ಕೃಷಿ ಹೊರತುಪಡಿಸಿ ಇತರ ಚಟುವಟಿಕೆಗಳ ಮೂಲಕ ರೈತರ ಆದಾಯ ಹೆಚ್ಚಿಸುವುದಕ್ಕಾಗಿ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಕೃಷಿ ಸಚಿವ ಬಿ.ಸಿ. ಪಾಟೀಲ್ ರೊಂದಿಗೆ ಸಮಿತಿಯಲ್ಲಿ ಚರ್ಚಿಸಿ ನೀಡಿದ ಭರವಸೆಯಂತೆ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪನೆ ಮಾಡಲಾಗಿದೆ.
ಗ್ರಾಮೀಣ ಮಟ್ಟದಲ್ಲಿ ಕೃಷಿಯ ಪ್ರಾಥಮಿಕ ಹಾಗೂ ಉಪ ಉತ್ಪನ್ನಗಳ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಬ್ರಾಂಡಿಂಗ್ ಮಾಡಲು ಪ್ರೋತ್ಸಾಹಿಸುವುದಕ್ಕಾಗಿ ಸೆಕೆಂಡರಿ ಕೃಷಿ ನಿರ್ದೇಶನಾಲಯ ರಚಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೇವಲ ಕೃಷಿ ಆದಾಯದಿಂದ ಮಾತ್ರ ರೈತರು ಜೀವನ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಕೃಷಿಗೆ ಪೂರಕವಾಗಿ ಇತರ ಚಟುವಟಿಕೆ ನಡೆಸುವುದಕ್ಕೆ ಪ್ರೋತ್ಸಾಹ ನೀಡಲು ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯದ ಅಗತ್ಯವಿದೆ.. ಗ್ರಾಮೀಣ ಪ್ರದೇಶದಲ್ಲಿ ಗುಡಿ ಕೈಗಾರಿಕೆ ಎನ್ನಬಹುದಾದ ಚಟುವಟಿಕೆಯು ಸ್ಥಳೀಯ ಮತ್ತು ಸುತ್ತಮುತ್ತಲಿನ ರೈತರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಸಹಾಯ ಮಾಡುವುದಿಲ್ಲಾ ಕೃಷಿ ಎಂದೇ ಪರಿಗಣಿಸಲಾಗುವುದು. ಸ್ಥಳೀಯವಾಗಿ ಲಭ್ಯವಿರುವ ಕಚ್ಚಾವಸ್ತು, ಮಾನವ ಶಕ್ತಿ ಕೌಶಲಗಳನ್ನು ಮೂಲವಾಗಿ ಸದುಪಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳನ್ನು ಸೆಕೆಂಡರಿ ಕೃಷಿಯಡಿ ಕೈಗೊಳ್ಳಲಾಗುತ್ತದೆ.
ರೈತರಿಗೆ ಉತ್ತಮ ಬೆಲೆ ಕೊಡಿಸಲು ಪೂರಕವಾಗಿ ಈ ನಿರ್ದೇಶನಾಲಯ ಕೆಲಸ ಮಾಡಲಿದೆ. ಕೃಷಿಯ ಮೂಲ ಉತ್ಪನ್ನ ಹಾಗೂ ಉಪ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ. ಜೇನು ಸಾಕಾಣಿಕೆ, ಜೈವಿಕ ಗೊಬ್ಬರ ಘಟಕಗಳು, ಸಾವಯವ ಬಣ್ಣ ಅಥವಾ ಡೈ ತಯಾರಿಕೆ, ಅಣಬೆ, ರೇಷ್ಮೆ ಹುಳು ಸಾಕಾಣೆ, ನರ್ಸರಿ ಇತ್ಯಾದಿಗಳಂತ ಸಣ್ಣ ಪ್ರಮಾಣದ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್ಥಿಕ ನೆರವು ಹೇಗೆ ನೀಡಲಾಗುವುದು?
ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ, ಸಣ್ಣ ಉದ್ಯಮಗಳಿಗೆ ನೆರವು ನೀಡಲು ಇರುವ ಮೊತ್ತದಲ್ಲಿ ರಾಜ್ಯಕ್ಕೆ ಸಿಗುವ 500 ಕೋಟಿ ರೂಪಾಯಿ ರಾಜ್ಯದ ಸಣ್ಣ ಹಾಗೂ ಸೂಕ್ಷ್ಮ ಉದ್ಯಮಿಗಳಿಗೆ ನೀಡುವ ಅನುದಾನ, ಮೇಕ್ ಇನ್ ಇಂಡಿಯಾ ಮೊದಲಾದ ಮೂಲಗಳಿಂದ ಆರ್ಥಿಕ ನೆರವು ಪಡೆಯಲಾಗುವುದು.
ಇದನ್ನೂ ಓದಿ : ಯಾವ ಬ್ಯಾಂಕಿನಲ್ಲಿ ಎಷ್ಟು ಮತ್ತು ಎಲ್ಲೆಲ್ಲಿ ಸಾಲ ಪಡೆದಿದ್ದೀರೆಂಬುದನ್ನು ಮೊಬೈಲ್ ನಲ್ಲಿಯೇ ಉಚಿತವಾಗಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಉತ್ಪನ್ನ ಮತ್ತು ಉಪ ಉತ್ಪನ್ನಗಳನ್ನು ಕಚ್ಚಾ ವಸ್ಚುವಾಗಿ ಬಳಸಿಕೊಂಡು ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಸೂಕ್ತ ಬ್ರ್ಯಾಂಡ್ ಮೂಲಕ ಮಾರುಕಟ್ಟೆ ಕಲ್ಪಿಸುವುದು ಸೆಕೆಂಡರಿ ಅಗ್ರಿಕಲ್ಚರ್ ನ ಮುಖ್ಯ ಉದ್ದೇಶವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.