Google Mapನಲ್ಲಿ ನಿಮ್ಮ ಊರು, ಅಂಗಡಿ ಮಾಹಿತಿ ಹೀಗೆ ಸೇರಿಸಿ

Written by Ramlinganna

Updated on:

Add your village place in Google map ನಲ್ಲಿ ನಮ್ಮ ಊರು, ಅಂಗಡಿ, ದೇವಸ್ಥಾನ, ರಸ್ತೆಗಳನ್ನು ಮೊಬೈಲ್ ನಲ್ಲೇ ಸೇರಿಸಬಹುದು. ಹೌದು, ನಾವು ಗೂಗಲ್ ನಲ್ಲಿ ವಿವಿಧ ಸ್ಥಳಗಳನ್ನು ಹುಡುಕಿದಾಗ ಸಿಗುವ ಮಾಹಿತಿ ಈಗ ನಮ್ಮ ಊರು, ರಸ್ತೆ, ಅಂಗಡಿ, ದೇವಸ್ಥಾನಗಳ ಮಾಹಿತಿಯೂ ಸಿಗುತ್ತದೆ. ಗುರುತು, ಪರಿಚಯವಿಲ್ಲದ ರಸ್ತೆಗಳಲ್ಲಿ ಓಡಾಡಲು ಗೂಗಲ್ ಮ್ಯಾಪ್ ಸಹಾಯ ಮಾಡುತ್ತದೆ. ಗೂಗಲ್ ನಲ್ಲಿ ಸ್ಥಳಗಳನ್ನು ಸೇರಿಸುವುದಷ್ಟೇ ಅಲ್ಲ, ಇದ್ದ ಸ್ಥಳಗಳನ್ನು ಬದಲಾವಣೆ ಮಾಡಬಹುದು.

Add your village place in Google map ನಲ್ಲಿ ನಿಮ್ಮೂರಿನ ಸ್ಥಳ ಅಂಗಡಿ, ಗುಡಿ ಮಾಹಿತಿ ಹೀಗೆ ಸೇರಿಸಿ

ಸಾರ್ವಜನಿಕರು ತಮ್ಮೂರಿನ ಸ್ಥಳ, ಅಂಗಡಿ, ದೇವಸ್ಥಾನ, ರಸ್ತೆಗಳ ಮಾಹಿತಿ ಸೇರಿಸಲು ಈ  ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಮ್ಯಾಪ್ Maps ಮೇಲೆ ಕ್ಲಿಕ್ ಮಾಡಬೇಕು.  ಆಗ ನೀವು ಇದ್ದ ಸ್ಥಳ ಪೈಂಟ್ ಕಾಣಿಸುತ್ತದೆ.  ಅದರ ಮೇಲೆ ಕ್ಲಿಕ್ ಮಾಡಬೇಕು. ಯುವರ್ ಲೋಕೇಶನ್ ಕೆಳಗಡೆ ಶೇರ್ ಲೋಕೇಶನ್, ಕ್ಯಾಲಿಬ್ರಾ, ಸೇವ್ ಪಾರ್ಕಿಂಗ್, ರಿಪೋರ್ಟ್ ಪ್ಲಾಬ್ಲಮ್, Add a missing place  ಹೀಗೆ ಆಯ್ಕೆಗಳು ಕಾಣುತ್ತವೆ. ಅಲ್ಲಿ Add a missing place ಮೇಲೆ ಕ್ಲಿಕ್ ಮಾಡಬೇಕು.

ನಿಮ್ಮ ಸ್ಥಳ ಹೀಗೆ ಸೇರಿಸಿ (Place Details)

ಪ್ಲೇಸ್ ಡಿಟೇಲ್ಸ್ ಕೆಳಗಡೆ ನಿಮ್ಮ ಸ್ಥಳ, ಅಂಗಡಿ, ಊರು, ರಸ್ತೆ ಹೀಗೆ ನೀವು ಯಾವುದನ್ನು ಸೇರಿಸಬೇಕೆಂದುಕೊಂಡಿದ್ದೀರೋ ಅದನ್ನು ನಮೂದಿಸಬೇಕು. ನಂತರ ಕೆಟೇಗರಿ ಯಲ್ಲಿ Food and drink, shopping, sevices, hotels and lodging, Religion, Residential and Education ಹೀಗೆ ನಿಮಗೆ ಆಯ್ಕೆಗಳು ಕಾಣುತ್ತವೆ.

