ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಕ್ರಿಕೇಟ್ ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆ ಸೇಪರ್ಡೆಯಾಯಿತು. ನ್ಯೂಜಿಲೆಂಡ್ ತಂಡದ ಬೌಲರ್ ಅಜಾಜ್ ಪಟೇಲ್ ಟೆಸ್ಟ್ ಕ್ರಿಕೇಟ್ ನಲ್ಲಿ ಹೊಸ ಇತಿಹಾಸ (

Ajaz patel record ten wickets in one innings) ಬರೆದಿದ್ದಾರೆ. ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೇಟ್ ಪಡೆದ ವಿಶ್ವದ ಮೂರನೇ ಆಟಗಾರರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಹಾಗಾದರೆ ಒಂದು ಇನ್ನಿಂಗ್ಸ್ ನಲ್ಲಿ 10 ವಿಕೇಟ್ ಪಡೆದ ಇನ್ನಿಬ್ಬರು ಆಟಗಾರರ್ಯಾರು ಅಂದುಕೊಂಡಿದ್ದೀರಲ್ಲಾ.. ಜಿಮ್ ಲೆಕರ್ ಮತ್ತು ಅನಿಲ್ ಕುಂಬ್ಳೆ ನಂತರ ವಿಶ್ವದ ಮೂರನೇ ಆಟಗಾರನಾಗಿ ಅಜಾಜ್ ಪಟೇಲ್ ತಮ್ಮ ಹೆಸರನ್ನು ಇತಿಹಾಸ ಪುಟದಲ್ಲಿ ಸೇರಿಸಿಕೊಂಡಿದ್ದಾರೆ..

ಇಂಗ್ಲೆಂಡಿನ ಜಿಮೆ ಲೇಕರ್ ಸಹ 1956 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೇಟ್ ಪಡೆದು ಮೊದಲ ಬಾಲರ್ ಆಗಿದ್ದರು.  51 ಓವರ್ ನಲ್ಲಿ 23 ಮೇಡನ್ ಓವರ್ ನಲ್ಲಿ 53 ರನ್ ನೀಡಿ 10 ವಿಕೇಟ್ ಪಡೆದಿದ್ದರು.

ಭಾರತದ  ಅನಿಲ್ ಕುಂಬ್ಳೆಯವರು 1999 ರಲ್ಲಿ ಪಾಕಿಸ್ತಾನ ವಿರುದ್ಧ ಒಂದೇ ಇನ್ನಿಂಗ್ಸ್ ನಲ್ಲಿ  10 ವಿಕೇಟ್ ಪಡೆದು ಎರಡನೇ ಬಾಲರ್ ಆಗಿದ್ದರು. ಈಗ ನ್ಯೂಜಿಲೆಂಡಿನ ಬಾಲರ್ ಅಜಾಜ್ ಪಟೇಲ್ ರವರು ಭಾರತದ ವಿರುದ್ಧ 10 ವಿಕೇಟ್ ಪಡೆದ ಮೂರನೇ ಬಾಲರ್ ಆಗಿದ್ದಾರೆ.

ಮುಂಬೈ ನ ವಾಂಖೇಡ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ 10 ವಿಕ್ಟೇ ಕಬಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. 47.5 ಓವರ್ ಗಳಲ್ಲಿ ಅಜಾಜ್ ಪಟೇಲ್ 119 ರನ್ ನೀಡಿ 10 ವಿಕೇಟ್ ಪಡೆದಿದ್ದಾರೆ.

Leave a Reply

Your email address will not be published. Required fields are marked *