Belevime applictation status : ರೈತಬಾಂಧವರೇ ನಿಮಗಿದು ಗೊತ್ತೇ. ನೀವು ಈಗ ನಿಮ್ಮ ಅರ್ಜಿಯ ಸ್ಟೇಟಸನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ಹೌದು, ಮಿತ್ರರೇ, ನೀವು ಬೆಳೆ ವಿಮೆ ಹಣ ಪಾವತಿಸಿದ್ದೀರಿ ಹಾಗೂ ವಿಮೆ ಹಣ ಪಾವತಿಸಿದ ನಂತರ ಅರ್ಜಿಯ ಸ್ಟೇಟಸ್ ಅಂದರೆ ನಿಮ್ಮ ಹಣ ವಿಮಾ ಕಂಪನಿಗೆ ಪಾವತಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.
Belevime applictation status ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಹೇಗೆ ಚೆಕ್ ಮಾಡಬೇಕು ?
ಮುಂಗಾರು ಹಂಗಾಮಿಗೆ ಅಂದರೆ ಪ್ರಸಕ್ತ ಸಾಲಿನ 2026-27ನೇ ಸಾಲಿಗೆ ವಿಮೆ ಹಣ ಪಾವತಿಸಿದ ರೈತರು ತಮ್ಮ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಹಾಗೂ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಚೆಕ್ ಮಾಡಲು ಈ
https://www.samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ 2026-2027 ಕಾಣಿಸುತ್ತದೆ. ಅಧರ ಕೆಳಗೆ ಋತು ಖಾರೀಫ್ ಕಾಣಿಸುತ್ತದೆ. ಅದರ ಕೆಳಗಡೆ ಮುಂದೆ ಕಾಣಿಸುತ್ತದೆ. ನೀವು ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಪ್ರೀಮಿಯಂ ಕ್ಯಾಲ್ಕುಲೇಟರ್, ಕ್ರಾಫ್ ಯು ಕ್ಯಾನ್ ಇನ್ಶುರ್, ಚೆಕ್ ಸ್ಟೇಟಸ್ ಹೀಗೆ ಆಯ್ಕೆಗಳು ಕಾಣಿಸುತ್ತವೆ. ನೀವು Check Status ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ನೀವು ಅಲ್ಲಿ Mobile No ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು. ಇದಾದ ನಂತರ ನೀವು Search ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಹೌದು, ನೀವು ಬೆಳೆ ವಿಮೆ ಹಣ ಪಾವತಿಸಿದ್ದು ಅಂದರೆ ಎಷ್ಟು ಎಕರೆಗೆ ವಿಮೆ ಹಣ ಪಾವತಿಸಿದ್ದೀರಿ ಎಂಬುದು ಕಾಣಿಸುತ್ತದೆ. ಪ್ರೊಪೊಸಲ್ ನಂಬರ್, ನಿಮ್ಮ ಮೊಬೈಲ್ ನಂಬರ್ ಕೊನೆಯ ಮೂರು ನಂಬರ್, ನಿಮ್ಮ ಹೆಸರು ಕಾಣಿಸುತ್ತದೆ. ಸ್ಟೇಟಸ್ ನಲ್ಲಿ ಬ್ಯಾಂಕಿನಿಂದ ಅನುಮೋದಿಸಿದೆ ಹಾಗೂ ವಿಮಾ ಕಂಪನಿಗೆ ಸಲ್ಲಿಸಲಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. Approved by Bank and Forwarded to insurance Co ಕಾಣಿಸುತ್ತದೆ. ಇದಾದ ನಂತರ ನೀವು ಅಲ್ಲಿ ಕಾಣುವ Select ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ನೀವು View Details ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : ರೈತರಿಗೆ ಗುಡ್ ನ್ಯೂಸ್ ನಿಮ್ಮ ಮೊಬೈಲ್ ನಲ್ಲೇ ಎಫ್ಐಡಿ ಹೀಗೆ ಚೆಕ್ ಮಾಡಿ
ನೀವು ಯಾವ ಸರ್ವೆ ನಂಬರಿಗೆ ವಿಮೆ ಹಣ ಪಾವತಿಸಿದ್ದೀರಿ. ಎಷ್ಟು ಹಣ ಪಾವತಿಸಿದ್ದೀರಿ. ಹಾಗೂ ನಿಮಗೆ ಎಷ್ಟು ವಿಮೆ ಹಣ ಜಮೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಕಾಣಿಸುತ್ತದೆ.
ನೀವು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರಿ ನಿಮಗೆ ಗೊತ್ತಾ ?
ರೈತ ಮಿತ್ರರೇ ನೀವು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರಾ ಅಂದರೆ ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://www.samrakshane.karnataka.gov.in/PublicHome.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕಾಣುವ Know your Insurance Co. ಮೇಲೆ ಕ್ಲಿಕ್ ಮಾಡಬೇಕು. ಆಗ ಜಿಲ್ಲಾವಾರು ಅಂದರೆ ಯಾವ ಯಾವ ಜಿಲ್ಲೆಗಳಿಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದರ ಪಟ್ಟಿ ಕಾಣಿಸುತ್ತದೆ. ಹೌದು, ಉದಾಹರಣೆಗೆ ಬಾಗಲಕೋಟೆ ಜಿಲ್ಲೆಗೆ ಎಸ್.ಬಿ.ಐ ಜನರಲ್ ಇನ್ಸುರೆನ್ಸ್ ಹಾಗೂ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಯನ್ನು ನಿಯೋಜಿಸಲಾಗಿದೆ. ಅದೇ ರೀತಿ ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿ ಇದೆ ಎಂಬುದನ್ನು ಚೆಕ್ ಮಾಡಬಹುದು.





