ಕುರಿ, ಮೇಕೆ ಸಾಕಾಣಿಕೆ ಪರಿಕರ ಕಿಟ್ ವಿತರಿಸಲು ಅರ್ಜಿ ಆಹ್ವಾನ

Written by By: janajagran

Updated on:

goat farming training ಶಿವಮೊಗ್ಗ ಜಿಲ್ಲಾ ಕರ್ನಾಟಕ ಕುರಿ ಮತ್ತು ಉಣ್ಣೆ ಆಭಿವೃದ್ಧಿ ನಿಗಮವು ವಿಶೇಷ ಘಟಕ/ಗಿರಿಜನ ಉಪಯೋಜನೆಗಳ ಅಡಿಯಲ್ಲಿ ಕುರಿ/ಮೇಕೆ ಸಾಕಾಣಿಕೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

goat farming training ಕುರಿ ಸಾಕಾಣಿಕೆದಾರರಿಗೆ ಏನೇನು ನೀಡಲಾಗುವುದು?

ನಿಗಮದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾಕದರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿರುವ 18ರಿಂದ 60 ವರ್ಷ ವಯೋಮಿತಿಯ ಮಹಿಳಾ ಸದಸ್ಯರು/ ಮಹಿಳಾ ಸದಸ್ಯರು ಇಲ್ಲದಿದ್ದರೆ ಪುರುಷ ಸದಸ್ಯರು ಅರ್ಜಿ ಸಲ್ಲಿಸಬಹುದು.  ಸಂಘಗಳು ಇಲ್ಲದೇ ಇರುವ ತಾಲೂಕುಗಳಲ್ಲಿ ಕುರಿ ಸಾಕಾಣಿಕೆದಾರರು ಹಾಗೂ ಸಂಚಾರಿ/ ಅರೆಸಂಚಾರಿ ಕುರಿಗಾರರಿಗೆ ಪರಿಕರ ಕಿಟ್‌ಗಳನ್ನು (ಟೆಂಟ್, ಬ್ಯಾಟರಿ, ರೈನ್‌ಕೋಟ್) ಒದಗಿಸಲು ಸಾಮಾನ್ಯ ವರ್ಗ/ಪ.ಜಾ/ಪ.ಪಂ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತರು ನಿಗಧಿತ ನಮೂನೆ ಅರ್ಜಿಗಳನ್ನು ಆಯಾ ತಾಲೂಕು ಸಹಾಯಕ ನಿರ್ದೇಶಕರುಗಳ ಕಚೇರಿ/ ಕುರಿಗಾರರ ಸಂಘದ ಕಚೇರಿಗಳಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂನ್ 30ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ರೈತರಿಗೆ ಕುರಿ, ಮೇಕೆ, ಕೋಳಿ, ಹೈನುಗಾರಿಕೆಗೆ ತರಬೇತಿ ನೀಡಲು ರಾಜ್ಯದಲ್ಲಿವೆ 25 ತರಬೇತಿ ಕೇಂದ್ರಗಳು

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ತಾಲೂಕು: 08182-223099, ಭದ್ರಾವತಿ ತಾಲೂಕು: 08282-266462, ಶಿಕಾರಿಪುರ ತಾಲೂಕು: 08187-222474, ಸೊರಬ ತಾಲೂಕು: 08184-272309, ಸಾಗರ ತಾಲೂಕು: 08183-226603, ಹೊಸನಗರ ತಾಲೂಕು: 08185-221353, ತೀರ್ಥಹಳ್ಳಿ ತಾಲೂಕು: 08181-228521 ಸಂಪರ್ಕಿಸುವುದು.

ಹಾಸನ ಜಿಲ್ಲೆಯ ರೈತರಿಂದಲೂ ಅರ್ಜಿ ಆಹ್ವಾನ

ಪಶುಪಾಲನೆಯಲ್ಲಿ ಆಸಕ್ತಿಯಿರುವ ರೈತರು, ರೈತ ಮಹಿಳೆಯರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ವತಿಯಿಂದ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಜುಲೈ 4 ಮತ್ತು 5 ರಂದು ಹಂದಿ ಸಾಕಾಣಿಕೆ,  ಜುಲೈ 7 ಮತ್ತು 8 ರಂದು ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ನೀಡಲಾಗುವುದು. ಅದೇ ರೀತಿ ಜುಲೈ 15 ಮತ್ತು 16 ರಂದು ಕೋಳಿ ಸಾಕಾಣಿಕೆ, ಜುಲೈ 18 ಮತ್ತು 19 ರಂದು ಕುರಿ ಮತ್ತು ಮೇಕೆ ಸಾಕಾಣಿಕೆ, ಜುಲೈ 21 ಮತ್ತು 22 ರಂದು ಆಧುನಿಕ ಹೈನುಗಾರಿಕೆ ತರಬೇತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹಾಸನ ಜಿಲ್ಲೆಯ ರೈತರು 08172 235226 ಗೆ ಸಂಪರ್ಕಿಸಲು ಕೋರಲಾಗಿದೆ.

ಈ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಜಿಲ್ಲೆಯಲ್ಲಿ ತರಬೇತಿ ಯಾವಾಗ ನೀಡಲಾಗುವುದು ಕೇಳಿ

ನಿಮ್ಮ ಜಿಲ್ಲೆಯಲ್ಲಿ ಯಾವಾಗ ಕುರಿ ಸಾಕಾಣಿಕೆ ತರಬೇತಿ ನೀಡಲಾಗುವುದು ಎಂಬುದನ್ನು ವಿಚಾರಿಸಲು ಈ 8277 100 200 ಸಹಾಯವಾಣಿ  ನಂಬರಿಗೆ ಕರೆ ಮಾಡಬಹುದು.

ಪಶುಪಾಲನೆಯಲ್ಲಿ ಆಸಕ್ತಿಯಿರುವ ರೈತರಿಗೆ ಪಶುಪಾಲನೆ ಕುರಿತು  ಮಾಹಿತಿ ನೀಡುವುದಕ್ಕಾಗಿ ಸರ್ಕಾರವು ಪಶುಪಾಲನಾ ಸಹಾಯವಾಣಿಯನ್ನು ಆರಂಭಿಸಿದೆ. ಇದು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ. ರೈತರು 8277 100 200 ನಂಬರಿಗೆ ಕರೆ ಮಾಡಿದರೆ ಸಾಕು ಪಶುಪಾಲನೆ ಕುರಿತು ಸಂಪೂರ್ಣ ಮಾಹಿತಿ ನೀಡುವರು. ರೈತರು ಪಶುಪಾಲನೆ ಕುರಿತು ಯಾವುದೇ ಸಮಯದಲ್ಲಿ ಕರೆ ಮಾಡಿ ಪಶುಪಾಲನೆ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

ಬೀದರ್ ಜಿಲ್ಲೆಯ ರೈತರಿಂದಲೂ ಅರ್ಜಿ ಆಹ್ವಾನ

ಬೀದರ್ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಆಡು ಸಾಕಾಣಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ :

ಜುಲೈ 7 ರಿಂದ 28 ರರವರೆಗೆ  ಕುರಿ ಮತ್ತು ಆಡು ಸಾಕಾಣಿಕೆ ಹಾಗೂ ಆಧುನಿಕ ಹೈನುಗಾರಿಕೆ ತರಬೇತಿ ನಡೆಯಲಿದೆ. ಆಸಕ್ತ ರೈತರು ಹಾಜರಿ ಸಮಯದಲ್ಲಿ ಆಧಾರ್ ಕಾರ್ಡ್ ಸಲ್ಲಿಸಬೇಕು. ತರಬೇತಿಯಲ್ಲಿ ಕೋವಿಡ್  ಮಾರ್ಗಸೂಚಿಯನ್ವಯ ಆಸಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕುರಿ ಸಾಕಾಣಿಯಲ್ಲಿ ಆಸಕ್ತಿಯಿರುವ ರೈತರು ಸದರಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಬೀದರ್ ಪಶಉಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಮುಖ್ಯ ಪಶು ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment