ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಜಮೆ ಮಾಡಲು ಸೂಚನೆ

Written by Ramlinganna

Updated on:

Crop Insurance Compensation to be credit 2022-23ನೇ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಪಾವತಿಸಿದ ರೈತರಿಗೆ ಅತೀ ಶೀಘ್ರದಲ್ಲಿ ಬೆಳೆ ವಿಮೆ ಪರಿಹಾರ ಹಣ ಜಮೆಯಾಗಲಿದೆ.  ಹೌದು, ಬೆಂಗಳೂರಿನಲ್ಲಿ ನಡೆದ ಅಧಿಕಾರಗಳ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ವಿಮಾ ಕಂಪನಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

2022-23ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ರೈತರ ಬೆಳೆ ವಿಮೆ ಪರಿಹಾರವನ್ನು ಡಿಸೆಂಬರ್ ಅಂತ್ಯದೊಳಗೆ ಇತ್ಯರ್ಥಪಡಿಸಬೇಕೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ರವರು ಸೂಚನೆ ನೀಡಿದ್ದಾರೆ.

ಅವರು ಗುರುವಾರ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಅವರು ಯಾವುದೇ ಕಾರಣಕ್ಕೂ ಬೆಳೆ ವಿಮೆ ಪಾವತಿಸಿದ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲು ತಡವಾಗಬಾರದು. ಮುಂಗಾರು ಹಂಗಾಮಿಗೆ ಸುರಿದ ಮಳೆಯಿಂದಾಗಿ ರೈತರ ಅಪಾರ ಬೆಳೆ ಹಾಳಾಗಿದೆ. ಕೆಲವು ರೈತರ ಬೆಳೆ ಪ್ರವಾಹದಿಂದಾಗಿ ಕೊಚ್ಚಿಹೋಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ರೈತರು ವಿಮೆಗಾಗಿ ಕಾದು ಕುಳಿತಿದ್ದಾರೆ.

ಇದನ್ನೂ ಓದಿ : ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಮುಟೇಶನ್ ಇತಿಹಾಸ ಚೆಕ್ ಮಾಡಿ

ಸಂಬಂಧಿಸಿದ ವಿಮಾ ಕಂಪನಿಗಳ ಜತೆ ನಿರಂತರ ಸಂಪರ್ಕವನ್ನು ಕೃಷಿ ಅಧಿಕಾರಿಗಳು ಹೊಂದಿರಬೇಕು.ಆಧಾರ್ ಕಾರ್ಡ್ ಲಿಂಕ್ ಆಗದ ಬಹಳಷ್ಟು  ರೈತರಿದ್ದಾರೆ. ಆದಷ್ಟು ಬೇಗ ರೈತರು ಆಧಾರ್ ಕಾರ್ಡ್ ಬೆಳೆ ವಿಮೆಗೆ ಸರಿಯಾಗಿ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೆ, ವಿಮಾ ಕಂಪನಿಗಳಉ ವಿಮೆ ಮಾಡಿಸಿ ಸುಮ್ಮನಾದರೆ ಸಾಲದು, ರೈತರಿಗೆ ನಿಯಮಬದ್ಧವಾಗಿ ಪರಿಹಾರ ಹಣ ಒದಗಿಸುವಲ್ಲಿ ಪ್ರಮಾಣಿಕಾವಾಗಿ ಕೆಲಸ ಮಾಡಬೇಕು.

ಒಂದು ವೇಳೆ ಆಧಾರ್ ಮಾಹಿತಿ ರೈತರಿಂದಾಗಲಿ ತಪ್ಪಿದ್ದಲ್ಲಿ ಅದನ್ನು ಸರಿಪಡಿಸುವ ಕೆಲಸ ಮಾಡಬೇಕು. ದಾಖಲೆ ಆಧಾರ್ ಗಳಲ್ಲಿ ಲೋಪದೋಷಗಳು ಕಂಡುಬಂದರೆ ಸುಮ್ಮನಿರದೆ ಕೂಡಲೇ ಅಧಿಕಾರಿಗಳು ರೈತರ ಬಳಿ ಅಗತ್ಯ ಮಾಹಿತಿ ಪಡೆದು ಸರಿಪಡಿಸಿಕೊಳ್ಳಬೇಕು.  ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ಕೃಷಿ ಇಲಾಖೆ ಜೊತೆಗೆ ಕಂಪನಿಗಳು ಕೈಜೋಡಿಸುವ ಕೆಲಸ ಮಾಡಬೇಕೆಂದು ಸೂಚಿಸಿದ್ದಾರೆ.

Crop Insurance Compensation to be credit 2022-23ನೇ ಸಾಲಿನ ಬೆಳೆ ವಿಮೆ ಅರ್ಜಿ ಸ್ಟೇಟಸ್ ಚೆಕ್ ಮಾಡಿ

ಮುಂಗಾರು ಹಂಗಾಮಿಗೆ ಅಂದರೆ 2022-23ನೇ ಸಾಲಿಗೆ ಬೆಳೆ ವಿಮೆ ಹಣ ಪಾವತಿಸಿದ್ದರೆ ನಿಮ್ಮ ಅರ್ಜಿ ಸ್ಥಿತಿ ಯಾವ ಹಂತದಲ್ಲಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.  ಹೌದು, ರೈತರು ಅರ್ಜಿ ಸ್ಟೇಟಸ್ ಚೆಕ್ ಮಾಡಲು ಈ

https://www.samrakshane.karnataka.gov.in/Premium/CheckStatusMain_aadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಅರ್ಜಿ ಸ್ಟೇಟಸ್ ಚೆಕ್ ಮಾಡವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು Mobile Noಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಸರಿಯಾಗಿ ನಮೂದಿಸಿದ ನಂತರ ರೈತರು Search ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ವಿಮಾ ಕಂಪನಿಯ ಸ್ಟೇಟಸ್ ಅಂದರೆ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಎಂಬ ಮೆಸೆಜ್ ಕಾಣುತ್ತದೆ. ಅದರ ಮುಂದುಗಡೆ ಕಾಣುವ ಸೆಲೆಕ್ಟ್ ಮೇಲೆ ಕ್ಲಿಕ್ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಯಾವ ದಿನಾಂಕದಂದು ವಿಮೆ ಮಾಡಿಸಿದ್ದೀರಿ. ಬ್ಯಾಂಕ್ ಯಾವ ದಿನಾಂಕದಂದು ವಿಮಾ ಕಂಪನಿಗೆ ಅರ್ಜಿ ಫಾರ್ವರ್ಡ್ ಮಾಡಿದೆ ಹಾಗೂ ಯಾವ ದಿನಾಂಕದಂದು ವಿಮಾ ಕಂಪನಿಯಿಂದ ಅರ್ಜಿ ಸ್ವೀಕೃತವಾಗಿದೆ ಎಂಬ ಮೆಸೆಜ್ ಕಾಣುತ್ತದೆ.

ವೀವ್ ಡಿಟೇಲ್ ಮೇಲೆ ಕ್ಲಿಕ್ ಮಾಡಿದರೆ ಸರ್ವೆ ನಂಬರ್, ಹಿಸ್ಸಾ ನಂಬರ್, ಯಾವ ಬೆಳೆಗೆ ವಿಮೆ ಮಾಡಿಸಿದ್ದೀರಿ? ಪ್ರಿಮಿಯಂ ಅಮೌಂಟ್ ಅಂದರೆ ನೀವು ಎಷ್ಟು ಹಣ ಪಾವತಿಸಿದ್ದೀರಿ? Sum Assured ಅಂದರೆ ವಿಮೆ ಹಣ ಎಷ್ಟು ಬರುತ್ತದೆ ಎಂಬ ಮಾಹಿತಿ ಕಾಣುತ್ತದೆ.

Leave a Comment