Check now Old Pahani : ರೈತ ಬಾಂಧವರಿಗೆ ಇಲ್ಲಿದೆ ಗುಡ್ ನ್ಯೂಸ್. ಹೌದು, ರೈತರು ಈಗ ತಮ್ಮ ಜಮೀನು ಅಂದರೆ 20 ವರ್ಷಗಳ ಹಿಂದೆ ಯಾರ ಹೆಸರಿನಲ್ಲಿತ್ತು. ಯಾರ ಹೆಸರನಿಂದ ನಿಮ್ಮ ಹೆಸರಿಗೆ ವರ್ಗಾವಣೆಯಾಗಿದೆ. ನಿಮ್ಮ ಪಹಣಿಯಲ್ಲಿ ಬೆಳೆ ಸಾಲ ಪಡೆಯಲಾಗಿದೆಯೇ ಎಂಬ ಮಾಹಿತಿಯನ್ನು ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ನೋಡಿ ಮಾಹಿತಿ.
Check now Old Pahani 20 ವರ್ಷ ಹಳೆಯ ಪಹಣಿ ಚೆಕ್ ಮಾಡುವುದು ಹೇಗೆ ?
20 ವರ್ಷ ಹಾಗೂ ಅದಕ್ಕಿಂತ ಹೆಚ್ಚು ಹಿಂದೆ ಪಹಣಿ ಯಾರ ಹೆಸರಿನಲ್ಲಿತ್ತು ಎಂಬುದನ್ನು ಚೆಕ್ ಮಾಡಲು ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ ವೀವ್ ಕಾಣಿಸುತ್ತದೆ. ಅಲ್ಲಿ ನೀವು Old Year ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಅಂದರೆ ನಿಮ್ಮ ಜಮೀನು ಯಾವ ಊರಿನಲ್ಲಿದೆ ಆ ಊರನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು.ಇದಾದ ನಂತರ ಸರ್ನೋಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.ನಂತರ ಪಿರಿಯಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಯಾವ ವರ್ಷದಿಂದ ನಿಮ್ಮ ಜಮೀನಿನ ಪಹಣಿ ಚೆಕ್ ಮಾಡಬಹುದು ಎಂಬ ಪಟ್ಟಿ ಕಾಣಿಸುತ್ತದೆ. ಇದಾದ ನಂತರ ನೀವು ವರ್ಷ ಆಯ್ಕೆ ಮಾಡಿಕೊಳ್ಳಬೇಕು.ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಯಾರ ಯಾರ ಹೆಸರಿದೆ ಎಂಬ ಮಾಹಿತಿ ಕಾಣಿಸುತ್ತದೆ. ಒಂದು ವೇಳೆ ನಿಮ್ಮ ಹೆಸರು ಜಂಟಿಯಾಗಿದ್ದರೆ ಅವರ ಹೆಸರು ಕಾಣಿಸುತ್ತದೆ. ಜಮೀನಿನ ಮಾಲಿಕರು ತಂದೆಯ ಹೆಸರು ಹಾಗೂ ನಿಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಖಾತಾ ನಂಬರ್ ಕಾಣಿಸುತ್ತದೆ. ಇದಾದ ನಂತರ ನೀವು View ಮೇಲೆ ಕ್ಲಿಕ್ ಮಾಡಬೇಕು
ಆಗ ನಿಮ್ಮ ಪಹಣಿ ತೆರೆದುಕೊಳ್ಳುತ್ತದೆ. ಅಲ್ಲಿ ಸರ್ವೆ ನಂಬರ್ , ಎಕರೆ ಗುಂಟೆಯಲ್ಲಿ ಜಮೀನು ಇರುವುದು ಮಾಹಿತಿ ನಿಮಮ ಹೆಸರಿಗೆ ಜಮೀನು ಯಾವಾಗ ವರ್ಗಾವಮೆಯಾಗಿದೆ ಅಂದರೆ ಮುಟೇಶನ್ ನಂಬರ್ ಕಾಣಿಸುತ್ತದೆ. ನೀವು ಯಾವ ವರ್ಷದಲ್ಲಿ ಯಾವ ಬೆಳೆ ಬಿತ್ತಿದ್ದೀರಿ ಎಂಬುದನ್ನು ಸಹ ಅಲ್ಲಿ ನಮೂದಿಸಲಾಗಿರುತ್ತದೆ. ಇದೇರೀತಿ ನಿಮ್ಮ ಜಮೀನಿನ ವಿಸ್ತೀರ್ಣ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಅಲ್ಲಿ ನಮೂದಿಸಲಾಗಿರುತ್ತದೆ.
ಇನ್ನೂ ಮುಂದೆ ಪಹಣಿಯಲ್ಲಿ ರೈತರ ಫೋಟೋ ವಿಳಾಸ
ಆಧಾರ್ ಕಾರ್ಡ್, ಬ್ಯಾನ್ ಕಾರ್ಡ್, ಎಲೆಕ್ಷನ್ ಕಾರ್ಡ್ ದಂತೆ ಈಗ ಪಹಣಿಯಲ್ಲಿಯೂ ರೈತರ ಫೋಟೋ, ವಿಳಾಸ ಸೇರಿದಂತೆ ಇತರ ಮಾಹಿತಿ ಇರಲಿದೆ. ಭೂ ಮಾಲಿಕರ ಫೋಟೋ, ವಿಳಾಸ, ಆಧಾರ್ ಸಂಖ್ಯೆ, ಫ್ರೂಟ್ಸ್, ಐಡಿ ಮಾಹಿತಿಗಳು ಪಹಣಿಯಲ್ಲಿ ಮುದ್ರಣವಾಗಲಿದೆ.
ಇದನ್ನೂ ಓದಿ ರೈತರಿಗೆ ಗುಡ್ ನ್ಯೂಸ್ ನಿಮ್ಮ ಮೊಬೈಲ್ ನಲ್ಲೇ ಎಫ್ಐಡಿ ಹೀಗೆ ಚೆಕ್ ಮಾಡಿ
ಅಷ್ಟೇ ಅಲ್ಲ, ಜಮೀನಿಗೆ ಸಂಬಂಧಿಸಿದ ಆಕಾರ್ ಬಂದ್ ದಾಖಲೆಗಳನ್ನು ಸಹ ಪಹಣಿಯೊಂದಿಗೆ ಡಿಜಿಟಲ್ ರೂಪದಲ್ಲಿ ಜೋಡಿಸಲಾಗುತ್ತಿದೆ. ಇದರಿಂದ ನಕ್ಷೆಯಲ್ಲಿರುವ ವಿಸ್ತೀರ್ಣಕ್ಕೂ ಪಹಣಿಯಲ್ಲಿ ನಮೂದಾಗಿರುವ ವಿಸ್ತೀರ್ಣಕ್ಕೂ ವ್ಯತ್ಯಾಸವಿರುವ ಗೊಂದಲಗಳು ಬಗೆಹರಿಯಲಿದೆ. ಅಲ್ಲದೆ ಪ್ರತಿಯೊಂದು ಆರ್.ಟಿ.ಸಿ ಯಲ್ಲೂಯ ಕ್ಯೂ ಆರ್ ಕೋಡ್ ಕೂಡ ಇರಲಿದೆ. ಇದರಿಂದ ಜಮೀನಿನ ಮೇಲಿರುವ ಸಾಲ ಸೇರಿ ಇತರೆ ಅಧಿಕೃತ ಮಾಹಿತಿಗಳನ್ನು ತಕ್ಷಣವೇ ಪಡೆಯಲು ಸಹಕಾರಿಯಾಗಲಿದೆ.





