Student Scholarship ಖಾಸಗಿ ಶಾಲೆಯಾಗಲಿ, ಸರ್ಕಾರಿ ಶಾಲೆಯಾಗಲಿ 1 ರಿಂದ 9ನೇ ತರಗತಿ ಮಕ್ಕಳಿಗೆ ಪ್ರಸಕ್ತ ಸಾಲಿನ ಸ್ಕಾಲರ್ಶಿಪ್ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಲಾಗಿದೆ.
ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಸಹ 1 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳ ಖಾತೆಗೆ ಪ್ರಸಕ್ತ ಸಾಲಿನ ಶಿಷ್ಯವೇತನವನ್ನು ಜಮೆ ಮಾಡಲಾಗಿದೆ.
ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈಗ ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ಯಾವ ಅಭ್ಯರ್ಥಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿರುತ್ತಾರೋ ಆ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಜೋಡಣೆಯಾಗಿರಬೇಕು. ಆಧಾರ್ ಜೋಡಣೆಯಾಗಿರುವ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯಾಗಲಿದೆ. ಪ್ರಸಕ್ತ ವರ್ಷದಂತೆ ಹಿಂದಿನ ಸಾಲಿನ ಶಿಷ್ಯವೇತನ ಜಮೆಯಾಗಿದ್ದನ್ನು ಸಹ ಚೆಕ್ ಮಾಡಬಹುದು.
Student Scholarship ಜಮೆಯಾಗಿದ್ದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?
1 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳು ತಮಗೆ ಸ್ಕಾಲರ್ ಶಿಪ್ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಅರ್ಜಿ ಸ್ಥಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ನೀವು ಕ್ಲಿಕ್ ಮಾಡಬೇಕು. ಅಥವಾ ಈ
https://ssp.karnataka.gov.in/studentstatusreportforstudent.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ವಿದ್ಯಾರ್ಥಿಯ SATS ಗುರುತಿನ ಸಂಖ್ಯೆಯನ್ನು ನಮೂದಿಸಿ ಕೆಳಗಡೆ ವಿದ್ಯಾರ್ಥಿಯ ಮಾರ್ಕ್ಸ್ ಕಾರ್ಡ್ (ಅಂಕಪಟ್ಟಿ)ಯಲ್ಲಿ ಇರುವ SATS ಸಂಖ್ಯೆ ನಮೂದಿಸಿ ಯಾವ ವರ್ಷದ ಶಿಷ್ಯವೇತನ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಮಗುವಿನ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಶಾಲೆಯ ಹೆಸರು, ತರಗತಿ. ನಿಮಗೆ ಎಷ್ಟು ಹಣ ಜಮೆಯಾಗಿದೆ? ಯಾವ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.
ಇದನ್ನು ಓದಿ : ನೀವೇನಾಗಬೇಕೆಂದುಕೊಂಡಿದ್ದೀರೋ ಅದು ಆಗುವುದು ಹೇಗೆ? ಇಲ್ಲಿದೆ ಮಾಹಿತಿ
ಇದೇ ರೀತಿ ಹಿಂದಿನ ವರ್ಷ ಅಂದರೆ 2023-24, 2022-23, 2021-22 ಹೀಗೆ ಹಿಂದಿನ ಸಾಲಿನಲ್ಲಿ ನಿಮ್ಮ ಮಗುವಿಗೆ ಶಿಷ್ಯವೇತನ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನುಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.
ಈ ಲೇಖನ ನಿಮಗೆ ಇಷ್ಟವಾದರೆ ದಯವಿಟ್ಟು ನಿಮ್ಮ ಸಂಬಂಧಿಕರಿಗೆ, ಬಂಧುಬಳಗದವರಿಗೆ, ಮಿತ್ರರಿಗೆ ಶೇರ್ ಮಾಡಬಹುದು. ಏಕೆಂದರೆ ಬಹಳಷ್ಟು ಪಾಲಕರಿಗೆ ಶಿಷ್ಯವೇತನ ಸ್ಟೇಟಸ್ ಚೆಕ್ ಮಾಡುವುದು ಗೊತ್ತಿರುವುದಿಲ್ಲ. ಹಾಗಾಗಿ ಶೇರ್ ಮಾಡಬಹುದು. ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೂ ಸ್ಕಾಲರ್ಶಿಪ್ ಬರುತ್ತದೆ. ಹಾಗಾಗಿ ಖಾಸಗಿ ಶಾಲೆಯಲ್ಲಿ ಓದಿಸುತ್ತಿರುವ ಪಾಲಕರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.