ಕುರಿ, ಮೇಕೆ ಸಾಕಾಣಿಕೆ, ಮೊಲ ಸಾಕಾಣಿಕೆ, ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ರೈತಬಾಂಧವರಿಗೆ ಸಂತಸದ ಸುದ್ದಿ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಪಶುಸಾಕಾಣಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ (Goat farming training ) ತರಬೇತಿ ನೀಡುತ್ತದೆ.
ಹೌದು, ರಾಜ್ಯದಲ್ಲಿ ಪ್ರಸ್ತುತ 25 ತರಬೇತಿ ಕೇಂದ್ರಗಳಿವೆ. ಅವುಗಳ ಪಟ್ಟಿಯನ್ನು ಕೆಳಗಡೆ ನೀಡಲಾಗಿದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಪಶು ಸಾಕಾಣಿಕೆಯಲ್ಲಿ ಆಸಕ್ತಿಯಿರುವವರಿಗೆ ತರಬೇತಿ ನೀಡುವ ಕಾರ್ಯಕ್ರಮವು ಒಂದು ಪ್ರಮುಖ ಅಂಶವಾಗಿದೆ.
1 | ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ |
2 | ಜಾನುವಾರು ಸಂವರ್ಧನಾ ಕೇಂದ್ರ, ಹೆಸರಘಟ್ಟ |
3 | ಜಾನುವಾರು ಸಂವರ್ಧನಾ ಕೇಂದ್ರ, ಕುರಿಕುಪ್ಪೆ |
4 | ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರ, ಕುಣಿಕೇನಹಳ್ಳಿ |
5 | ರಾಜ್ಯ ಕುಕ್ಕುಟ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ |
6 | ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊಯ್ಲಾ |
7 | ಅಮೃತ್ ಮಹಲ್ ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಅಜ್ಜಂಪುರ |
8 | ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಧಾರವಾಡ |
9 | ಖಿಲ್ಲಾರ್ ತಳಿ ಸಂವರ್ಧನಾ ಕೇಂದ್ರ, ಬಂಕಾಪುರ |
10 | ಪ್ರಾದೇಶಿಕ ಕುಕ್ಕುಟ ಸಂವರ್ಧನಾ ಕೇಂದ್ರ, ಮಳವಳ್ಳಿ |
11 | ಪ್ರಾದೇಶಿಕ ಕುಕ್ಕುಟ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಗಂಗಾವತಿ |
12 | ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ದಕ್ಷಿಣ ಕನ್ನಡ |
13 | ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಉತ್ತರ ಕನ್ನಡ |
14 | ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ವಿಜಯಪುರ |
15 | ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ರಾಯಚೂರು |
16 | ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಕೋಲಾರ |
17 | ಹಂದಿ ತಳಿ ಸಂವರ್ಧನಾ ಕೇಂದ್ರ, ಕೊಯ್ಲಾ |
18 | ಹಂದಿ ತಳಿ ಸಂವರ್ಧನಾ ಕೇಂದ್ರ, ಕೂಡಿಗೆ |
19 | ರೈತರ ತರಬೇತಿ ಕೇಂದ್ರ, ಬೀದರ |
20 | ಪಶುವೈದ್ಯ ಪರೀಕ್ಷಕರ ತರಬೇತಿ ಕೇಂದ್ರ, ಧಾರವಾಡ |
21 | ಪಶುವೈದ್ಯ ಸಹಾಯಕರ ತರಬೇತಿ ಕೇಂದ್ರ, ಬಳ್ಳಾರಿ |
22 | ಪಶುವೈದ್ಯ ಪರೀಕ್ಷಕರ ತರಬೇತಿ ಕೇಂದ್ರ, ಹಾಸನ |
23 | ಪಶುವೈದ್ಯ ಸಹಾಯಕರ ತರಬೇತಿ ಕೇಂದ್ರ, ದಾವಣಗೆರೆ |
24 | ಪಶುವೈದ್ಯ ಪರೀಕ್ಷಕರ ತರಬೇತಿ ಕೇಂದ್ರ, ತುಮಕೂರು |
25 | ಪಶುವೈದ್ಯ ಸಹಾಯಕರ ತರಬೇತಿ ಕೇಂದ್ರ, ಬೆಳಗಾವಿ |
ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಏನೇನು ತರಬೇತಿ ನೀಡಲಾಗುತ್ತದೆ
ತರಬೇತಿಯ ಮೊದಲ ದಿನ:
ಕುರಿ ಮತ್ತು ಮೇಕೆ ಸಾಕಾಣಿಕೆಯ ಅನುಕೂಲತೆಗಳು ಹಾಗೂ ಅವುಗಳ ತಳಿಗಳು, ಕುರಿ ಮತ್ತು ಮೇಕೆಗಳಿಗೆ ಸೂಕ್ತ ವಸತಿ ನಿರ್ಮಾಣ ಹಾಗೂ ಅವುಗಳ ನಿರ್ವಹಣೆ, ಕುರಿ ಮತ್ತು ಮೇಕೆಗಳಲ್ಲಿ ತಳಿ ಸಂವರ್ಧನೆ ಹಾಗೂ ಗರ್ಭದ ಕುರಿ ಮೇಕೆಗಳ ಮತ್ತು ಮರಿಗಳ ಆರೈಕೆ.
