ನಿಮ್ಮ ಜಮೀನಿನ ಸರ್ವೆ ನಂಬರ್ ಮ್ಯಾಪ್ ಹೀಗೆ ಡೌನ್ಲೋಡ್ ಮಾಡಿ

Written by Ramlinganna

Updated on:

Download your village map ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಈಗ ಮೊಬೈಲ್ ನಲ್ಲೇ ಪಡೆಯಬಹುದು. ಹೌದು, ರೈತರು ಜಮೀನಿನ ಪಹಣಿ, ಮುಟೇಶನ್, ಖಾತಾ ಪ್ರತಿ ಪಡೆಯುವಂತೆ ಜಮೀನಿನ ಮ್ಯಾಪ್ ಸಹ ಮೊಬೈಲ್ ನಲ್ಲೇ ವೀಕ್ಷಿಸಬಹುದು ಹಾಗೂ ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.

ಏನಿದು ಊರಿನಲ್ಲಿರುವ ಜಮೀನಿನ ಮ್ಯಾಪ್?

ಕಂದಾಯ ಇಲಾಖೆಯು ರೈತರಿಗೆ ಜಮೀನಿಗೆ ಸಂಬಂಧಿಸಿದ ದಾಖಲೆಗಳು, ಮಾಹಿತಿಗಳು ಸುಲಭವಾಗಿ ಸಿಗಲೆಂಬ ಉದ್ದೇಶದಿಂದಾಗಿ ಎಲ್ಲವನ್ನು ಮೊಬೈಲ್ನಲ್ಲೇ ವೀಕ್ಷಿಸುವ ಹಾಗೂ ಡೌನ್ಲೋಡ್ ಮಾಡುವ ವ್ಯವಸ್ಥೆ ಒದಗಿಸಿದೆ. ಜಮೀನಿನ ಮ್ಯಾಪ್ ದಿಂದಾಗಿ ರೈತರು ಅಕ್ಕಪಕ್ಕದ ಸರ್ವೆ ನಂಬರ್ ಗಳು, ತಮ್ಮ ಜಮೀನಿಗೆ ಹೋಗಲು ಕಾಲುದಾರಿ, ಬಂಡಿದಾರಿ ಇದೆಯೋ ಇಲ್ಲವೋ ಹಾಗೂ ಅಕ್ಕಪಕ್ಕದಲ್ಲಿ ಹಳ್ಳಕೊಳ್ಳಗಳು, ನದಿಗಳು, ಸರೋವರಗಳು, ಗುಡಿಗುಂಡಾರಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುವುತ್ತದೆ.

Download your village map ಜಮೀನಿನ ಮ್ಯಾಪ್ ಹೇಗೆ ಡೌನ್ಲೋಡ್ ಮಾಡಬೇಕು?

ರೈತರು ತಮ್ಮೂರಿಗೆ ಸಂಬಂಧಿಸಿದ ಜಮೀನಿನ ಮ್ಯಾಪನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಈ

https://mahitikanaja.karnataka.gov.in/Revenue/RevenueVillageMap?ServiceId=1023&Type=TABLE%20&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.  ಆಗ ರೈತರಿಗೆ ತಮ್ಮೂರಿನ ಮ್ಯಾಪ್ ಓಪನ್ ಆಗುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಆಗ ಆ ಹೋಬಳಿ ವ್ಯಾಪ್ತಿಯಲ್ಲಿರುವ ಗ್ರಾಮಗಳು ಪಟ್ಟಿ ಕಾಣುತ್ತದೆ. ಅಲ್ಲಿ ನೀವು  ಯಾವ ಗ್ರಾಮದ ನಕ್ಷೆಯನ್ನು ಡೌನ್ಲೋಡ್ ಮಾಡಬೇಕೆಂದುಕೊಂಡಿದ್ದಾರೋ ಆ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು.  ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಇದಾದ ಮೇಲೆ ಇನ್ನೊಂದು ಪಟ್ಟಿ ಕಾಣುತ್ತದೆ.ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮದ ಮುಂದುಗಡೆ ನಕ್ಷೆ ಕಾಣುತ್ತದೆ. ಆ ನಕ್ಷೆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಒಂದೆರೆಡು ಸೆಕೆಂಡ್ ನಲ್ಲಿ ನಿಮ್ಮೂರಿನ ಮ್ಯಾಪ್ ಕಾಣುತ್ತದೆ.

ಊರಿನ ಮ್ಯಾಪ್ ನಲ್ಲಿ ಯಾವ ಯಾವ ಮಾಹಿತಿ ಇರುತ್ತದೆ?

