ರೈತರು, ಸಾರ್ವಜನಿಕರು ಈಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ತಮ್ಮ ಆಸ್ತಿಗಳನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಯಾರ ಸಹಾಯವೂ ಇಲ್ಲದೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳನ್ನು ಇ-ಸ್ವತ್ತು ಅಡಿಯಲ್ಲಿ ಚೆಕ್ ಮಾಡಬಹುದು.
ಇ-ಸ್ವತ್ತು ಎಂದರೇನು?
ಇ-ಸ್ವತ್ತು ತಂತ್ರಾಂಶ ಗ್ರಾಮೀಣ ಪ್ರದೇಶದಲ್ಲಿ ಕೃಷಿಯೇತರ ಆಸ್ತಿಗಳ ನಿರ್ವಹಣೆಗೆ ಸರ್ಕಾರ ರೂಪಿಸಿರುವ ಇ ಆಡಳಿತ ಪರಿಹಾರವಾಗಿದೆ. ಇ ಸ್ವತ್ತು ಮೂಲಕ ರಾಜ್ಯಾದ್ಯಂತ ಕೃಷಿಯೇತರ ಆಸ್ತಿಗಳ ನಿರ್ವಹಣೆ ಮಾಡಲಾಗುವುದು. ಇ-ಸ್ವತ್ತು ತಂತ್ರಾಂಶವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಜಾರಿಗೊಳಿಸಲಾಗಿದೆ..
ಈ ಸ್ವತ್ತು ಪೋರ್ಟಲ್ ನಿಂದ ನೀವು ಫಾರ್ಮ್ 9 ಮತ್ತುಫಾರ್ಮ್ 11ಬಿ ಎರಡೂ ಪ್ರಮುಖ ದಾಖಲೆಗಳನ್ನು ನೋಡಬಹುದು ಹಾಗೂ ಡೌನ್ಲೋಡ್ ಮಾಡಿಕೊಳ್ಳಬಹುದು.
ಏನಿದು ಫಾರ್ಮ -9 ಮತ್ತು ಫಾರ್ಮ್ 11ಬಿ?
ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕೃಷಿಯೇತರ ಆಸ್ತಿಗಳಿಗಾಗಿ ರಚಿಸಿರುವ ರೂಪಗಳನ್ನು ಫಾರ್ಮ 9 ಮತ್ತು ಫಾರ್ಮ 11ಬಿ ಎನ್ನುವರು. ವರು.ಫಾರ್ಮ 9 ಮತ್ತು 11ಬಿ ನ್ನು ಆಸ್ತಿ ತೆರಿಗೆ ಸಂಗ್ರಹಣೆಗಾಗಿ ಬಳಸಲಾಗುತ್ತದೆ. ಗ್ರಾಮ ಪಂಚಾಯತಿ ವಿಧಿಸುವ ಆಸ್ತಿ ತೆರಿಗೆ ಪಾವತಿಸಲು ಈ ದಾಖಲೆ ಕಡ್ಡಾಯವಾಗಿದೆ. ಆಸ್ತಿ ಮಾರಾಟ ಮಾಡುವಾಗ ಈ ದಾಖಲೆಗಳು ಅಗತ್ಯವಾಗಿರುತ್ತದೆ.
ಇ ಸ್ವತ್ತು ಅಡಿಯಲ್ಲಿ ಆಸ್ತಿಗಳ ಮಾಲೀಕರ ವಿವರಗಳನ್ನು ಸೇರ್ಪಡೆ ಮಾಡಲಾಗಿರುತ್ತದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ನಿಮ್ಮ ಜಮೀನು ಇ-ಸ್ವತ್ತು ಅಡಿಯಲ್ಲಿ ಸೇರ್ಪಡೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೊಲ್ನಲ್ಲೇ ಚೆಕ್ ಮಾಡಬಹುದು.
ಇ-ಸ್ವತ್ತು ಆಸ್ತಿ ಮೊಬೈಲ್ ನಲ್ಲೇ ಚೆಕ್ ಮಾಡುವುದು ಹೇಗೆ?
ಸಾರ್ವಜನಿಕರು ತಮ್ಮ ಆಸ್ತಿಗಳನ್ನು ಚೆಕ್ ಮಾಡಲು ಈ
https://e-swathu.kar.nic.in/(S(djjxxcprxrgf1t0byaqgyj4c))/Login.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ ಸ್ವತ್ತು ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಆಸ್ತಿಗಳ ಶೋಧನೆ (Search Your Property) ಮೇಲೆ ಕ್ಲಿಕ್ ಮಾಡಬೇಕು. ಆಗ ಫಾರ್ಮ 9 ಮತ್ತು ಫಾರ್ಮ 11ಬಿ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ಎರಡೂ ಕಡೆ ಫಾರ್ಮ 9 ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಂಡನತರ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಪ್ರಾಪರ್ಟಿ ಐಡಿ ಗೊತ್ತಿಲ್ಲದಿದ್ದರೆ ನಿಮ್ಮ ಹೆಸರು ನಮೂದಿಸಿ All ಆಯ್ಕೆಮಾಡಿಕೊಂಡು ಸರ್ಚ್ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮ್ಮ ಆಸ್ತಿಯ ಪ್ರಾಪರ್ಟಿ ಐಡಿ ಕಾಣುತ್ತದೆ. ಅದನ್ನು ಕಾಪಿ ಮಾಡಿಕೊಂಡು Property ID ಬಾಕ್ಸ್ ನಲ್ಲಿ ಪೇಸ್ಟ್ ಮಾಡಬೇಕು. ನಂತರ Printed forms ಆಯ್ಕೆ ಮಾಡಿಕೊಳ್ಳಬೇಕು . ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿಡಾಕುಮೆಂಟ್ ನಂಬರ್, ಪ್ರಿಂಟೆಡ್ ಡೇಟ್, ಪ್ರಾಪರ್ಟಿ ಐಡಿ, ಮಾಲೀಕರ ಹೆಸರು, ಗ್ರಾಮ, ಸರ್ವೆ ನಂಬರ್ ಹಾಗೂ ಪ್ಲಾಟ್ ನಂಬರ್ ಕಾಣುತ್ತದೆ.
ಇದನ್ನೂ ಓದಿ : ಮೊಬೈಲ್ ನಲ್ಲೇ ವೋಟರ್ ಐಡಿ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ ಇಲ್ಲಿದೆ
ಡಾಕುಮೆಂಟ್ ನಂಬರ್ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ Form 9 ಡೌನ್ಲೋಡ್ ಆಗುತ್ತದೆ. ಅದೇ ಡಾಕುಮೆಂಟ್ ನಂಬರ್ ಕಾಪಿ ಮಾಡಿಕೊಳ್ಳಬೇಕು. ಅದೇ ಪಾಸ್ವರ್ಡ್ ಆಗಿರುತ್ತದೆ. ಡೌನ್ಲೋಡ್ಆದ ಫೈಲ್ ಪಿಡಿಎಫ್ ಫೈಲ್ ನಲ್ಲಿರುತ್ತದೆ. ಅದನ್ನು ಓಪನ್ ಮಾಡುವಾಗ ಪಾಸ್ವರ್ಡ್ ಕೇಳಲಾಗುತ್ತದೆ. ನೀವು ಕಾಪಿ ಮಾಡಿಕೊಂಡ ಡಾಕುಮೆಂಟ್ ನಂಬರನ್ನು ಅಲ್ಲಿಪೇಸ್ಟ್ ಮಾಡಬೇಕು. ಆಗ ನಿಮ್ಮ ಆಸ್ತಿಯ ಫಾರ್ಮ್ 9 ಓಪನ್ ಆಗುತ್ತದೆ.