ತರಬೇತಿಯ ಎರಡನೇ ದಿನ:
ಕುರಿ ಮತ್ತು ಮೇಕೆಗಳಿಗೆ ಸೂಕ್ತ ಮೇವಿನ ಬೆಳೆಗಳು
ಪ್ರಾದೇಶಿಕ ಮೇವು ಉತ್ಪಾದನಾ ಕ್ಷೇತ್ರಕ್ಕೆ ಭೇಟಿ ಹಾಗೂ ಮೇವು ಪ್ರಾತ್ಯಕ್ಷತಾ ತಾಕುಗಳ ವೀಕ್ಷಣೆ, ಉಣ್ಣೆ ಕತ್ತರಿಸುವ ವಿಧಾನ, ಚರ್ಮ ಸಂಸ್ಕರಣೆ ವಿಧಾನ ಹಾಗೂ ಕುರಿ ಉತ್ಪನ್ನಗಳ ಮೌಲ್ಯ ವರ್ಧನೆ. ಮೇಕೆ ಸಾಕಾಣಿಕೆಯಲ್ಲಿನ ವಿಶೇಷ ನಿರ್ವಹಣಾ ಪದ್ಧತಿಗಳನ್ನು ಕಲಿಸಲಾಗುವುದು.
ತರಬೇತಿಯ ಮೂರನೇ ದಿನ
ಕುರಿ ಮತ್ತು ಮೇಕೆಗಳಿಗೆ ಸಮತೋಲನ ಆಹಾರದ ಪೂರೈಕ, ರಸಮೇವು, ಅಜೋಲ್ಲಾ ಮತ್ತು ಜಲಕೃಷಿ ಮೇವು ಉತ್ಪಾದನೆ. ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯ ಮತ್ತು ಸಹಾಯಧನದ ಲಭ್ಯತೆ. ಕುರಿ ಮತ್ತು ಮೇಕೆಗಳಿಗೆ ಸಾಮಾನ್ಯ ರೋಗಗಳು ಹಾಗೂ ಅವುಗಳ ಪ್ರತಿಬಂಧನೆ, ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಮಾರುಕಟ್ಟೆ ಅವಕಾಶಗಳ ಹಾಗೂ ಅದರಲ್ಲಿನ ಸವಾಲುಗಳ ಕುರಿತು ತರಬೇತಿ ನೀಡಲಾಗುವುದು.
ತರಬೇತಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಪಶುಪಾಲಕರ ಸಹಾಯವಾಣಿಗೆ ಕರೆ ಮಾಡಬಹುದು. ರೈತರು ದೂರವಾಣಿ ಸಂಖ್ಯೆ (farmer toll free number) 8277100200 (ಉಚಿತ) ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಕರೆ ಮಾಡಿ ಪಶುವೈದ್ಯರು ಮತ್ತು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆಯಬಹುದು.
ಉಡುಪಿಯಾಲ್ಲಿ ಕೊಡಾ ತರಬೆತಿ ಹಮ್ಮಿಕೊಲ್ಲಿ ಸಾರ್..
When goat training in herbal???
Training for goat forming.
I need goat 🐐 farming training please inform me. I will ready for attending training program.