ರೈತರು ಡೌನ್ಲೋಡ್ ಮಾಡಿಕೊಂಡ ಊರಿನ ಮ್ಯಾಪ್ ನಲ್ಲಿ ಆ ಊರಿನ ಸುತ್ತಮುತ್ತಲಿರುವ ಜಮೀನಿನ ಸರ್ವೆ ನಂಬರ್ ಗಳು ಕಾಣುತ್ತವೆ. ಆ ಊರಿಗೆ ಸಂಬಂಧಿಸಿದ ಎಲ್ಲಾ ರೈತರ ಜಮೀನಿನ ಸರ್ವೆ ನಂಬರ್ ಗಳು ಕಾಣುತ್ತವೆ. ಹಾಗೂ ಸರ್ವೆ ನಂಬರ್ ಬೌಂಡರಿ ಸಹ ಕಾಣುತ್ತದೆ.

ಯಾವ ಗ್ರಾಮ ಆಯ್ಕೆ ಮಾಡಿಕೊಂಡಿದ್ದೀರಾ ಆ ಗ್ರಾಮದ ಗಡಿ ರೇಖೆ, ಸರ್ವೆ ನಂಬರ್ ಗಡಿ ರೇಖೆ, ಹಿಸ್ಸಾ ನಂಬರುಗಳು, ಜಮೀನಿಗೆ ಹೋಗುವ ಕಾಲದಾರಿ, ಬಂಡಿ ದಾರಿ, ಡಾಂಬರ್ ರಸ್ತೆಗಳನ್ನು ಮಾರ್ಕ್ ಮಾಡಲಾಗಿರುತ್ತದೆ. ಮ್ಯಾಪ್ ಎಡಭಾಗದಲ್ಲಿ ಯಾವ ಮಾಹಿತಿಗೆ ಯಾವ ಮಾರ್ಕ್ ಇರುತ್ತದೆ ಎಂಬ ಪಟ್ಟಿ ತೋರಿಸಲಾಗಿರುತ್ತದೆ.  ಅದರ ಪ್ರಕಾರ ನೀವು ನೋಡಬೇಕಾದ ಮಾಹಿತಿಯನ್ನು ಝೂಮ್ ಮಾಡಿ ಅತೀ ಸುಲಭವಾಗಿ ವೀಕ್ಷಿಸಬಹುದು.

ಇದನ್ನೂ ಓದಿ : ಬೆಳೆ ವಿಮೆ ಮಾಡಿಸಿದ ನಂತರ ರೇತರೇನು ಮಾಡಬೇಕು? ರೈತರಿಗೆ ಗೊತ್ತಿರಲೇಬೇಕಾದ ಕೆಲವು ಮಾಹಿತಿಗಳ ವಿವರ ಇಲ್ಲಿದೆ

ನೀವು ಆಯ್ಕೆ ಮಾಡಿಕೊಂಡ ಗ್ರಾಮದ ಸುತ್ತಮುತ್ತಲೂ ಹಳ್ಳಗಳಿದ್ದರೆ ಅದನ್ನೂತೋರಿಸಲಾಗಿರುತ್ತದೆ. ಬೆಟ್ಟಗಳಿದ್ದರೆ ಬೆಟ್ಟ, ನಿಮ್ಮೂರಿನ ಸುತ್ತಮುತ್ತಲಿರುವ ಗ್ರಾಮ ಗಳ ಹೆಸರು ಬರೆದಿರಲಾಗಿರುತ್ತದೆ. ಆ ಗ್ರಾಮಕ್ಕೆ ಹೋಗುವ ರಸ್ತೆಯ ಮಾಹಿತಿ ಸಹ ಇರುತ್ತದೆ. ಇದಾದ ಮೇಲೆ ಹಳ್ಳಕೊಳ್ಳಗಳು, ನದಿಗಳ ನೀರು ಹರಿಯುವ ದಿಕ್ಕು ಅಂದರೆ ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಹರಿದುಹೋಗುತ್ತಿದೆ  ಎಂಬ ಮಾಹಿತಿಯನ್ನು ಮಾರ್ಕ್ ಮಾಡಲಾಗಿರುತ್ತದೆ. ನಿಮ್ಮೂರಿಗೆ ನಿಮಗೆ ಗೊತ್ತಿರದ ಹಳೇ ಬಾವಿಗಳಿದ್ದರೆ ಯಾವ ಭಾಗದಲ್ಲಿ ಹಳೇ ಬಾವಿಗಳಿತ್ತು ಎಂಬ ಮಾಹಿತಿಯನ್ನು ಸಹ ಮ್ಯಾಪ್ ನಲ್ಲಿ ತೋರಿಸಲಾಗಿರುತ್ತದೆ. ಈ ಎಲ್ಲಾ ಮಾಹಿತಿಗಳನ್ನು ರೈತರು ಕುಳಿತಲ್ಲಿಯೇ ತಮ್ಮ ಮೊಬೈಲ್ ನಲ್ಲಿ ಪಡೆಯಬಹುದು. ಇದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ. ರೈತರ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ಗುರುತಿಸಬಹುದು.

Leave a Comment