ರೈತರಿಗೆ ಉಚಿತವಾಗಿ ದೇಶಿ ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ

Written by Ramlinganna

Published on:

free hen chicks distribution : ಗ್ರಾಮೀಣ ರೈತ ಮಹಿಳೆಯರಿಗೆ ಉಚಿತವಾಗಿ ಕೋಳಿ ಮರಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, 2025-26 ನೇ ಸಾಲನಲ್ಲಿ ದೇಸಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಐದು ವಾರದ ಕೋಳಿ ಮರಿಗಳನ್ನು ರೈತ ಮಹಿಳೆಯಿರೆಗ ನೀಡಲಾಗುವುದು. ಹಾಗಾದರೆ ಅರ್ಜಿ ಎಲ್ಲಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ

ಹಾವೇರಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ 2025-26ನೇ ಸಾಲಿನಲ್ಲಿ ದೇಶಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಐದು ವಾರದ 20 ಕೋಳಿ ಮರಿಗಳನ್ನು ನೀಡಲಾಗುವುದು. ಒಟ್ಟು 99 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಹರು ನವೆಂಬರ್ 10 ಸಂಜೆ 5 ರೊಳಗಾಗಿ ಮುಖ್ಯ ಪಶು ವೈದ್ಯಾಧಿಕಾರಿಗಳು  ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಹಾವೇರಿ ಇಲ್ಲಿಗೆ ದ್ವಿ ಪ್ರತಿಯಲ್ಲಿ ಅರ್ಜಿ ಸಲ್ಲಿಸಬೇಕೆಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚಿತವಾಗಿ ಕೋಳಿ ಮರಿ ಹಾಗೂ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ

ಪಶುಪಾಲನಾ ಇಲಾಖೆಯ 2025-26ನೇ ಸಾಲಿನ ನಾನಾ ಯೋಜನೆಗಳಿಗೆ ಕುಂದಾಪುರ ತಾಲೂಕು ವ್ಯಾಪ್ತಿಯ ಆಸಕ್ತ ರೈತರ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ : ನಿಮ್ಮ ಜಮೀನಿನ ಮುಟೇಷನ್ ಮೊಬೈಲ್ ನಲ್ಲೇ ಹೀಗೆ ಚೆಕ್ ಮಾಡಿ ಡೋನ್ಲೋಡ್ ಮಾಡಿ

22 ಫಲಾನುಭವಿಗಳಿಗೆ  ಶೇಕಡಾ 50 ರ ಸಹಾಯಧನದಲ್ಲಿ ರಬ್ಬರ್ ನೆಲಹಾಸು, 5 ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರ, ಹಾಗೆಯೇ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ  ಸ್ವ ಸಹಾಯ ಸಂಘದ ಸದಸ್ಯರಿಗೆ ಒಬ್ಬರಿಗೆ ತಲಾ 20 ಕೋಲಿ ಮರಿಯಂತೆ ಮೀಸಲಾತಿ ಪಾಲನೆಯೊಂದಿಗೆ 99 ಅರ್ಹ ಫಲಾನುಭವಿಗಳಿಗೆ ಉಚಿತವಾಗಿ 5 ವಾರದ ಕೋಲಿ ಮರಿ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರ ರೈತರು ಅವಶ್ಯಕ ದಾಖಲೆಗಳೊಂದಿಗೆ ನವೆಂಬರ್ 15 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶು ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಅರುಣ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಣ್ಣ ಉದ್ದಿಮೆ ಸ್ಥಾಪಿಸಲು ರೈತರಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

ಕಲಬುರಗಿ ಮಹಾನಗರಪಾಲಿಕೆಯ ಶೇ. 24.10  ಅನುಮೋದಿತ ಕ್ರಿಯಾ ಯೋಜನೆ, ಎಸ್.ಎಫ್.ಸಿ (ಮುಕ್ತ ನಿಧಿ)   ಈ ಕೆಳಕಂಡ ಯೋಜನೆಯ ಪರಿಶಿಷ್ಟ ಪಂಗಡದ ಜನರ ಕಲ್ಯಾಣ ಕಾರ್ಯಕ್ರಮಗಳಡಿ 2025-26 ನೇ ಸಾಲಿಗೆ ಸೌಲಭ್ಯ ಪಡೆಯಲು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಆಡಳಿತ) ಅವರು ತಿಳಿಸಿದ್ದಾರೆ.

2025-26ನೇ ಸಾಲಿನ ಎಸ್.ಎಫ್.ಸಿ. (ಮುಕ್ತ ನಿಧಿ) ಯೋಜನೆಯಡಿ ಪರಿಶಿಷ್ಟ ಪಂಗಡದ ಜನರಿಗೆ ಸಣ್ಣ ಉದ್ದಿಮೆ ಸ್ಥಾಪಿಸಲು ಸಹಾಯಧನ (ಬ್ಯಾಂಕ್ ಮುಖಾಂತರ) ನೀಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು  ಪರಿಶಿಷ್ಟ ಪಂಗಡದವರಾಗಿರಬೇಕು. ಕಲಬುರಗಿ ನಗರ ನಿವಾಸಿಯಾಗಿರಬೇಕು. ಈ ಮೊದಲು ಮಹಾನಗರ ಪಾಲಿಕೆಯಿಂದ ಅಥವಾ ಸರ್ಕಾರದ ವಿವಿಧ ಯೋಜನೆಯಡಿ ಸೌಲಭ್ಯ  ಪಡೆದವರು ಪುನಃ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವಂತಿಲ್ಲ.

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಮಹಾನಗರ ಪಾಲಿಕೆಯ ಶೇ. 24.10 ಶಾಖೆಯಿಂದ ಹಾಗೂ ಆವಕ ಶಾಖೆಯಿಂದ ಕಚೇರಿ ಸಮಯದಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ದೃಢೀಕರಣದೊಂದಿಗೆ 2025ರ ಅಕ್ಟೋಬರ್ 31ರ ಸಂಜೆ 4.30 ಗಂಟೆಯೊಳಗಾಗಿ ಕಲಬುರಗಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ಶೇ. 24.10 ಶಾಖೆಯನ್ನು ಹಾಗೂ ಪಾಲಿಕೆಯ http://www.kalaburagicity.mrc.gov

 ವೆಬ್‌ಸೈಟ್‌ನ್ನು ಸಂಪರ್ಕಿಸಲು ಕೋರಲಾಗಿದೆ.

Leave a Comment