ಉದಾಹರಣೆಗೆ ನೀವು ಅಂಗಡಿಯ ಮಾಹಿತಿ ಸೇರಿಸಬೇಕೆಂದುಕೊಂಡಿದ್ದೀರೆ Shopping ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನಿಮ್ಮದು ಯಾವ ಅಂಗಡಿಯಿದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. Address Required ನಲ್ಲಿ ಅಲ್ಲಿ ಕಾಣುವ ಪ್ಲಸ್ ಮೇಲೆ ಕ್ಲಿಕ್ ಮಾಡಿದರೆ ತಾನಾಗಿಯೇ ನಿಮ್ಮ ವಿಳಾಸ ನಮೂದಿಸಿಕೊಳ್ಳುತ್ತದೆ.

ಇದನ್ನೂ ಓದಿ ರೈತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ ರೈತರ 13ನೇ ಕಂತಿನ ಪಟ್ಟಿ ಬಿಡುಗಡೆ: ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ

ಇಲ್ಲದಿದ್ದರೆ ನೀವು ಯಾವ ವಿಳಾಸ ತುಂಬಬೇಕೆಂದುಕೊಂಡಿದ್ದೀರೋ ಅದನ್ನುಅಲ್ಲಿ ನಮೂದಿಸಬೇಕು. Located within ನಲ್ಲಿ ನಿಮ್ಮ ಜಿಲ್ಲೆ, ಸೇರಿದಂತೆ ಇನ್ನಿತರ ಮಾಹಿತಿ ಭರ್ತಿ ಮಾಡಬಹುದು.

Add more ಡಿಟೇಲ್ ಮೇಲೆ ಕ್ಲಿಕ್ ಮಾಡಿ  ಇನ್ನೂ ಹೆಚ್ಚಿನ ಮಾಹಿತಿ ಅಂದರೆ ನಿಮ್ಮ ಮೊಬೈಲ್ ನಂಬರ್ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ತುಂಬಬಹುದು.

ಫೋಟೋ ಸೇರಿಸುವುದು ಹೇಗೆ? (How to add Photo)

ಪ್ಲೇಸ್ ಫೋಟೋ ಕೆಳಗಡೆ ಕಾಣುವ Add Photos ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಅಂಗಡಿಯ, ದೇವಸ್ಥಾನದ ಫೋಟ್ ಅಪ್ಲೋಡ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಊರಿನ ಸ್ಥಳ, ಅಂಗಡಿ, ದೇವಸ್ಥಾನದ ನೀವು ಯಾವುದರ ಕುರಿತು ನಮೂದಿಸಿದ್ದೀರೋ ಆ ಮಾಹಿತಿಯು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಗೂಗಲ್ 7 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ.  ಈ ಮೂಲಕ ಬಳಕೆದಾರರು ತಾವು ಸೇರಿಸಿದ ಸ್ಥಳಗಳ ಕುರಿತು  ಮಾಹಿತಿ ನೀಡುವ ಮೂಲಕ ಆ ಸ್ಥಳವನ್ನು ಹುಡುಕಬಹುದು.

ಇದನ್ನೂ ಓದಿ ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ: ಇಲ್ಲಿದೆ ಮಾಹಿತಿ

ಈ ಗೂಗಲ್ ಮ್ಯಾಪ್ ಸಹಾಯದಿಂದ ಸಾರ್ವಜನಿಕರು ತಮ್ಮ ಅಂಗಡಿ, ಗುಡಿ, ಗುಂಡಾರ, ಮನೆ, ರಸ್ತೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನುಮನೆಯಲ್ಲಿಯೇ ಕುಳಿತು ಮಾಡಬಹುದು. ಇದಕ್ಕೆ ರೈತರಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಒಂದೆರಡು ನಿಮಿಷದಲ್ಲೇ ಈ ಮಾಹಿತಿಗಳನ್ನು ಭರ್ತಿ ಮಾಡಬಹುದು.

Leave a Comment