ನೀವೇನಾಗಬೇಕೆಂದುಕೊಂಡಿದ್ದೀರೋ ಅದು ಆಗುವುದು ಹೇಗೆ? ಇಲ್ಲಿದೆ ಮಾಹಿತಿ

Written by Ramlinganna

Published on:

ನಮ್ಮ ಅಕ್ಕಪಕ್ಕದಲ್ಲಿ, ನಮ್ಮೂರಿನಲ್ಲಿ, ಅಕ್ಕಪಕ್ಕದ ಊರು, ತಾಲೂಕಿನಲ್ಲಿ ಕೆಲವರು ಮಾಡಿದ್ದನ್ನು ನಾವೇಕೆ ಮಾಡುವುದಿಲ್ಲ. ಅವರಿಗೇಕೆ ಸಾಧ್ಯ? ನಮಗೇಕೆ ಸಾಧ್ಯವಿಲ್ಲ ನಾವೇನು ಆಗಬೇಕೆಂದುಕೊಂಡಿರುತ್ತೇವೆಯೋ? ಅದನ್ನು ಸಾಧನೆ ಮಾಡಿ ತೋರಿಸುತ್ತೇವೆ.ಅದು ಹೇಗೆ ಸಾಧ್ಯ? ಕೆಲವರು ಮಾಡಿದ್ದನ್ನು ನಾವೇಕೆ ಮಾಡಲ್ಲ? ಇಲ್ಲಿದೆ ಮಾಹಿತಿ.

ನಾವೇನು ವಿಚಾರ ಮಾಡುತ್ತೇವೆಯೋ? ಅದೇ ಆಗುವುದು ಹೇಗೆ?

ಹೌದು, ನಾವೇನು ವಿಚಾರ ಮಾಡುತ್ತೇವೆಯೇ ಅದನ್ನೇ ನಾವು ಆಗುತ್ತೇವೆ. ನೀವು ಬೆಳಗ್ಗೆ ಮಧ್ಯಾಹ್ನ ಸಾಯಂಕಾಲ ಹೀಗೆ ನೀವು ಇಡೀ ದಿನ ಏನೇನು ವಿಚಾರ ಮಾಡುತ್ತೀರೋ ಅದೇ ಆಗುತ್ತೀರಿ. ಕೆಟ್ಟದ್ದು ವಿಚಾರ ಮಾಡಿದರೆ ಅದು ನಮ್ಮ ಜೀವನದ ಮೇಲೂ ಪ್ರಭಾವ ಬೀರುತ್ತದೆ. ಒಳ್ಳೆಯ ವಿಚಾರ ಮಾಡಿದರೆ ಒಳ್ಳೆಯದಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಒಂದಂತು ಸತ್ಯ. ಇನ್ನೊಬ್ಬರ ಬಗ್ಗೆ ಕೆಟ್ಟದ್ದಾಗಿ ಮಾತಾಡುವುದು ಕೆಟ್ಟದ್ದಾಗಿ, ವಿಚಾರ ಮಾಡಿದರೆ ನಮ್ಮ ಜೀವನವೇ ಹಾಳಾಗುವುದು ಸತ್ಯ.

ಅತ್ಯಂತ ಸುಲಭವಾಗಿ ಹೇಳಬೇಕಾದರೆ ನಾವು ಕೆಟ್ಟದ್ದು ಮಾಡಿದರೆ ನಮಗೆ ಕೆಟ್ಟದ್ದಾಗುತ್ತದೆ. ನಾವು ಒಳ್ಳೆಯದು ಮಾಡಿದರೆ ಒಳ್ಳೆಯದಾದಗುತ್ತದೆ. ಇದು ಎಲ್ಲರಿಗೂ ಗೊತ್ತಿದ್ದ ಸಂಗತಿ.

