seedling available in low price ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಡಿಮೆ ದರದಲ್ಲಿ ತೋಟಗಾರಿಕೆ ಸಸಿಗಳು, ಹಣ್ಣಿನ ಸಸಿಗಳು ಹಾಗೂ ಅಲಂಕಾಕರಿಕ ಸಸಿಗಳು ವಿವಿಧ ತೋಟಗಾರಿಕೆ ಇಲಾಖೆಗಳಲ್ಲಿ ಲಭ್ಯವಿದೆ.
ಕಲಬುರಗಿ ಜಿಲ್ಲೆಯ ತೋಟಗಾರಿಕೆ ಇಲಾಖೆಯ ವಿವಿಧ ತೋಟಗಾರಿಕೆ ಕ್ಷೇತ್ರ / ನರ್ಸರಿಗಳಲ್ಲಿ ವಿವಿಧ ಹಣ್ಣಿನ ಕಸಿ / ಸಸಿಗಳು ಹಾಗೂ ಅಲಂಕಾರಿಕ ಸಸಿಗಳು ಬ್ಯಾಗಿನಲ್ಲಿ ಹಾಗೂ ಪ್ಲಾಸ್ಟಿಕ್ ಕುಂಡಗಳಲ್ಲಿಸರ್ಕಾರಿ ನಿಗದಿಪಡಿಸಿದ ಇಲಾಖಾ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಕಲಬುರಗಿ (ರಾಜ್ಯ ವಲಯ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಕ್ಷೇತ್ರದಲ್ಲಿ ಮಾವು, ಪೇರು, ನಿಂಬೆ, ನುಗ್ಗೆ, ಕರಿಬೇವು, ಹಾಗೂ ಅಲಂಕಾರಿ ಸಸಿಗಳು ಮತ್ತು ಕುಂಡಗಳು ಲಭ್ಯವಿದೆ. ಇಲ್ಲಿ ಸಸಿಗಳು ಬೇಕಾದರೆ ಪ್ರದೀಪ್ 9008556488 ಇವರನ್ನು ಸಂಪರ್ಕಿಸಬಹುದು.
ಕಲಬುರಗಿ ತಾಲೂಕಿನ ಕೆಸರಟಗಿ ನರ್ಸರಿಯಲ್ಲಿ ಮಾವು, ಸೀತಾಫಲ, ನಿಂಬೆ, ನುಗ್ಗೆ, ಕರಿಬೇವು ಹಾಗೂ ಅಲಂಕಾರಿ ಸಸಿಗಳು ಹಾಗೂ ಕುಂಡಗಳು ಲಭ್ಯವಿದ್ದು, ಇಲ್ಲಿ ಸಸಿಗಳು ಬೇಕಾದಲ್ಲಿ ಜಯಮಾಲಾ 9606401269 ಇವರನ್ನು ಸಂಪರ್ಕಿಸಬಹುದಾಗಿದೆ.
ಕಲಬುರಗಿ ತಾಲೂಕಿನ ಮಾಲಗತ್ತಿ ನರ್ಸರಿಯಲ್ಲಿ ಮಾವು, ನಿಂಬೆ, ಕರಿಬೇವು, ಹಾಗೂ ಅಲಂಕಾರಿಕ ಸಸಿಗಳು ಮತ್ತು ಕುಂಡಗಳು ಲಭ್ಯವಿದ್ದು ತಿಪ್ಪಮ್ಮ 9060394179 ಗೆ ಸಂಪರ್ಕಿಸಲು ಕೋರಲಾಗಿದೆ.
ಅಫಜಲ್ಪೂರ ತಾಲೂಕಿನ ಗುಡೂರ ಕ್ಷೇತ್ರದಲ್ಲಿ ನಿಂಬೆ, ನುಗ್ಗೆ, ಕರಿಬೇವು, ತೆಂಗು, ಹಾಗೂ ಅಲಂಕಾರಿಕ ಸಸಿಗಳಉ ಮತ್ತು ಕುಂಡಗಳು ಲಭ್ಯವಿದ್ದು, ರಾಜೇಶ ಇವರ ಮೊಬೈಲ್ ನಂಬರ್ 7019727185 ಗೆ ಸಂಪರ್ಕಿಸಬಹುದು.
ಕಲಬುರಗಿ ತಾಲೂಕಿನ ಬಡೇಪುರ ನರ್ಸರಿಯಲ್ಲಿ ನುಗ್ಗೆ, ಕರಿಬೇವು, ತೆಂಗು ಹಾಗೂ ಅಲಂಕಾರಿಕ ಸಸಿಗಳು ಮತ್ತು ಕುಂಡಗಳು ಲಭ್ಯವಿದ್ದು, ಸುರೇಶ ಇವರ ಮೊಬೈಲ್ ನಂಬರ್ 9591482423 ಗೆ ಸಂಪರ್ಕಿಸಬೇಕು.
ಕಲಬುರಗಿ ಐವಾನ್ ಇ ಶಾಹಿ ನರ್ಸರಿಯಲ್ಲಿ ಅಲಂಕಾರಿಕ ಸಸಿಗಳು ಹಾಗೂ ಕುಂಡಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಮಮತಾ ಮೊಬೈಲ್ ನಂಬರ್ 9916812666 ಗೆ ಸಂಪರ್ಕಿಸಲು ಕೋರಲಾಗಿದೆ.
ಇದನ್ನೂ ಓದಿ : ಈ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ: ಜಮೆಯಾಗಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಚಿತ್ತಾಪುರ ತಾಲೂಕಿನ ಗೋಳಾ (ಕೆ) ನರ್ಸರಿಯಲ್ಲಿ ತೆಂಗು, ನಿಂಬೆ ಹಾಗೂ ಕರಿಬೇವು ಸಸಿಗಳು ಲಭ್ಯವಿದೆ. ಸಸಿಗಳು ಬೇಕಾದಲ್ಲಿ ಹೆಚ್ಚಿನ ಮಾಹಿತಿಗಾಗಿ ನಿಂಗಮ್ಮ ಮೊಬೈಲ್ ನಂಬರ್ 8884931830 ಗೆ ಸಂಪರ್ಕಿಸಬಹುದು.
ಆಳಂದ ತಾಲೂಕಿನ ಹಳ್ಳಿಸಲಗರ ಕ್ಷೇತ್ರದಲ್ಲಿ ಮಾವು, ನಿಂಬೆ ಹಾಗೂ ಕರಿಬೇವು ಸಸಿಗಳು ಲಭ್ಯವಿದೆ. ಶೋಭಾ ಇವರ ಮೊಬೈಲ್ ನಂಬರ್ 9108382507 ಗೆ ಸಂಪರ್ಕಿಸಲು ಕೋರಲಾಗಿದೆ.
ಸೇಡಂ ತಾಲೂಕಿನ ಕಚೇರಿ ನರ್ಸರಿಯಲ್ಲಿ ನುಗ್ಗೆ, ತೆಂಗು, ಅಲಂಕಾರಿ ಸಸಿಗಳು ಹಾಗೂ ಕುಂಡಗಳು ಲಭ್ಯವಿದ್ದು. ಮಮತಾ ಅವರ ಮೊಬೈಲ್ ನಂಬರ್ 9538622086 ಗೆ ಸಂಪರ್ಕಿಸಬಹುದು. ಜಿಲ್ಲೆಯ ಎಲ್ಲಾ ರೈತರು ಹಾಗೂ ಸರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
seedling available in low price ತೆಂಗಿನ ಸಸಿಗಳು ಲಭ್ಯ
ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ತೆಂಗಿನ ಸಸಿಗಳು ಲಭ್ಯವಿದೆ. ಹೌದು, ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ದೃಢೀಕರಿಸಿದ ತೆಂಗಿನ ಗಿಡಗಳನ್ನು ನಿಗದಿತ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಕಳಸ ತೋಟಗಾರಿಕೆ ಕ್ಷೇತ್ರ ಮೂಡಿಗೆರೆ ಮೊಬೈಲ್ ನಂ. 9449586401 ಗೆ ಸಂಪರ್ಕಿಸಬಹುದು. ಮೆಣಸೂರು ತೋಟಗಾರಿಕೆ ಕ್ಷೇತ್ರ ಎನ್.ಆರ್.ಪುರ ಮೊಬೈಲ್ ನಂಬರ್ 9008102037ಗೆ ಸಂಪರ್ಕಿಸಬಹುದು. ಆನೆಗುಂದ ಕ್ಷೇತ್ರ, ಶೃಂಗೇರಿ ಮೊಬೈಲ್ ಸಂಖ್ಯೆ 9448935685 ಗೆ ಸಂಪರ್ಕಿಸಬಹುದು.
ಹರಿಪರಪುರ ಕ್ಷೇತ್ರ, ಕೊಪ್ಪ , ಸಖರರಾಯಪಟ್ಟಣ-ಬಾಕಿನರಕ್ಷೇತ್ರ ಕಡೂರ ಮೊಬೈಲ್ ನಂಬರ್ 8296771189ಗೆ ಸಂಪರ್ಕಿಸಬಹುದು. ಅದೇ ರೀತಿ ಹರುವನಹಳ್ಳಿ ಕ್ಷೇತ್ರ ಕಡೂರ ಮೊಬೈಲ್ ನಂಬರ್ 9741546502ಗೆ ಸಂಪರ್ಕಿಸಬಹುದು. ಬೇಲೆನಹಳ್ಳಿ ಕ್ಷೇತ್ರ, ತರಿಕೇರೆ ಮೊಬೈಲ್ ನಂಬರ್ 7483041922 ಗೆ ಸಂಪರ್ಕಿಸಬಹುದು. ಬ್ಯಾಗಡೇಹಳ್ಳಿ ಕ್ಷೇತ್ರ, ಕಡೂ ಮೊಬೈಲ್ ನಂಬರ್ 8277061764, ಬಿ. ಕಣಬೂರ ಕ್ಷೇತ್ರ, ಎನ್.ಆರ್.ಪುರ ಮೊ. ಸಂಖ್ಯೆ 9986031245 ಗೆ ಸಂಪರ್ಕಿಸಬಹುದು. ಬಾಳಗಡಿ, ಬಿಂತವಳ್ಳಿ ಕ್ಷೇತ್ರ ಮೊ. ಸಂ. 8431519632 ಗೆ ಸಂಪರ್ಕಿಸಬಹುದು. ಈ ಮೇಲಿನ ಕ್ಷೇತ್ರಗಳಲ್ಲಿ ತೆಂಗಿನ ಗಿಡಗಳು ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.