪಾಯಿ ವಂತಿಕೆ ಪಾವತಿಸಬೇಕು. ಬೆಳೆ ನಷ್ಟವಾದರೆ ರೈತರಿಗೆ ಒಂದು ಎಕರೆಗೆ 51801 ರೂಪಾಯಿಯವರೆಗೆ ವಿಮೆ ಪಾವತಿಸಲಾಗುವುದು.

ಶುಂಠಿ ಬೆಳೆಗೆ ಒಂದು ಎಕರೆಗೆ ರೈತರು 2630 ರೂಪಾಯಿ ವಂತಿಗೆ ಪಾವತಿಸಬೇಕು. ಬೆಳೆ ನಷ್ಟವಾದರೆ ರೈತರಿಗೆ ಒಂದು ಎಕರೆಗೆ 52611 ರೂಪಾಯಿಯವರೆಗೆ ವಿಮೆ ಹಣ ಪಾವತಿಸಲಾಗುವುದು.

ಪಪ್ಪಾಯ ಬೆಳೆಗೆ ಒಂದು ಎಕರೆಗೆ ರೈತರು 2711 ರೂಪಾಯಿ ವಂತಿಗೆ ಪಾವತಿಸಿದರೆ. ಬೆಳೆ ನಷ್ಟವಾದರೆ ರೈತರಿಗೆ ಒಂದು ಎಕರೆಗೆ 54229 ರೂಪಾಯಿಯವರೆಗೆ ವಿಮೆ ಹಣ ಪಾವತಿಸಲಾಗುವುದು.

ದ್ರಾಕ್ಷಿ ಬೆಳೆಗೆ ಒಂದು ಎಕರೆಗೆ ರೈತರು 5665 ರೂಪಾಯಿ ವಂತಿಗೆ ಕಟ್ಟಬೇಕು. ಬೆಳೆ ನಷ್ಟವಾದರೆ ರೈತರಿಗೆ ಒಂದು ಎಕರೆಗೆ 113316 ರೂಪಾಯಿಯವರೆಗೆ ವಿಮೆ ಪಾವತಿಲಾಗುವುದು.

ಮಾವು ಬೆಳೆಗೆ ರೈತರು 1618 ರೂಪಾಯಿ ವಂತಿಗೆ ಕಟ್ಟಬೇಕು. ಬೆಳೆ ನಷ್ಟವಾದರೆ ರೈತರಿಗೆ ಒಂದು ಎಕರೆಗೆ 32376 ರೂಪಾಯಿಯವರೆಗೆ  ವಿಮೆ ಪಾವತಿಸಲಾಗುವುದು.

ಇದನ್ನೂ ಓದಿSwavalambi app ಬಳಸಿ ಮೊಬೈಲ್ ನಲ್ಲೇ 11ಇ ನಕ್ಷೆ, ತತ್ಕಾಲ್ ಪೋಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಕರಿಮೆಣಸು ಬೆಳೆಗೆ ಒಂದು ಎಕರೆಗೆ ರೈತರು 951 ರೂಪಾಯಿ ವಂತಿಗೆ ಕಟ್ಟಬೇಕು.  ಬೆಳೆ ನಷ್ಟವಾದರೆ ರೈತರಿಗೆ ಒಂದು ಎಕರೆಗೆ 19020 ರೂಪಾಯಿಯವರೆಗೆ ವಿಮೆ ಹಣ ಪಾವತಿಸಲಾಗುವುದು.

ಅರಿಶಿಣ ಬೆಳೆಗೆ ಒಂದು ಎಕರೆಗೆ ರೈತರು 2691 ರೂಪಾಯಿ ವಂತಿಗೆ ಕಟ್ಟಬೇಕು. ಬೆಳೆ ನಷ್ಟವಾದರೆ ರೈತರಿಗೆ ಒಂದು ಎಕರೆಗೆ 53825 ರೂಪಾಯಿಯವರೆಗೆ ವಿಮೆ ಹಣ ಪಾವತಿಸಲಾಗುವುದು.

ದಾಳಿಂಬೆ ಬೆಳೆಗೆ ಒಂದು ಎಕರೆಗೆ ರೈತರು 2569 ರೂಬಪಾಯಿ ವಂತಿಗೆ ಕಟ್ಟಬೇಕು. ಬೆಳೆ ನಷ್ಟವಾದರೆ ರೈತರಿಗೆ ಒಂದು ಎಕರೆಗೆ  51396 ರೂಪಾಯಿಯವರೆಗೆ ವಿಮೆ ಹಣ ಪಾವತಿಸಲಾಗುವುದು.

ವಿಮೆ ಮಾಡಿಸಿದ ಮಾತ್ರಕ್ಕೆ ವಿಮೆ ಹಣ ಜಮೆಯಾಗುವುದಿಲ್ಲ.ಅತೀವೃಷ್ಟಿ ಅನಾವೃಷ್ಟಿ ಹಾಗೂ ಇನ್ನಿತರ ಕಾರಣಗಳಿಂದ ಬೆಳೆ ನಷ್ಟವಾದರೆ 72 ಗಂಟೆಯೊಳಗೆ ವಿಮೆ ಮಾಡಿಸಿದ ಕಂಪನಿಗೆ ದೂರು ಕೊಡುವುದನ್ನು ಮರೆಯಬಾರದು. ದೂರು ಕೊಟ್ಟನಂತರ ವಿಮಾ ಕಂಪನಿಯ ಅಧಿಕಾರಿಗಳು ನಿಮ್ಮ ಜಮೀನಿಗೆ ಬಂದು ಬೆಳೆ ನಷ್ಟವಾಗಿದ್ದನ್ನು ಪರಿಶೀಲನೆ ಮಾಡಿ ವಿಮೆಗಾಗಿ ಅವರು ಮೇಲಧಿಕಾರಿಗಳಿಗೆ ತಿಳಿಸುತ್ತಾರೆ. ಆಗ ನಿಮಗೆ ವಿಮೆಯ ಹಣ ಜಮೆಯಾಗುತ್ತದೆ.

Leave a Comment