10 month farmer training : ರೈತರ ಮಕ್ಕಳಿಗೆ 10 ತಿಂಗಳ ಕಾಲ ಉಚಿತ ತರಬೇತಿ ನೀಡಲು ರಾಜ್ಯದ ರೈತರ ಅರ್ಜಿ ಆಹ್ವಾನಿಸಲಾಗಿದೆ. ಹೌದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ತೋಟಗಾರಿಕೆ ಇಲಾಖೆಯ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ಕಾಲ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
2026-27ನೇ ಸಾಲಿನ ತರಬೇತಿಯನ್ನ 2026ರ ಮೇ 2 ರಿಂದ 2027ರ ಫೆಬ್ರವರಿ 28 ರವರೆಗೆ ತರಬೇತಿ ನೀಡಲಾಗುವುದು. ಪಹಣಿ ಹೊಂದಿರುವ ರೈತರ ಮಕ್ಕಳಿಗೆ ತರಬೇತಿ ಆಯೋಜಿಸಲಾಗಿದೆ. ತರಬೇತಿ ಪಡೆಯಲಿಚ್ಚಿಸುವವರು ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿರಬೇಕು.
ಈ ತರಬೇತಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಕನ್ನಡದಲ್ಲಿ ಮಾತ್ರ ಹೇಳಲಾಗುತ್ತದೆ. ಆದ್ದರಿಂದ ಅಭ್ಯರ್ಥಿಯು ಕನ್ನಡ ಓದುವುದು, ಬರೆಯುವುದು ಹಾಗೂ ಮಾತನಾಡುವುದನ್ನು ತಿಳಿದಿರಬೇಕು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 30 ವಯೋಮಾನದೊಳಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಾಗಿದ್ದಲ್ಲಿ 18 ರಿಂದ 30 ವರ್ಷ ಹಾಗೂ ಮಾಜಿ ಸೈನಿಕರಾದಲ್ಲಿ 35 ರಿಂದ 65 ವಯೋಮಾನದೊಳಗಿರಬೇಕು. ಈ ತರಬೇತಿಯು ರೈತರ ಮಕ್ಕಳಿಗಾಗಿ ಇರುವುದರಿಂದ ಅಭ್ಯರ್ಥಿಯ ತಂದೆ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು. ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಪಗ್ಗೆ ಪಹಣಿಯನ್ನು ನೀಡುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ಪ್ರಾಯೋಗಿಕ ತರಗತಿಗಳಲ್ಲಿ ತೋಟದ ಕೆಲಸಗಳನ್ನು ಮಾಡುವಷ್ಟು ದೃಢಕಾಯರಾಗಿರಬೇಕು. ಮಾಜಿ ಸೈನಿಕರು ಸಾಗುವಳಿ ಜಮೀನು ಹೊಂದಿರುವ ಬಗ್ಗೆ ಪಹಣಿಯನ್ನು ನೀಡುವುದು.
ಇದನ್ನೂ ಓದಿ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಯಾವ ಪಾಠಗಳಿಂದ ಪ್ರಶ್ನೆ ಬರುತ್ತವೆ? ಇಲ್ಲಿದೆ ಮಾಹಿತಿ
ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 1750 ರೂಪಾಯಿಗಳ ಮಾಸಿಕ ಶಿಷ್ಯವೇತನ (ಮಾಜಿ ಸೈನಿಕರನ್ನು ಹೊರತುಪಡಿಸಿ) ವನ್ನು ನೀಡಲಾಗುವುದು.
ಶಿಷ್ಯವೇತನವನ್ನು ಅಭ್ಯರ್ಥಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಸದರಿ ಶಿಷ್ಯವೇತನದಲ್ಲಿ ಪ್ರತಿ ತಿಂಗಳು ಆಯ್ಕೆಯಾಗುವ ಇಬ್ಬರು ವೀಕ್ಷಕರು ಊಟದ ವ್ಯವಸ್ಥೆಗಳಾದ ವಿವಿಧ ರೀತಿಯ ಭೋಜನ ಮತ್ತು ಗುಣಮಟ್ಟದ ಆಹಾರವನ್ನು ನೀಡುವ ನಿರ್ವಹಣೆಯನ್ನು ಮತ್ತು ಶಿಷ್ಯವೇತನದಲ್ಲಿಯೇ ವೆಚ್ಚ ಭರಿಸುವ ಜವಾಬ್ದಾರಿಯನ್ನು ಅಭ್ಯರ್ಥಿಗಳೇ ವಹಿಸಬೇಕು. ಪ್ರತಿ ವಿದ್ಯಾರ್ಥಿಯು ತಮ್ಮ ಸ್ವಂತ ಖರ್ಚಿನಲ್ಲಿ ಹಸಿರು ಬಣ್ಣದ ಸಮವಸ್ತ್ರಗಳನ್ನು ಹೊಲಿಸಿಕೊಂಡು ತರಬೇತಿ ಸಮಯದಲ್ಲಿ ಕಡ್ಡಾಯವಾಗಿ ಧರಿಸಿಕೊಳ್ಳಬೇಕು. ಅಭ್ಯರ್ಥಿಯು ತರಬೇತಿಯ ಮಧ್ಯದಲ್ಲಿ ಬಿಟ್ಟು ಹೋದರೆ ಅದುವರೆಗೂ ಪಡೆದಿರುವ ಶಿಷ್ಯವೇತನವನ್ನು ಹಿಂದಿರುಗಿಸಲಾಗುವುದು.
ತರಬೇತಿಗೆ ಸೇರುವ ಪ್ರತಿ ಅಭ್ಯರ್ಥಿಯೂ ತರಬೇತಿ ಕೇಂದ್ರದ ವಸತಿ ಗೃಹದಲ್ಲಿ ತಂಗುವುದು ಕಡ್ಡಾಯವಾಗಿರುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಸುರಕ್ಷಿತ ವ್ಯವಸ್ಥೆ ಕಲ್ಪಿಸಲಾಗುವುದು.
ಅರ್ಜಿಗಳನ್ನು ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳಲ್ಲಿ ಪಡೆದುಕೊಳ್ಳಬಹುದು. ಏಪ್ರೀಲ್ 15 ರ ಸಂಜೆ 5.30 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಆಯಾ ತೋಟಗಾರಿಕೆ ಇಲಾಖೆಗಳಲ್ಲಿ ಸಂಪರ್ಕಿಸಬಹುದು.
10 month farmer training ತೋಟಗಾರಿಕೆ ತರಬೇತಿ ನೀಡಲು ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ ಜಿಲ್ಲೆಯ ತೋಟಗಾರಿಕೆ ಇಲಾಖೆ ವತಿಯಿಂದ ತೋಟಗಾರಿಕೆ ತರಬೇತಿ ಕೇಂದ್ರ ಲಾಲ್ ಬಾಗ್, ಬೆಂಗಳರು ಇಲ್ಲಿ 2026-27ನೇ ಸಾಲಿನಲ್ಲಿ ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಚಾಮರಾಜನಗರ ಜಿಲ್ಲೆಯಿಂದಲೂ ಅರ್ಜಿ ಆಹ್ವಾನ
ಚಾಮರಾಜನಗರ ತಾಲೂಕು ಕೃಷಿ ಇಲಾಖೆಯು ಆತ್ಮ ಯೋಜನೆಯಡಿ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮೂಲಕ ಗ್ರಾಮೀಣ ಯುವ ರೈತರಿಗೆ ರೈತ ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿ ನೀಡುವ ಸಲುವಾಗಿ ಸಹಾಯಧನ ಮತ್ತು ಬ್ಯಾಂಕ್ ಸಾಲ ಪಡೆಯಲು ಆಸಕ್ತ ಯುವ ರೈತ, ರೈತ ಮಹಿಳೆಯರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕಬ್ಬಿನಲ್ಲಿ ಒಂಟು ಕಣ್ಣಿನ ಸಸಿ ತಯಾರಿಕೆ, ಕಿರು ಉದ್ಯಮ ಮಾಡುವವರಿಗೆ ಭತ್ತ ನಾಟಿ ಮಾಡುವ ಯಂತ್ರ ಬಳಕೆ, ಎಣ್ಣೆಗಾಣ, ಅಕ್ಕಿ, ರಾಗಿ, ಖಾರದ ಪುಡಿ ಗಿರಣಿ, ಡ್ರೋನ್ ತಂತ್ರಜ್ಞಾನ, ಟ್ರ್ಯಾಕ್ಟರ್ ಚಾಲಿತ ಯಂತ್ರಗಳ ನಿರ್ವಹಣೆ, ಕೊಯ್ಲಿನೋತ್ತರ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ, ಜೇನು ಸಾಕಾಣಿಕೆ, ಅಣಬೆ ಬೇಸಾಯ, ಸಾವಯವ ಕೃಷಿ ಹೇನುಗಾರಿಕೆ, ಕೋಳಿ ಸಾಕಾಣಿಕೆ ಕುರಿತು ತರಬೇತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ https://horticulturedir.karnataka.gov.in
ಮುಖಾಂತರ ಅಥವಾ ಹತ್ತಿರದ ತೋಟಗಾರಿಕೆ ಕಚೇರಿಯಲ್ಲಿ ಪಡೆಯಬಹುದು.





