ರೈತರಿಗೆ ಈಗ ಸರ್ಕಾರದಿಂದ ಯಾವ ಯಾವ ಸೌಲಭ್ಯಗಳು ಸಿಗುತ್ತವೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರಿಗೆ ತೋಟಗಾರಿಕೆ, ಕೃಷಿ ಇಲಾಖೆ, ಪಶುಸಂಗೋಪನೆ, ರೇಷ್ಮೆ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಮೂಲಕ ರೈತರಿಗೆ ಸಿಗುವ ಸಬ್ಸಿಡಿ ಹಾಗೂ ಸೌಲಭ್ಯಗಳನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಸರ್ಕಾರದಿಂದ ಸಿಗುವ ಸಬ್ಸಿಡಿ ಹಾಗೂ ಸೌಲಭ್ಯಗಳನ್ನು ಮೊಬೈಲ್ನಲ್ಲಿ ಚೆಕ್ ಮಾಡಲು ಯಾರ ಸಹಾಯವೂ ಬೇಕಿಲ್ಲ. ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಸುಲಭವಾಗಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಮಾಹಿತಿ.

ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಚೆಕ್ ಮಾಡುವುದು ಹೇಗೆ?

ರೈತರು ಸರ್ಕಾರದಿಂದ ಸಿಗುವ ಸಬ್ಸಿಡಿ ಹಾಗೂ ಇನ್ನಿತರ ಸೌಲಭ್ಯಗಳ ಮಾಹಿತಿ ಚೆಕ್ ಮಾಡಲು ಈ

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ

https://suvidha.karnataka.gov.in/

ಆಗ ಸರ್ಕಾರದ ಸುವಿಧಾ ತಂತ್ರಾಂಶದ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಸೈನ್ ಇನ್ ಆಗಿ ಚೆಕ್ ಮಾಡಬಹುದು. ನೀವು ಅರ್ಜಿ ಸಲ್ಲಿಸುತ್ತಿದ್ದರೆ ಸೈನ್ ಇನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.  ಇಲ್ಲಿ ನೀವು ಸರ್ಕಾರದಿಂದ ಯಾವ ಯಾವ ಸೌಲಭ್ಯಗಳು ಸಿಗುತ್ತವೆ ಎಂಬುದನ್ನು ಚೆಕ್ ಮಾಡುತ್ತಿದ್ದರಿಂದ ಅತಿಥಿಯಾಗಿ ಚೆಕ್ ಮಾಡಬಹುದು.

ನೀವು ಚೆಕ್ ಮಾಡುತ್ತಿದ್ದರಿಂದ ಅತಿಥಿಯಾಗಿ ಮುಂದುವರಿಸಿ ಮೇಲೆ ಕ್ಲಿಕ್ ಮಾಡಬೇಕು. ಭಾಷೆ ಆಯ್ಕೆ ಬಂದರೆ ಅಲ್ಲಿ ಕನ್ನಡ ಅಥವಾ ಇಂಗ್ಲೀಷ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ  ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಥವಾ ಮುಂದುವರಿಸಿ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಲಿಂಗ ಪುರುಷರಾಗಿದ್ದರೆ ಪುರುಷ ಮಹಿಳೆಯರಾಗಿದ್ದರೆ ಮಹಿಳೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ವಯಸ್ಸು ಆಯ್ಕೆ ಮಾಡಿಕೊಳ್ಳಬೇಕು.

ಧರ್ಮ ಆಯ್ಕೆ ಮಾಡಿಕೊಳ್ಳಬೇಕು. ಜಾತಿ ಆಯ್ಕೆ ಮಾಡಿಕೊಳ್ಳಬೇಕು. ವಿಕಲಚೇತನರೋ ಇಲ್ಲವೋ ಎಂಬುದು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಶೈಕ್ಷಣಿಕ ಅರ್ಹತೆ ಆಯ್ಕೆ ಮಾಡಿಕೊಳ್ಳಬೇಕು.  ಬಿಪಿಎಲ್ ಅಥವಾ ಎಪಿಲ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮಸ್ಥರೋ ನಗರವಾಸಿಯೋ ಎಂಬುದು ಆಯ್ಕೆ ಮಾಡಿಕೊಳ್ಳಬೇಕು.

