pm kisan land seeding here ಪಿಎಂ ಕಿಸಾನ್ ಸ್ಟೇಟಸ್ ನಲ್ಲಿ ಲ್ಯಾಂಡ್ ಸೀಡಿಂಗ್ ನೋ ಇದ್ದರೆ ಇನ್ನೂ ಮುಂದೆ 14ನೇ ಕಂತಿನ ಹಣ ಜಮೆಯಾಗಲ್ಲ.
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಸ್ಟೇಟಸ್ ಪೇಜ್ ನಲ್ಲಿ ಲ್ಯಾಂಡ್ ಸಿಡೀಂಗ್ ನೋ ತೋರಿಸುತ್ತಿದ್ದರೆ ಯಸ್ ಮಾಡುವುದು ಹೇಗೆ? ಲ್ಯಾಂಡ್ ಸೀಡಿಂಗ್ ಎಂದರೇನು? ಲ್ಯಾಂಡ್ ಸೀಡಿಂಡ್ ನೋ ಇರುವುದನ್ನು ಯಸ್ ಎಲ್ಲಿ ಮಾಡಬೇಕು? ಎಂಬಿತ್ಯಾದಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ನಲ್ಲಿ ಲ್ಯಾಂಡ್ ಸೀಡಿಂಗ್ ನೋ ಇದ್ದರೆ ನಿಮಗೆ ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಜಮೆಯಾಗುವುದಿಲ್ಲ. ಒಂದು ವೇಳೆ ನಿಮಗೆ ಈಗಾಗಲೇ ಜಮೆಯಾಗುತ್ತಿದ್ದು ಈಗ ಏಕಾಏಕಿ ನಿಲ್ಲಿಸಿದ್ದರೆ ನಿಮಗೇಕೆ ಜಮೆಯಾಗುತ್ತಿಲ್ಲ ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
pm kisan land seeding here ಏನಿದು ಲ್ಯಾಂಡ್ ಸೀಡಿಂಗ್?
ಪಿಎಂ ಕಿಸಾನ್ ಯೋಜನೆಯ ಲಾಭ ನಿಜವಾದ ರೈತರಿಗೆ ಸಿಗಬೇಕೆಂಬ ಉದ್ದೇಶದಿಂದಾಗಿ ಇಕೆವೈಸಿಯೊಂದಿಗೆ ದಾಖಲೆಗಳ ಪರಿಶೀಲನೆಯನ್ನು ಸಹ ಮಾಡಲಾಗುತ್ತಿದೆ. ದಾಖಲೆ ಪರಿಶೀಲನೆ ಮಾಡುವಾಗಿ ನಿಮ್ಮ ಜಮೀನಿನ ದಾಖಲೆಯಲ್ಲಿಯಲ್ಲಿರುವ ಹೆಸರು ಹಾಗೂ ನೋಂದಣಿ ಮಾಡುವಾಗ ಹೆಸರು ವ್ಯತ್ಯಾಸವಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಬಹುದು.
ಪಿಎಂ ಕಿಸಾನ್ ಸ್ಟೇಟಸ್ ಪೇಜ್ ನಲ್ಲಿ ಲ್ಯಾಂಡ್ ಸೀಡಿಂಗ್ ಯಸ್ ಇದೆಯೋ ನೋ ಇದೆಯೋ? ಹೀಗೆ ಚೆಕ್ ಮಾಡಿ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಸ್ಟೇಟಸ್ ಪೇಜ್ ನ್ನು ಚೆಕ್ ಮಾಡಲು ಈ
https://pmkisan.gov.in/BeneficiaryStatus_New.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು Enter Registration No. ಕೆಳಗಡೆ ಪಿಎಂ ಕಿಸಾನ್ ಯೋಜನೆಯ ನೋಂದಣಿ ಸಂಖ್ಯೆ ಹಾಕಬೇಕು. ನಿಮಗೆ ಪಿಎಂ ಕಿಸಾನ್ ಯೋಜನೆಯ ನೋಂದಣಿ ಸಂಖ್ಯೆ ಗೊತ್ತಿಲ್ಲದಿದ್ದರೆ Know Your Registration No. ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ Get Mobile OTP ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಕಳಿಸಲಾಗುವುದು. ಆ ಓಟಿಪಿಯನ್ನು ನಮೂದಿಸಿ Get Details ಮೇಲೆ ಕ್ಲಿಕ್ ಮಾಡಬೇಕು.
ಆಗ ಪಿಎಂ ಕಿಸಾನ್ ಯೋಜನೆಯ ನೋಂದಣಿ ಸಂಖ್ಯೆ ಹಾಗೂ ನಿಮ್ಮ ಹೆಸರು ಕಾಣಿಸುತ್ತದೆ. ನೋಂದಣಿ ಸಂಖ್ಯೆಯನ್ನು ಕಾಪಿ ಮಾಡಿಕೊಳ್ಳಬೇಕು ನೀವು ಬರೆದಿಟ್ಟುಕೊಳ್ಳಬಹುದು. ಕಾಪಿ ಮಾಡಿಕೊಂಡ ನೋಂದಣಿ ಸಂಖ್ಯೆಯನ್ನು ನಮೂದಿಸಲು ಬ್ಯಾಕ್ ಮೇಲೆ ಕ್ಲಿಕ್ ಮಾಡಬೇಕು.ಮೇಲೆ ತಿಳಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಕಾಪಿ ಮಾಡಿಕೊಂಡ ನೋಂದಣಿ ಸಂಖ್ಯೆಯನ್ನು ಹಾಕಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : ವಿಮೆ ಹಣ ಜಮೆಯಾಗಿಲ್ಲವೇ? ಈ ನಂಬರಿಗೆ ಕರೆ ಮಾಡಿ ಬೆಳೆ ವಿಮೆ ಮಾಹಿತಿ ಪಡೆಯಿರಿ
ಆಗ ನಿಮ್ಮ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಲ್ಯಾಂಡ್ ಸೀಡಿಂಗ್ ಯಸ್ ಇದೆಯೋ ನೋ ಇದೆಯೋ ಎಂಬುದನ್ನು ನೋಡಬಹುದು. ಯಸ್ ಇದ್ದರೆ ಇಕೆವೈಸಿ ಚೆಕ್ ಮಾಡಬೇಕು. ಅಲ್ಲಿಯೂ ಯೆಸ್ ಇದ್ದರೆ ನಿಮಗೆ ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ತಡೆಹಿಡಿಯಲಾಗಿರುತ್ತದೆ ಎಂಬುದನ್ನು ತೋರಿಸಲಾಗಿರುತ್ತದೆ. ಮೊಬೈಲ್ ನಲ್ಲಿ ಚೆಕ್ ಮಾಡಲು ಸಮಸ್ಯೆಯಾಗುತ್ತಿದ್ದರೆ ಕೂಡಲೇ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಚೆಕ್ ಮಾಡಬಹುದು.
ಲ್ಯಾಂಡಿ ಸೀಡಿಂಗ್ ಎಲ್ಲಿ ಸರಿಪಡಿಸಬೇಕು?
ಲ್ಯಾಂಡ್ ಸೀಡಿಂಗ್ ನ್ನು ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಸರಿಪಡಿಸಿಕೊಳ್ಳಬೇಕು. ಹೌದು, ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ನಲ್ಲಿ ಲ್ಯಾಂಡ್ ಸೀಡಿಂಗ್ ನೋ ತೋರಿಸುತ್ತಿದ್ದರು ಹಾಗೂ ನಿಮಗೆ ಪಿಎಂ ಕಿಸಾನ್ ಜಮೆ ಮಾಡುವುದನ್ನು ತಡೆಹಿಡಿದಿದ್ದರೆ ಕೂಡಲೇ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಸರಿಪಡಿಸಿಕೊಳ್ಳಲು ಅವಕಾಶವಿದೆ.