ನಿಮಗೆ ಗೊತ್ತಿದ್ದವರು  ಸಾಧನೆ ಮಾಡಿದವರ ಕ್ಷೇತ್ರಗಳನ್ನು ನೀವೆ ನೆನಪಿಸಿಕೊಳ್ಳಿ

ಉದಾಹರಣೆಗೆ  ಕ್ರಿಕೇಟ್ ನಲ್ಲಿ ಎಲ್ಲಾ ಆಟಗಾರರು ಶ್ರೀಮಂತರ ಮಕ್ಕಳಿಲ್ಲ.  ಸೀನೆಮಾ ಕ್ಷೇತ್ರದಲ್ಲೂ ಎಲ್ಲಾ ಹೀರೋಗಳು ಶ್ರೀಮಂತರ ಕುಟುಂಬದಿಂದ ಬಂದಿಲ್ಲ, ಕೆಲ ರಾಜಕಾರಣಿಗಳು ಸಹ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಬ್ಯುಸಿನೆಸ್ ಕ್ಷೇತ್ರದಲ್ಲಿಯೂ ಎಲ್ಲರೂ ಶ್ರೀಮಂತ ಕುಟುಂಬದಿಂದ ಬಂದವರಲ್ಲ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಯಾರಿಗೆ ಜಮೆ ಆಗುತ್ತದೆ? ಯಾರಿಗೆ ಜಮೆಯಾಗಲ್ಲ? ಇಲ್ಲಿದೆ ಮಾಹಿತಿ

ಐಎಎಸ್, ಐಎಪಿಎಸ್ ಆಫೀಸರ್ ಗಳು ಎಲ್ಲರೂ ಶ್ರೀಮಂತರಲ್ಲ. ಅಷ್ಟೇ ಏಕೆ? ನಿಮ್ಮೂರಿನಲ್ಲಿ ಅಥವಾ ನಿಮ್ಮೂರಿನ ಅಕ್ಕಪಕ್ಕದಲ್ಲಿ, ನಿಮ್ಮ ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಸಾಧನೆ ಮಾಡಿದವರ ಕುರಿತು ಓದಿರುತ್ತೀರಿ. ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ. ಅವರೆಲ್ಲರೂ ಶ್ರೀಮಂತ ಕುಟುಂಬದಿಂದ ಬಂದವರಿಲ್ಲ. ಆ ವ್ಯಕ್ತಿಗಳು ತಮ್ಮ ಜೀವನದಲ್ಲಿ ನೆಗೆಟಿವ್ ವಿಚಾರ ಮಾಡದೆ ಸಾಧನೆ ಅಂದರೆ ಏನಾಗಬೇಕೆಂದುಕೊಂಡಿದ್ದಾರೋ ಅದರ ಬಗ್ಗೆ ವಿಚಾರಿಸುತ್ತಾ. ಅದರ ಮೇಲೆ ನಂಬಿಕೆಯಿಟ್ಟು ಆ ಕಾರ್ಯದಲ್ಲಿ ತೊಡಗಿರುತ್ತಾರೆ. ಹಾಗಾಗಿ ಅವರು ನಿಮ್ಮ ಮುಂದೆಯೆ ಸಾಧನೆ ಮಾಡಿರುತ್ತಾರೆ.

 ಎಲ್ಲಾ ಸಾಮರ್ಥ್ಯವಿದ್ದರೂ ಕೆಲವರೇಕೆ ಸಾಧನೆ ಮಾಡಲ್ಲ.

ಬೇಕಾದಷ್ಟು ಹಣ ಇರುತ್ತದೆ. ಸೌಲಭ್ಯ ಇರುತ್ತದೆ ಆದರೂ ಕೆಲವರು ಸಾಧನೆ ಮಾಡಲ್ಲ. ಏಕೆಂದರೆ ಅವರು ಅದರ ಬಗ್ಗೆ ವಿಚಾರವೇ ಮಾಡಲ್ಲ, ವಿನಾಕಾರಣ ಕೆಟ್ಟದರಲ್ಲಿ ವಿಚಾರ ಮಾಡಿ ಹಾಳಾಗಿರುತ್ತಾರೆ. ಕೆಟ್ಟವರ ಸಹವಾಸ, ಕೆಟ್ಟ ಹವ್ಯಾಸ ಹೀಗೆ ಕೆಟ್ಟದ್ದರಿಂದಲೇ ಹಾಳಾಗಿರುತ್ತಾರೆ ಎಂಬುದು ನಿಮಗೂ ಗೊತ್ತು.

ಒಳ್ಳೆಯ ವಿಚಾರ ಮಾಡಿ ಸಾಧನೆ ಮಾಡುವುದು ಹೇಗೆ?

ಒಳ್ಳೆಯ ವಿಚಾರ ಮಾಡುವುದು ಆರಂಭದಲ್ಲಿ ಒಳ್ಳೆಯ ಕೆಲಸ. ಅಂದರೆ ಸಕಾರಾತ್ಮಕಾಗಿ ವಿಚಾರ ಮಾಡುವುದರಿಂದಲೇ ಸಾಧನೆ ಮಾಡುವುದಕ್ಕಾಗುವುದಿಲ್ಲ. ಇದರೊಂದಿಗೆ ನಾವು ಆ ಕೆಲಸದಲ್ಲಿ ನಂಬಿಕೆ ಇರಬೇಕು. ಆ ಕೆಲಸದ ಬಗ್ಗೆ ಕಲ್ಪಿಸಿಕೊಳ್ಳಬೇಕು. ಉದಾಹರಣಗೆ ನೀವು ಕಾರ್ ಖರೀದಿಸಬೇಕು, ಮನೆ ಕಟ್ಟುವುದು ನಿಮ್ಮ ಒಳ್ಳೆಯ ವಿಚಾರವಾಗಿದ್ದರೆ ಕಾರ್ ಖರೀದಿಸಿದ ನಂತರ ಏನು ಮಾಡುತ್ತೀರಿ. ಮನೆ ಕಟ್ಟಿದ್ದ ನಂತರ ಏನು ಮಾಡುತ್ತೀರಿ ಮನೆ ಕಟ್ಟಿಸಿಯೇ ತೀರುತ್ತೇನೆ  ಎಂಬುದರ ಬಗ್ಗೆ ನಂಬಿಕೆ ಇರಬೇಕು.  ನಂತರ ತಾನಾಗಿಯೇ  ನಾವು ಕಾರ್ ಖರೀದಿಸಲು ಅಥವಾ ಮನೆ ಕಟ್ಟಿಸಲು ಏನು ಮಾಡಬೇಕೆಂಬುದರ ಬಗ್ಗೆ ಕೆಲಸ ಆರಂಭಿಸುತ್ತೇವೆ. ಇಲ್ಲಿ ಒಂದು ಮಾತು ನೆನಪಿಟ್ಟುಕೊಳ್ಳಬೇಕು. ಅವರೇನೆಂದುಕೊಳ್ಳುತ್ತಾರೋ. ಅದು ನನ್ನಿಂದಾಗುವುದಿಲ್ಲ. ಅದು ರೊಕ್ಕಿದ್ದವರ ಕೆಲಸ ಹೀಗೆ ನೀವು ವಿಚಾರಕ್ಕೆ ಆಸ್ಪದ ನೀಡಿದರೆ ನೀವು ಅಂದುಕೊಂಡಿರುವದನ್ನು ಸಾಧನೆ ಮಾಡುವುದಕ್ಕೆ ಆಗುವುದಿಲ್ಲ. ನಿಮ್ಮ ವಿಚಾರದಲ್ಲಿ ನಿಮಗೆ ನಂಬಿಕೆ ಇರಬೇಕು. ನಿರಂತರವಾಗಿ ಕೆಲಸ ಮಾಡುತ್ತೀರಬೇಕು. ಆರಂಭದಲ್ಲಿ ಕಷ್ಟ ಬಂದರೆ ಹೆದರಬಾರದು. ಹೆದರಿ ಹಿಂದೆ ಸರಿಬಾರದು. ಕೆಲವು ದಿನಗಳ ನಂತರ ಖಂಡಿತವಾಗಿ ನೀವು ಸಾಧನೆ ಮಾಡಿಯೇ ತೋರಿಸುತ್ತೀರಿ.

ಮುಂದಿನ ಲೇಖನದಲ್ಲ ಏನಿಲ್ಲದವರು ಸಾಧನೆ ಮಾಡಿದ್ದು ಹೇಗೆ? ಎಂಬುದರ ಬಗ್ಗೆ ತಿಳಿಸುತ್ತೇನೆ..

ಈ ಲೇಖನ ನಿಮಗೆ ಸರಿ ಏನಿಸಿದ್ದರೆ ಕಾಮೆಂಟ್ ಮಾಡಿ ತಿಳಿಸಬಹುದು.

Leave a Comment