ರೈತ ಬಾಂಧವರಿಗಿಲ್ಲಿದೆ ಸಂತಸದ ಸುದ್ದಿ. ನೀವು ನಿಮ್ಮ ಜಮೀನು, ಜಾಗ, ಸೈಟ್ ಸೇರಿದಂತೆ ಇನ್ನಿತರ ಯಾವುದೇ ಜಾಗವನ್ನು ಯಾರ ಸಹಾಯವು ಇಲ್ಲದೆ ಅಳತೆ ಮಾಡಿಕೊಳ್ಳಬಹುದು. ಇದಕ್ಕಾಗಿ ಯಾವ ಹಗ್ಗ, ಕೋಲು ಬೇಕಾಗಿದಿಲ್ಲ. ನಿಮ್ಮ ಮೊಬೈಲ್ ಒಂದಿದ್ದರೆ ಸಾಕು, ಕ್ಷಣಾರ್ಧದಲ್ಲಿ ಮೊಬೈಲ್ ಜಿಪಿಎಸ್ ಸಹಾಯದ ಮೂಲಕ (Landsite measure in mobile) ಸ್ಥಳದ ಅಳತೆಯನ್ನು ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.

ನಿಮ್ಮ ಮೊಬೈಲ್ ನ ಪ್ಲೇಸ್ಟೋರ್ ದಿಂದ ಅಥವಾ ಗೂಗಲ್ ದಿಂದಲೂ ಜಿಪಿಎಸ್ ಫೀಲ್ಡ್ ಏರಿಯಾ ಮೀಷರ್ (GPS Fields Area measure ) ಆ್ಯಪ್ ನ್ನು ಡೌನ್ಲೋಡ್ ಮಾಡಿ ಇನ್ ಸ್ಟಾಲ್ ಮಾಡಿಕೊಂಡನಂತರ ಜಿಪಿಎಸ್ ಆಫಷನ್ ಆನ್ ಮಾಡಿಕೊಳ್ಳಬೇಕು.

ಜಿಪಿಎಸ್ ಫೀಲ್ಟ್ ಏರಿಯಾ ಮೀಷರ್ ಆ್ಯಪ್ ಎಡಗಡೆ ಮೂರು ಲೈನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ ಸೆಟಿಂಗ್ ಸೆಲೆಕ್ಟ್ ಮಾಡಿಕೊಳ್ಳಬೇಕು. ಮೀಸರ್ ಮೆಂಟ್ ಸಿಸ್ಟಮ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಇಂಪೀರಿಯಲ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಏರಿಯಾ ಯೂನಿಟ್ಸ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಎಫ್.ಟಿ 2 ಮತ್ತು ಎಸಿ ಬಾಕ್ಸ್ ಸೆಲೆಕ್ಟ್ ಆಗಿರಬೇಕು.

ಒಂದು ವೇಳೆ ಸೆಲೆಕ್ಟ್ ಆಗಿರದಿದ್ದರೆ ಅವರೆಡು ಬಾಕ್ಸನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಡಿಸ್ಟಂಸ್ ಯೂನಿಟ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಎಫ್.ಟಿ (ಫೀಟ್) ಸೆಲೆಕ್ಟ್ ಮಾಡಿಕೊಳ್ಳಬೇಕು. ಆಮೇಲೆ ಬ್ಯಾಕ್ ಬರಬೇಕು. ಇಲ್ಲಿ ಜಿಪಿಎಸ್ ಮೂಲಕ ಜಮೀನನ್ನು ಸರ್ಚ್ ಮಾಡಿಕೊಳ್ಳಬೇಕು. ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ ಏರಿಯಾ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಮ್ಯಾನುವಲ್ ಮೀಸರಿಂಗ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಅಂದರೆ ನಾವಿದ್ದ ಏರಿಯಾ  ಸುತ್ತಮುತ್ತ ಜಮೀನಿನ ಕಾರ್ನರ್ ಸಹ ಕಾಣುತ್ತದೆ. ಅದು ಚೌಕಾಕಾರವಿರಬಹುದು. ಆಯಾತಾಕಾರವಿರಬಹುದು. ಅಥವಾ ತ್ರಿಕಾನೋಕಾರದಲ್ಲಿರಬಹುದು.

ಅಲ್ಲಿ ನೀವು ಜಿಪಿಎಸ್ ಪೈಂಟ್  ನಿಂದ ಸೆಲೆಕ್ಟ್ ಮಾಡಿಕೊಳ್ಭಬೇಕು.  ಝೂಮ್ ಮಾಡಿಕೊಂಡು ಕರೆಕ್ಟಾಗಿ ಸೆಲೆಕ್ಟ್ ಮಾಡಿಕೊಳ್ಳಬೇಕು. ಆಗ ಅಲ್ಲಿ ಎಷ್ಟು ಎಕರೆ ಇದೆ ಎಂಬುದು ಕಾಣಿಸುತ್ತದೆ. ಅಷ್ಟೇ ಅಲ್ಲ, ಎಷ್ಟು ಸ್ಕವಾಯರ್ ಫೀಟ್ ನಲ್ಲಿದೆ ಎಂಬುದು ಸಹ ಕಾಣುತ್ತದೆ. ಜಿಪಿಎಸ್ ಸಹಾಯದಿಂದ ನಿಖರವಾಗಿ ನಿಮ್ಮ ಜಮೀನಿನ ಅಳತೆಯನ್ನು ಮಾಡಿಕೊಳ್ಳಬಹುದು.

ಜಿಪಿಎಸ್ ಫೀಲ್ಡ್ ಏರಿಯಾ ಮೀಷರ್ ಆ್ಯಪ್ ಮೂಲಕ ಕೇವಲ ಜಮೀನಷ್ಟೇ ಅಲ್ಲ, ನೀವಿದ್ದ ಮನೆಯ ಸ್ಥಳವನ್ನು ಸಹ ನಿಖರವಾಗಿ ಅಳತೆ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *