minimum documentation and records ಮುಂದಿನ 2 ವರ್ಷಗಳಲ್ಲಿ 1 ಕೋಟಿ ಉಚಿತ ಎಲ್ ಪಿಜಿ ಸಂಪರ್ಕ ನೀಡಲು ಯೋಜಿಸಾಗಿದೆ. ಇದಕ್ಕಾಗಿ ಅಡುಗೆ ಅನಿಲ ದೊರೆಯುವ ಸ್ಥಳದ ಬಗ್ಗೆ ಯಾವುದೇ ಪುರಾವೆಯನ್ನು ಒತ್ತಾಯಿಸದೆ, ಕನಿಷ್ಠ ಗುರುತಿನ ದಾಖಲೆಗಳೊಂದಿಗೆ ನೀಡಲು ಯೋಜಿಸಲಾಗಿದೆ ಎಂದು ತೈಲ ಕಾರ್ಯದರ್ಶಿ ತರುಣ್ ಕಪೂರ್ ಹೇಳಿದ್ದಾರೆ.
ದೇಶದಲ್ಲಿ ಹೊಸ ಗ್ಯಾಸ್ ಸಂಪರ್ಕ ಪಡೆದುಕೊಳ್ಳಲು ಇರುವ ಪ್ರಕ್ರಿಯೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗುವುದು ಮತ್ತು ಕನಿಷ್ಠ ದಾಖಲೆ ಪತ್ರಗಳನ್ನು ಪಡೆದುಕೊಂಡು ಹೊಸ ಅಡುಗೆ ಅನಿಲ ಸಂಪರ್ಕ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
minimum documentation and records 2 ವರ್ಷಗಳಲ್ಲಿ 1 ಕೋಟಿ ಉಚಿತ ಸಿಲಿಂಡರ್ ವಿತರಣೆ
ಉಜ್ವಲಾ ಯೋಜನೆಯಡಿ ಭಾರತದಲ್ಲಿ ಈಗಾಗಲೇ 29 ಕೋಟಿ ಮನೆಗಳಿಗೆ ಅಡುಗೆ ಅನಿಲ ಲಭ್ಯವಾಗಿದೆ. ಇದೀಗ ಬಿಟ್ಟುಹೋಗಿರುವ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ಮುಂಬರು ಎರಡು ವರ್ಷಗಳಲ್ಲಿ ಹೊಸದಾಗಿ ಒಂದು ಕೋಟಿ ಉಚಿತ ಎಲ್.ಪಿ.ಜಿ ಸಂಪರ್ಕ ಒದಗಿಸಲಾಗುವುದು. ಈ ಮೂಲಕ ದೇಶದಲ್ಲಿ ಶೇ. 100ರಷ್ಟು ಶುದ್ಧ ಇಂಧನ ಬಳಕೆ ಮತ್ತು ಅಡುಗೆ ಅನಿಲ ಸಂಪರ್ಕ ಜಾಲ ಹೊಂದಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ
ಹೆಚ್ಚಿನ ಜನರಿಗೆ ಅಡುಗೆ ಅನಿಲ ಸಂಪರ್ಕ ಸುಲಭದಲ್ಲಿ ಪಡೆಯಲು ಅನುಕೂಲವಾಗುವಂತೆ ವಿಳಾಸದ ದೃಢೀಕರಣ, ದಾಖಲೆ ಪತ್ರಗಳ ವಿಚಾರದಲ್ಲಿ ಸುಧಾರಣಾ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಮನೆ ಸಮಪೀದ ಯಾವುದೇ ಡೀಲರ್ ಗಳಿಂದ ರಿಫಿಲ್ ಬುಕ್ ಮಾಡಲು ಅವಕಾಶವನ್ನು ಶೀಘ್ರದಲ್ಲಿ ಪರಚಿಯಿಸಲಾಗುತ್ತದೆ ಎಂದು ಕಪೂರ್ ತಿಳಿಸಿದ್ದಾರೆ.
ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಹೊಸದಾಗಿ ರೂಪಿಸಲಾಗುವ ಏಕೀಕೃತ ಸಾಫ್ಟ್ ವೇರ್ ಮೂಲಕ ಅಂತರ ಕಂಪನಿಯ ವಲಸೆ ಕೂಡ ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.
ಪಿಂಚಣಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ
ವೃದ್ಯಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ ಪಡೆಯುವವರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬದನ್ನು ಚೆಕ್ ಮಾಡಲು ಈ
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಂಚಣಿ ಪಡೆಯುವವರ ಪಟ್ಟಿಯಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಪ್ರದೇಶವಾರು ಪಿಂಚಣಿ ಮಾಹಿತಿ ಕೆಳಗಡೆ ನಿಮಗೆ ಗ್ರಾಮೀಣ ಹಾಗೂ ನಗರ ಎಂಬ ಎರಡು ಆಯ್ಕೆಗಳು ಇರುತ್ತವೆ. ನೀವು ಗ್ರಾಮಾಂತರ ಪ್ರದೇಶದವರಾಗಿದ್ದರೆ ಗ್ರಾಮೀಣ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನೀವು ಆಯ್ಕೆ ಮಾಡಿಕೊಂಡ ಹೋಬಳಿಯಲ್ಲಿಯಾವ ಯಾವ ಗ್ರಾಮಗಳು ಬರುತ್ತವೆ. ಆ ಪಟ್ಟಿ ಕಾಣಿಸುತ್ತದೆ. ಅಲ್ಲಿ ನಿಮ್ಮ ಊರು ಆಯ್ಕೆಮಾಡಿಕೊಳ್ಳಬೇಕು. ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಂಚಣಿದಾರರ ಐಡಿ, ಪಿಂಚಣಿದಾರರ ಹೆಸರು, ತಂದೆಯ ಹೆಸರು, ವರ್ಗ, ಪಿಂಚಣಿ ಯೋಜನೆಯ ಹೆಸರು, ಯಾವಾಗಿನಿಂದ ಪಿಂಚಣಿ ಪಡೆಯುತ್ತಿದ್ದೀರಿ ಹಾಗೂ ನಿಮಗೆ ಎಷ್ಟು ಪಿಂಚಣಿ ಜಮೆಯಾಗುತ್ತಿದೆ ಎಂಬ ಮಾಹಿತಿ ಕಾಣಿಸುತ್ತದೆ.
ಪಿಂಚಣಿ ವಿವರಗಳು ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪಿಂಚಣಿ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.