ರೈತರೇ ತಮ್ಮ ಮೊಬೈಲ್ ಮೂಲಕ ಬೆಳೆಗಳ ಸಮೀಕ್ಷೆ ಮಾಡಬಹುದು. ಅಥವಾ ನೆರೆಯ ಖಾಸಗಿ ವ್ಯಕ್ತಿಗಳ ಮೊಬೈಲ್ ಮೂಲಕ ಜಮೀನುಗಳ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ನಿಮ್ಮ ಜಮೀನಿನ ಸರ್ವೆ ನಂಬರ್ ಮತ್ತು ಜಮೀನಿನ ಫೊಟೋ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ಅರಿಯಲು ರೈತರು ಎಲ್ಲಿಯೂ ಹೋಗಬೇಕಿಲ್ಲ. ಮೊಬೈಲ್ ಮೂಲಕವೇ Bele darshak app ಮೂಲಕ ಕ್ಷಣಾರ್ಧದಲ್ಲಿ ಅಪ್ಲೋಡ್ ಆಗಿದ್ದನ್ನು ನೋಡಬಹುದು. ಒಂದು ವೇಳೆ ತಪ್ಪಾಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.
ರೈತರು ಕೃಷಿ ಇಲಾಖೆಯು ಅಭಿವೃದ್ಧಿ ಪಡಿಸಿದ ಬೆಳೆ ಸಮೀಕ್ಷೆ ಆ್ಯಪ್ (farmers crop survey app 2021-22) ಮೂಲಕ ಈಗಾಗಲೇ ಮುಂಗಾರು ಬೆಳೆಗಳ ಸಮೀಕ್ಷೆ ಕಾರ್ಯ ನಡೆದಿದೆ. ರೈತರು ಸ್ವತಃ ಅವರ ಮೊಬೈಲ್ ಮೂಲಕವೇ ಸಮೀಕ್ಷೆ ಮಾಡಿದ್ದಾರೆ. ಇನ್ನೂ ಕೆಲವು ರೈತರು ಖಾಸಗಿ ವ್ಯಕ್ತಿಗಳಿಂದ ಅಪ್ಲೋಡ್ ಮಾಡಿಸಿದ್ದಾರೆ. ಸರ್ವೆ ನಂಬರ್, ಅಗತ್ಯ ಮಾಹಿತಿ ಹಾಗೂ ಫೋಟ್ ಸರಿಯಾಗಿ ಅಪ್ಲೋಡ್ ಆಗಿದೆಯೇ ಎಂಬುದನ್ನು ಬೆಳೆ ದರ್ಶಕ್ ಆ್ಯಪ್ ಮೂಲಕ ನೋಡಬಹುದು.
ರೈತರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೋನ್ಲೋಡ್ ಅಥವಾ https://play.google.com/store/apps/details?id=com.crop.offcskharif_2021 ಲಿಂಕ್ ಮೇಲೆ ಕ್ಲಿಕ್ ಮಾಡಿ ಇನ್ಸ್ ಸ್ಟಾಲ್ ಮಾಡಿಕೊಳ್ಳಬಹುದು.
ಬೆಳೆ ದರ್ಶಕ್ ಆ್ಯಪ್ ಇನ್ಸ್ ಸ್ಟಾಲ್ ಮಾಡಿಕೊಂಡ ನಂತರ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಇನ್ನಿತರ ಮಾಹಿತಿ ನಮೂದಿಸಬೇಕು. ಬೆಳೆ ದರ್ಶಕ್ ಆ್ಯಪ್ ಮೂಲಕ ಜಮೀನಿನಲ್ಲಿ ಬೆಳೆ ಸಮೀಕ್ಷೆ ಪ್ರಕಾರ ದಾಖಲಾಗಿರುವ ಬೆಳೆ ವಿವರಗಳು ಮತ್ತು ವಿಸ್ತೀರ್ಣದ ಮಾಹಿತಿ ಪಡೆಯಬಹುದು. ಬೆಳೆ ಸಮೀಕ್ಷೆ ಸಮಯದಲ್ಲಿ ತೆಗೆಯಲಾದ ಜಿಪಿಎಸ್ ಆಧಾರಿತ ಛಾಯಾಚಿತ್ರಗಳನ್ನು ವೀಕ್ಷಿಸಬಹುದು. ಅಲ್ಲದೆ ರೈತರ ಜಮೀನಿನ ಬೆಳೆ ಸಮೀಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರ, ರೈತರು ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ನೋಡಬಹುದು. ಒಂದು ವೇಳೆ ಮಾಹಿತಿ ತಪ್ಪಾಗಿದ್ದರೆ ಆಕ್ಷೇಪಣೆ ಸಲ್ಲಿಸಬಹುದು. ಮೇಲ್ವಿಚಾರಕರು ಸೂಕ್ತ ಬೆಳೆಗಳನ್ನು ದಾಖಲಿಸಿ ರೈತರ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುತ್ತಾರೆ. ಇನ್ನೇಕೆ ತಡ ಒಮ್ಮೆ ನಿಮ್ಮ ಬೆಳೆ ಸಮೀಕ್ಷೆಯಲ್ಲಿ ಎಲ್ಲಾ ಸರ್ವೆ ನಂಬರ್, ಮಾಹಿತಿ ಹಾಗೂ ಫೋಟೋ ಸರಿಯಾಗಿ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.