ಮೊಬೈಲ್ ನಲ್ಲಿಯೇ ಪಡೆಯಿರಿ ಊರಿನ ಮ್ಯಾಪ್… ಇಲ್ಲಿದೆ ಮಾಹಿತಿ

Written by By: janajagran

Updated on:

Get your village map in your hand ಭಾರತ ನಕ್ಷೆ, ಕರ್ನಾಟಕ ಮ್ಯಾಪ್, ಜಿಲ್ಲೆಗಳ ಮ್ಯಾಪ್ ನೋಡಿದ್ದೀರಿ. ಜಿಲ್ಲೆಯ ಮ್ಯಾಪ್ ಗಳಲ್ಲಿ ತಾಲೂಕುಗಳು, ತಾಲೂಕಿನ ಮ್ಯಾಪ್ ನಲ್ಲಿ ಗ್ರಾಮಗಳ ಹೆಸರು, ಈ ಊರಿನ ವಿಶೇಷತೆ ಸೇರಿದಂತೆ ಇನ್ನಿತರ ಮಾಹಿತಿಗಳು ಸಿಗುತ್ತದೆ. ಆದರೆ ಈಗ ಗ್ರಾಮಗಳ ಮ್ಯಾಪ್ ಸಹ ಪಡೆಯಬಹುದು.

ಹೌದು, ಕಂದಾಯ ಇಲಾಖೆಯು ಈಗ ರಾಜ್ಯದ ಎಲ್ಲಾ ಗ್ರಾಮಗಳ ಮ್ಯಾಪ್  ತಯಾರಿಸಿದೆ. ಈ ಮ್ಯಾಪ್ ಪಡೆಯಲು ನೀವು ಯಾವುದೇ ಇಲಾಖೆಗೆ ಹೋಗಬೇಕಿಲ್ಲ. ಮನೆಯಲ್ಲಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿಯೇ ನೋಡಬಹುದು. ಮತ್ತು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು. ಇದರಲ್ಲಿ ನಿಮ್ಮ ಗ್ರಾಮದ ಅಕ್ಕಪಕ್ಕದ ಊರುಗಳ ಗಡಿರೇಖೆ, ಊರಿಗಿರುವ ರಸ್ತೆ, ಹಳ್ಳ, ನದಿ, ಕೆರೆ, ಎತ್ತಿನ ಬಂಡಿ, ಊರಿನ ಎಲ್ಲಾ ರೈತರ ಸರ್ವೆ ನಂಬರ್ ಸಮೇತ ಮ್ಯಾಪ್ ನಲ್ಲಿರುತ್ತದೆ. ಇದನ್ನು ಡೌನ್ಲೋಡ್ ಮಾಡಿಕೊಂಡು ಊರಿನ ದೇವಸ್ಥಾನ, ಭವನಗಳಲ್ಲಿ ದೊಡ್ಡ ಗಾತ್ರದಲ್ಲಿ ಪ್ರಿಂಟ್ ತೆಗೆದು ನೇತಾಹಾಕಬಹುದು. ಇದರಿಂದ ಊರಿನ ಜನರಿಗೆ ಸುಲಭವಾಗಿ ತಮ್ಮೂರಿನ ಮ್ಯಾಪ್ ನಲ್ಲಿ ಏನೇನಿದೆ ಎಂಬುದನ್ನು ಗುರುತಿಸಲು ಸಹಾಯವಾಗುತ್ತದೆ.

Get your village map in your hand ಊರಿನ ಮ್ಯಾಪ್ ಡೌನ್ಲೋಡ್ ಮಾಡುವುದು ಹೇಗೆ?

ಭೂ ಕಂದಾಯ ಇಲಾಖೆಯ

https://www.landrecords.karnataka.gov.in/service3/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಕಂದಾಯ ಇಲಾಖೆಯ ವೆಬ್ ಪೇಜ್ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಹೋಬಳಿ ಅಡಿಯಲ್ಲಿ ಬರುವ ಎಲ್ಲಾ ಗ್ರಾಮಗಳು ಅಲ್ಲಿ ಕಾಣುತ್ತವೆ. ವೆಬ್ ಪೇಜ್ ಹೋಬಳಿ ಆಯ್ಕೆ ಪಕ್ಕದಲ್ಲಿ ಮ್ಯಾಪ್ ಟೈಪ್ ನಲ್ಲಿ  ಕ್ಯಾಡಸ್ಟ್ರಾಲ್ ಮ್ಯಾಪ್ ಆಯ್ಕೆ ಮಾಡಿಕೊಳ್ಳಬೇಕು.  ಆಗ ನಿಮ್ಮೂರಿನ ಮುಂದುಗಡೆ ಪಿಡಿಎಫ್ ಫೈನ್ ಸಿಂಬಲ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ನಿಮಗೆ ಪಾಪ್ ಅಫ್ ಬ್ಲಾಕ್ ಮೆಸೆಜ್ ಬಂದರೆ ಅಲ್ಲಿ Always shows ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮೂರಿನ ಮ್ಯಾಪ್ ಓಪನ್ ಆಗುತ್ತದೆ.

ಇದನ್ನೂ ಓದಿ:ರೈತರಿಗೆ ಸಂತಸದ ಸುದ್ದಿ. ನಿಮ್ಮ ಮೊಬೈಲ್ ಮೂಲಕವೇ ಕ್ಷಣಾರ್ಧದಲ್ಲಿ (Lands measure in mobile) ಜಮೀನಿನ ಅಳತೆ ತಿಳಿಯುವುದು ಹೇಗೆ?… ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಮ್ಯಾಪ್ ನಲ್ಲಿ ನಿಮ್ಮೂರಿನ ಗಡಿರೇಖೆ, ಹಳ್ಳ, ಬೆಟ್ಟ, ಕೆರೆ, ನದಿಹರಿಯುವ ದಿಕ್ಕು, ಬಾವಿ, ನಿಮ್ಮೂರಿನ ಎಲ್ಲಾ ರೈತರ ಸರ್ವೆ ನಂಬರ್ , ನಿಮ್ಮೂರಿನ ಪಕ್ಕದ ಊರಿನ ಹೆಸರು ಸಮೇತ ಗಡಿರೇಖೆ ಸಹ ಕಾಣುತ್ತದೆ. ಗಡಿ ರೇಖೆಗಳನ್ನು ಹೇಗೆ ಗುರುತಿಸಬೇಕೆಂದುಕೊಂಡಿದ್ದೀರಾ… ಮ್ಯಾಪ್ ಎಡಗಡೆ ಸರ್ವೆ ನಂಬರಿಗೆ, ಹಳ್ಳ, ನದಿ, ಬೆಟ್ಟ, ಬಂಡಿ ರಸ್ತೆ ಹೀಗೆ ಒಂದೊಂದಕ್ಕೂ ಒಂದು ಮಾರ್ಕ್ ಮಾಡಲಾಗಿದೆ. ಆ ಆಧಾರದ ಮೇಲೆ ನೀವು ಸುಲಭವಾಗಿ ನಿಮ್ಮೂರಿನ ಮ್ಯಾಪ್ ನಲ್ಲಿ ಬರುವ ಎಲ್ಲಾ ಮಾಹಿತಿ ಗುರುತಿಸಬಹುದು.

Leave a Comment