FID check now in mobile : ರೈತ ಬಾಂಧವರೇ ನಿಮಗಿಲ್ಲಿದೆ ಗುಡ್ ನ್ಯೂಸ್. ಹೌದು, ರೈತರು ಈಗ ತಮ್ಮ ಮೊಬೈಲ್ ನಲ್ಲೇ ಎಫ್ಐಡಿ ಚೆಕ್ ಮಾಡಬಹುದು. ಇದರೊಂದಿಗೆ ಇನ್ನೂವರೆಗೆ ಇಕೆವೈಸಿ ಆಗಿಲ್ಲವಾದರೆ ಕೇವಲ ಒಂದೇ ನಿಮಿಷದಲ್ಲಿ ನೀವು ಇಕೆವೈಸಿಯನ್ನು ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ನೋಡಿ ಮಾಹಿತಿ.
FID check now in mobile ಎಫ್ಐಡಿ ಚೆಕ್ ಮಾಡುವುದು ಹೇಗೆ ?
ರೈತರು ತಮ್ಮ ಎಪ್ಐಡಿ ಚೆಕ್ ಮಾಡಲು ಈ
https://fruits.karnataka.gov.in/OnlineUserLogin.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಫ್ರೂಟ್ಸ್ ಐಡಿ ಚೆಕ್ ಮಾಡುವ ಹಾಗೂ ಎಫ್ಐಡಿ ನೋಂದಣಿ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ನಂತರ ನೀವು ಪಾಸ್ವರ್ಡ್ ನಮೂದಿಸಬೇಕು ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ನಿಮಗೆ ಫ್ರೂಟ್ಸ್ ಐಡಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಎಫ್ಐಡಿ ಸೇರಿದಂತೆ ಜಮೀನಿನ ಎಲ್ಲಾ ಮಾಹಿತಿಯನ್ನು ಪಡೆಯಬಹುದು.
ಒಂದು ವೇಳೆ ನಿಮಗೆ ಪಾಸ್ವರ್ಡ್ ನೆನಪಿಲ್ಲದಿದ್ದರೆ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Reset Password ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರಿಗೆ ಪಾಸ್ವರ್ಡ್ ಕಳಿಸಲಾಗುವುದು. ಆ ಪಾಸ್ವರ್ಡ್ ನಮೂದಿಸಿ ಲಾಗಿನ್ ಮಾಡಿಕೊಳ್ಳಬೇಕು. ನಂತರ ನೀವು ಪಾಸ್ವರ್ಡ್ ನಿಮಗೆ ಬೇಕಾದಂತೆ ಬದಲಾಯಿಸಿಕೊಳ್ಳಬೇಕು. ಮೊದಲು ಹಳೆಯ ಪಾಸ್ವರ್ಡ್ ಅಂದರೆ ನಿಮ್ಮ ಮೊಬೈಲಿಗೆ ಬಂದ ಪಾಸ್ವರ್ಡ್ ಹಾಕಬೇಕು. ಇದಾದ ನಂತರ ನೀವು ಹೊಸದಾಗಿ ಕ್ರಿಯೇಟ್ ಮಾಡಿದ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಬೇಕು. ಆಗ ನಿಮ್ಮ ಮೊಬೈಲಿಗೆ ಮತ್ತೇ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಲಾಗಿನ್ ಆಗಬೇಕು. ನಂತರ ನೀವು ಫ್ರೂಟ್ಸ್ ಐಡಿಯಲ್ಲಿ ಯಾವ ಯಾವ ಮಾಹಿತಿಗಳನ್ನು ಚೆಕ್ ಮಾಡಬಹುದು ಎಂಬ ಪೇಜ್ ತೆರೆದುಕೊಳ್ಳುತ್ತದೆ.
ಸರ್ಚ್ ಮೇಲೆ ಕ್ಲಿಕ್ ಮಾಡಿ ರೆಜಿಸ್ಟ್ರೇಷನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಫ್ರೂಟ್ಸ್ ಐಡಿ ನಿಮ್ಮ ಹೆಸರು ಅಪ್ಲಿಕೇಶನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಪೇಮೆಂಟ್ ಡಿಟೇಲ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ನಿಮಗೆ ಹಣ ಜಮೆಯಾಗಿರುವ ಸ್ಟೇಟಸ್ ಕಾಣಿಸುತ್ತದೆ.
ಇದನ್ನೂ ಓದಿ ನಿಮ್ಮ ಅಕ್ಕಪಕ್ಕದ ರೈತರ ಹೆಸರಿಗೆಷ್ಟು ಜಮೀನಿದೆ ಇಲ್ಲೇ ಚೆಕ್ ಮಾಡಿ
ಒಂದು ವೇಳೆ ನೀವು ಪಾಸ್ವರ್ಡ್ ಮರೆತುಹೋಗಿದ್ದರೆ ರಿಸೆಟ್ ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಬಹುದು.
ಹೊಸದಾಗಿ ನೋಂದಣಿ ಮಾಡುವುದು ಹೇಗೆ ?
ನೀವು ಈಗ ಹೊಸದಾಗಿ ನೋಂದಣಿ ಮಾಡುವವರಿದ್ದರೆ ಅಲ್ಲಿ ಕಾಣುವ Citizen Registration ಮೇಲೆ ಕ್ಲಿಕ್ ಮಾಡಬೇಕು. ಆಗ ಇಕೆವೈಸಿ ಸೇವೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಇದಾದ ನಂತರ ನನ್ನ ಆಧಾರ್ ಮಾಹಿತಿ ಹಾಗೂ ಇತರ ಮಾಹಿತಿಗಳು ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ದೃಢೀಕರಣದ ವಿಧಾನವನ್ನು ಆಯ್ಕೆ ಮಾಡಿ ಕೆಳಗಡೆ ಓಟಿಪಿ ಅಥವಾ ಫೆಸ್ ಕ್ಯಾಪ್ಚರ್ ಆಯ್ಕೆ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಓಟಿಪಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿದ ನಂತರ ಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮೊಬೈಲ್ ನಂಬರ್ ನಮೂದಿಸಬೇಕು. ಒಂದು ವೇಳೆ ಇ ಮೇಲ್ ಐಡಿ ಇದ್ದರೆ ಯಸ್ ಎಂದು ನಮೂದಿಸಬೇಕು. ನಂತರ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ನಿಮ್ಮ ಫ್ರೂಟ್ಸ್ ಐಡಿ ಕ್ರಿಯೇಟ್ ಆಗಿರುತ್ತದೆ.





