ಮುಂದಿನ 2 ವರ್ಷಗಳಲ್ಲಿ 1 ಕೋಟಿ ಉಚಿತ ಎಲ್ ಪಿಜಿ ಸಂಪರ್ಕ ನೀಡಲು ಯೋಜಿಸಾಗಿದೆ. ಇದಕ್ಕಾಗಿ ಅಡುಗೆ ಅನಿಲ ದೊರೆಯುವ ಸ್ಥಳದ ಬಗ್ಗೆ ಯಾವುದೇ ಪುರಾವೆಯನ್ನು ಒತ್ತಾಯಿಸದೆ, ಕನಿಷ್ಠ ಗುರುತಿನ ದಾಖಲೆಗಳೊಂದಿಗೆ (minimum documentation and records) ನೀಡಲು ಯೋಜಿಸಲಾಗಿದೆ ಎಂದು ತೈಲ ಕಾರ್ಯದರ್ಶಿ ತರುಣ್ ಕಪೂರ್ ಹೇಳಿದ್ದಾರೆ.
ದೇಶದಲ್ಲಿ ಹೊಸ ಗ್ಯಾಸ್ ಸಂಪರ್ಕ ಪಡೆದುಕೊಳ್ಳಲು ಇರುವ ಪ್ರಕ್ರಿಯೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗುವುದು ಮತ್ತು ಕನಿಷ್ಠ ದಾಖಲೆ ಪತ್ರಗಳನ್ನು ಪಡೆದುಕೊಂಡು ಹೊಸ ಅಡುಗೆ ಅನಿಲ ಸಂಪರ್ಕ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಉಜ್ವಲಾ ಯೋಜನೆಯಡಿ ಭಾರತದಲ್ಲಿ ಈಗಾಗಲೇ 29 ಕೋಟಿ ಮನೆಗಳಿಗೆ ಅಡುಗೆ ಅನಿಲ ಲಭ್ಯವಾಗಿದೆ. ಇದೀಗ ಬಿಟ್ಟುಹೋಗಿರುವ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ಮುಂಬರು ಎರಡು ವರ್ಷಗಳಲ್ಲಿ ಹೊಸದಾಗಿ ಒಂದು ಕೋಟಿ ಉಚಿತ ಎಲ್.ಪಿ.ಜಿ ಸಂಪರ್ಕ ಒದಗಿಸಲಾಗುವುದು. ಈ ಮೂಲಕ ದೇಶದಲ್ಲಿ ಶೇ. 100ರಷ್ಟು ಶುದ್ಧ ಇಂಧನ ಬಳಕೆ ಮತ್ತು ಅಡುಗೆ ಅನಿಲ ಸಂಪರ್ಕ ಜಾಲ ಹೊಂದಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಹೆಚ್ಚಿನ ಜನರಿಗೆ ಅಡುಗೆ ಅನಿಲ ಸಂಪರ್ಕ ಸುಲಭದಲ್ಲಿ ಪಡೆಯಲು ಅನುಕೂಲವಾಗುವಂತೆ ವಿಳಾಸದ ದೃಢೀಕರಣ, ದಾಖಲೆ ಪತ್ರಗಳ ವಿಚಾರದಲ್ಲಿ ಸುಧಾರಣಾ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಮನೆ ಸಮಪೀದ ಯಾವುದೇ ಡೀಲರ್ ಗಳಿಂದ ರಿಫಿಲ್ ಬುಕ್ ಮಾಡಲು ಅವಕಾಶವನ್ನು ಶೀಘ್ರದಲ್ಲಿ ಪರಚಿಯಿಸಲಾಗುತ್ತದೆ ಎಂದು ಕಪೂರ್ ತಿಳಿಸಿದ್ದಾರೆ.
ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಹೊಸದಾಗಿ ರೂಪಿಸಲಾಗುವ ಏಕೀಕೃತ ಸಾಫ್ಟ್ ವೇರ್ ಮೂಲಕ ಅಂತರ ಕಂಪನಿಯ ವಲಸೆ ಕೂಡ ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.