ಅದರ ಕೆಳಗಡೆ ನಿಮಗಾಗಿ ಯೋಜನೆಗಳು ಕಾಣುತ್ತವೆ.ನಿಮಗಾಗಿ ಯೋಜನೆಗಳಲ್ಲಿ ಎಷ್ಟು ಸೌಲಭ್ಯಗಳು ಇವೆ ಎಂಬುದು ಕಾಣುತ್ತದೆ. ಅದರ ಕೆಳಗಡೆ, ಸಣ್ಣ ವ್ಯಾಪಾರ, ಕೃಷಿ, ಶಿಕ್ಷಣ, ಸಾರ್ವಜನಿಕ ಸೇವೆಗಳಉ, ಆರೋಗ್ಯ ಮತ್ತು ಪಿಂಚಣಿ, ವಸತಿ, ಪ್ರಯಾಣಿ, ಸಂತ್ರಸ್ತರಿಗೆಸಹಾಯ ಹಾಗೂ ಮೀನುಗಾರಿಕೆ ಹೀಗೆ ಯಾವ ಯೋಜನೆಗಳಡಿಯಲ್ಲಿ ಎಷ್ಟು ಸೌಲಭ್ಯಗಳಿವೆ ಎಂಬುದು ಕಾಣುತ್ತದೆ.

ಇದನ್ನೂ ಓದಿ : ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯಡಿ ನಿಮ್ಮ ಮಗುವಿನ ಹೆಸರಿಗೆ ಎಷ್ಟು ಹಣ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಈಗ ನೀವು ಕೃಷಿಗೆ ಸಂಬಂಧಿಸಿದ ಸೌಲಭ್ಯಗಳನ್ನು ನೋಡುತ್ತಿದ್ದರಿಂದ ಕೃಷಿ ಮೇಲೆ ಕ್ಲಿಕ್ ಮಾಡಬೇಕು.  ನೀವು ಕೃಷಿಕರಾಗಿದ್ದರೆ ಹೌದು ಮೇಲೆ ಕ್ಲಿಕ್ ಮಾಡಬೇಕು.  ಇಲ್ಲಿ ನೀವು ವ್ಯವಸಾಯ, ರೇಷ್ಮೆ, ಡೈರಿ, ಕೋಳಿ ಸಾಕಾಣಿಕೆ ಹಾಗೂ ಇತರೆರಲ್ಲಿಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು.

ವ್ಯವಸಾಯ ಮೇಲೆ ಕ್ಲಿಕ್ ಮಾಡಿದ ಮೇಲೆ ಸ್ವಂತ ಜಮೀನು ಮೇಲೆ ಕ್ಲಿಕ್ ಮಾಡಬೇಕು. ಆಮೇಲೆ ಎಷ್ಟು ಎಕರೆ ಜಮೀನಿದೆ ನಮೂದಿಸಬೇಕು.  ಬೀಜ, ಮಣ್ಣಿನ ಪೋಶಕಾಂಶ, ಉಪಕರಣ, ನೀರಾವರಿ ಇದರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು.

ಉದಾಹರಣೆಗೆ ಉಪಕರಣ ಮೇಲೆ ಕ್ಲಿಕ್ ಮಾಡಿದರೆ ಯಾವ ಯಾವ ಉಪಕರಣಗಳು ನಿಮಗೆ ಸಿಗುತ್ತವೆ ಎಂಬ ಪಟ್ಟಿ ಕಾಣುತ್ತದೆ. ಅದೇ ರೀತಿ ನೀರಾವರಿ ಮೇಲೆ ಕ್ಲಿಕ್ ಮಾಡಿದರೆ ನೀರಾವರಿ ಅಡಿಯಲ್ಲಿ ಯಾವ ಯಾವ ಸೌಲಭ್ಯಗಳು ಸಿಗುತ್ತವೆ ಎಂಬ ಪಟ್ಟಿ ಕಾಣುತ್ತದೆ.ಈ ಆಧಾರದ ಮೇಲೆ ನೀವು ಸುವಿಧಾ ತಂತ್ರಾಂಶದ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *