download their village land map ರೈತರು ತಮ್ಮ ಜಮೀನಿನ ಮ್ಯಾಪ್ ನ್ನು ಮೊಬೈಲ್ ನಲ್ಲೇ ಪಡೆಯಬಹುದು. ರೈತರ ಬಳಿ ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು, ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಹೌದು, ಕಂದಾಯ ಇಲಾಖೆಯು ಈಗ ರೈತರಿಗೆ ತಮ್ಮ ಜಮೀನಿನ ಸರ್ವೆ ನಂಬರ್ ಸುತ್ತಮುತ್ತ ಯಾವ ಯಾವ ಸರ್ವೆ ನಂಬರಗಳಿವೆ, ಹಾಗೂ ಜಮೀನಿನ ಹತ್ತಿರ ಕೆರೆಕಟ್ಟೆ, ಗುಡ್ಡಗಳು, ಜಮೀನಿನ ಸುತ್ತಮುತ್ತ ಬಂಡಿದಾರಿ, ಕಾಲುದಾರಿ, ಕಾಲುವೆ, ನಿಮ್ಮೂರಿನ ಅಕ್ಕಪಕ್ಕದ ಊರಿಗೆ ಹೋಗುವ ದಾರಿಗಳ ಮಾಹಿತಿಯೂ ಈ ಮ್ಯಾಪ್ ನಲ್ಲಿರುತ್ತದೆ.
ರೈತರು ತಮ್ಮೂರಿನ ಅಥವಾ ಜಮೀನಿನ ಮ್ಯಾಪ್ ಪಡೆಯಲು ಯಾವ ಕಚೇರಿಗೂ ಹೋಗಬೇಕಿಲ್ಲ, ಯಾರ ಬಳಿಯೂ ಕೈಕಟ್ಟಿ ಕುಳಿತುಕೊಳ್ಳಬೇಕಿಲ್ಲ. ಮನೆಯಲ್ಲಿಯೇ ಕುಳಿತು ಅತೀ ಸುಲಭವಾಗಿ ಮ್ಯಾಪನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಸಂಪೂರ್ಣ ಮಾಹಿತಿ.
download their village land map ಮೊಬೈಲ್ ನಲ್ಲೇ ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ರೈತರು ತಮ್ಮ ಮೊಬೈಲ್ ನಲ್ಲೇ ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಲು ಈ
https://www.landrecords.karnataka.gov.in/service3/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ಅಂದರೆ ರೆವಿನ್ಯೂ ಮ್ಯಾಪ್ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ರೈತರು ಇಲ್ಲಿ ತಮ್ಮ ಜಿಲ್ಲೆ, ತಾಲೂಕು, ಹೋಬಳಿ ಆಯ್ಕೆ ಮಾಡಿಕೊಂಡು ಕ್ಯಾಡಸ್ಟ್ರಾಲ್ ಮಾಯ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ರೈತರು ಆಯ್ಕೆ ಮಾಡಿಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಬರುವು ಗ್ರಾಮಗಳ ಪಟ್ಟಿ ಕಾಣುತ್ತದೆ. ರೈತರು ತಮ್ಮ ಗ್ರಾಮದ ಮುಂದಿರುವ ಪಿಡಿಎಫ್ ಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ರೈತರು ಆಯ್ಕೆ ಮಾಡಿಕೊಂಡಿರುವ ಮ್ಯಾಪ್ ಡೌನ್ಲೋಡ್ ಆಗಲಿಲ್ಲವೆಂದರೆ ರೈತರಿಗೆ ಪಾಪ್ ಅಪ್ ಬ್ಲಾಕ್ಡ್ ಎಂಬ ಮೆಸೇಜ್ ಕಾಣುತ್ತದೆ. ಅಲ್ಲಿ ರೈತರು ಆಲ್ವೇಸ್ ಶೇ ಮೇಲೆ ಕ್ಲಿಕ್ ಮಾಡಿದರೆ ಸಾಕು, ರೈತರಿಗೆ ಯಾವ ಊರು ಆಯ್ಕೆ ಮಾಡಿಕೊಂಡಿದ್ದಾರೋ ಆ ಊರಿನ ಮ್ಯಾಪ್ ಡೌನ್ಲೋಡ್ ಆಗುತ್ತದೆ.
ಈ ಮ್ಯಾಪ್ ನಿಂದ ಯಾವ ಯಾವ ಮಾಹಿತಿ ಪಡೆಯಬಹುದು?
ರೈತರು ಮ್ಯಾಪ್ ಡೌನ್ಲೋಡ್ ಮಾಡಿಕೊಂಡ ನಂತರ ಅವರಿಗೆ ತಮ್ಮೂರಿನ ಗಡಿರೇಖೆ, ಆ ಊರಿನ ಸುತ್ತಮುತ್ತಲಿರುವ ಸರ್ವೆ ನಂಬರ್ ಗಳು, ಹಳ್ಳ, ಬೆಟ್ಟ, ಕಾಲುವೆ, ಕಾಲುದಾರಿ, ಬಂಡಿದಾರಿಗಳನ್ನು ನೋಡಬಹುದು.
ರೈತರಿಗೇಕೆ ಈ ಮ್ಯಾಪ್ ಬೇಕು?
ರೈತರು ತಮ್ಮೂರಿನ ಗಡಿರೇಖೆಗಳನ್ನು ನೋಡಬಹುದು. ಇದರೊಂದಿಗೆ ತಮ್ಮ ಜಮೀನಿನ ಸುತ್ತಮುತ್ತ ಕಾಲುದಾರಿ, ಬಂಡಿದಾರಿಯಿದೇಯೇ? ಹಳ್ಳಕೊಳ್ಳಗಳಿದ್ದವೇ? ಬೆಟ್ಟಗಳಿದ್ದವೆ. ಕಾಲುವೆಗಳಿತ್ತೇ ಎಂಬ ಮಾಹಿತಿ ಪಡೆಯಬಹುದು. ಇದರೊಂದಿಗೆ ತಮ್ಮ ಜಮೀನಿನ ಸುತ್ತಮುತ್ತ ಯಾವ ಯಾವ ಸರ್ವೆ ನಂಬರ್ ಗಳಿವೆ ಎಂಬ ಮಾಹಿತಿಯನ್ನು ಸಹ ಪಡೆಯಬಹುದು.
ಇದನ್ನೂ ಓದಿ PM kisan ಅರ್ಹ ಮತ್ತು ಅನರ್ಹ ರೈತರ ಪಟ್ಟಿ ಬಿಡುಗಡೆ
ರೈತರು ಆಯ್ಕೆ ಮಾಡಿಕೊಂಡ ಗ್ರಾಮಕ್ಕೆ ಅಕ್ಕಪಕ್ಕದ ಗ್ರಾಮಗಳಿಂದ ಬರುವ ರಸ್ತೆ ಎಲ್ಲಿಂದ ಹಾದು ಹೋಗುತ್ತದೆ. ತಾತ ಅಜ್ಜಂದಿರ ಕಾಲದಲ್ಲಿ ಅಕ್ಕಪಕ್ಕದ ಊರಿಗೆ ಹೋಗುವ ದಾರಿ, ಬಂಡಿದಾರಿಯ ಎಲ್ಲಿಂದ ಹಾದು ಹೋಗಿತ್ತು ಎಂಬುದನ್ನು ಸಹ ನೋಡಬಹುದು. ನಿಮ್ಮೂರಿನ ಸುತ್ತಮುತ್ತಹಳ್ಳವಿದ್ದರೆ ಎಲ್ಲಿಂದ ಹರಿದು ಬರುತ್ತಿದೆ ಮತ್ತು ಹಳ್ಳ ಯಾವ ಸರ್ವೆ ನಂಬರ್ ಹತ್ತಿರದಿಂದ ಯಾವ ಊರಿಗೆ ಹರಿದುಹೋಗುತ್ತದೆ ಎಂಬ ಹರಿಯುವ ದಿಕ್ಕೂ ಸಹ ಈ ಮ್ಯಾಪ್ ನಲ್ಲಿರುತ್ತದೆ.
ಊರಿನ ಸುತ್ತಮುತ್ತ ಹಾಳಾದ ಬಾವಿಗಳಿದ್ದರೂ ಈ ಮ್ಯಾಪ್ ನಲ್ಲಿ ತೋರಿಸಲಾಗಿರುತ್ತದೆ. ಮ್ಯಾಪ್ ಎಡಭಾಗದಲ್ಲಿ ಹಳ್ಳ, ಕೊಳ್ಳ, ಕೆರೆ, ಬಾವಿ, ದೇವಸ್ಥಾನ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಗುರುತಿಸಲು ಮಾರ್ಕ್ ಮಾಡಲಾಗಿರುತ್ತದೆ.ಅದರ ಆಧಾರದ ಮೇಲೆ ಎಲ್ಲಾ ಮಾಹಿತಿಗಳನ್ನು ನೋಡಬಹುದು.